ಮೇಜಿನ ಮೇಲೆ ಮೆಸ್ಸಿ ಡಾನ್ಸ್; ಕಂಠಪೂರ್ತಿ ಕುಡಿದು, ಕುಣಿದು ಕುಪ್ಪಳಿಸಿದ ಅರ್ಜೇಂಟಿನಾ ತಂಡ! ವಿಡಿಯೋ

| Updated By: ಪೃಥ್ವಿಶಂಕರ

Updated on: Dec 19, 2022 | 12:37 PM

FIFA World Cup 2022: ಇಡೀ ಕಾರ್ಯಕ್ರಮ ಮುಗಿದ ಬಳಿಕ ಡ್ರೆಸಿಂಗ್​ ರೂಂಗೆ ತೆರಳಿದ ಅರ್ಜೇಂಟಿನಾ ತಂಡದ ಆಟಗಾರರು ಕಂಠಪೂರ್ತಿ ಕೂಡಿದು, ಅಲ್ಲಿದ್ದ ಟೇಬಲ್​ಗಳ ಮೇಲೆ ಹತ್ತಿ ಕುಣಿದು ಕುಪ್ಪಳಿಸಿದ್ದಾರೆ.

ಮೇಜಿನ ಮೇಲೆ ಮೆಸ್ಸಿ ಡಾನ್ಸ್; ಕಂಠಪೂರ್ತಿ ಕುಡಿದು, ಕುಣಿದು ಕುಪ್ಪಳಿಸಿದ ಅರ್ಜೇಂಟಿನಾ ತಂಡ! ವಿಡಿಯೋ
ಅರ್ಜೇಂಟಿನಾ ತಂಡ
Follow us on

ಪ್ರತಿಯೊಬ್ಬ ಫುಟ್ಬಾಲ್ ಆಟಗಾರನೂ ಫಿಫಾ ವಿಶ್ವಕಪ್ (FIFA World Cup) ಗೆಲ್ಲುವ ಕನಸಿನೊಂದಿಗೆಯೇ ತನ್ನ ವೃತ್ತಿ ಜೀವನವನ್ನು ಆರಂಭಿಸುತ್ತಾನೆ. ಇದರಲ್ಲಿ ಕೆಲವೇ ಕೆಲವು ಆಟಗಾರರು ತಮ್ಮ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಅನೇಕ ಶ್ರೇಷ್ಠ ಆಟಗಾರರು ಈ ಪ್ರಶಸ್ತಿಯನ್ನು ಗೆಲ್ಲದೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಇಂತಹದೊಂದು ಕನಸನ್ನು ಬರೋಬ್ಬರಿ 36 ವಷರ್ಗಳ ಬಳಿಕ ನನಸು ಮಾಡಿಕೊಂಡಿರುವ ಅರ್ಜೇಂಟಿನಾ ತಂಡದ ಆಟಗಾರರ ಸಂತಸಕ್ಕೆ ಮಿತಿಯೇ ಇಲ್ಲದಂತ್ತಾಗಿದೆ. ಅದರಲ್ಲೂ ಇದು ನನ್ನ ಕೊನೆಯ ವಿಶ್ವಕಪ್ ಎಂದು ಹೇಳಿಕೊಂಡಿದ್ದ ಲಿಯೋನೆಲ್ ಮೆಸ್ಸಿ (Lionel Messi) ಗೆಲುವಿನ ಬಳಿಕ ಮೈದಾನದಲ್ಲಿ ಹುಚ್ಚೆದ್ದು ಕುಣಿದಿದ್ದರು. ಅಲ್ಲದೆ ಆಟಗಾರರು ಕೂಡ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತು ಇಡೀ ಕ್ರೀಡಾಂಗಣದಲ್ಲಿ ಮೆರವಣಿಗೆ ಮಾಡಿದ್ದರು. ನಂತರ ಇಡೀ ಕಾರ್ಯಕ್ರಮ ಮುಗಿದ ಬಳಿಕ ಡ್ರೆಸಿಂಗ್​ ರೂಂಗೆ ತೆರಳಿದ ಅರ್ಜೇಂಟಿನಾ ತಂಡದ ಆಟಗಾರರು ಕಂಠಪೂರ್ತಿ ಕೂಡಿದು, ಅಲ್ಲಿದ್ದ ಟೇಬಲ್​ಗಳ ಮೇಲೆ ಹತ್ತಿ ಕುಣಿದು ಕುಪ್ಪಳಿಸಿದ್ದಾರೆ.

ವಿಶ್ವಕಪ್ ಗೆಲುವಿನ ನಂತರ ಅರ್ಜೆಂಟೀನಾದ ಇಡೀ ತಂಡ ಮೈದಾನದಲ್ಲಿ ಭಾವುಕರಾಗುವುದರ ಜೊತೆಗೆ ಸಂತಸವನ್ನೂ ವ್ಯಕ್ತಪಡಿಸಿತ್ತು. 2014ರಲ್ಲಿ ಫೈನಲ್​ ತಲುಪಿದ್ದ ಅರ್ಜೇಂಟಿನಾದ ವಿಆಶ್ವಕಪ್ ಗೆಲ್ಲುವ ಕನಸಿಗೆ ಜರ್ಮನಿ ಬ್ರೇಕ್ ಹಾಕಿತ್ತು. ಆದರೆ ಈ ಬಾರಿ ವಿಶ್ವ ಚಾಂಪಿಯನ್ ಪಟ್ಟ ಪಡೆಯುವಲ್ಲಿ ಯಶಸ್ವಿಯಾಗಿದ್ದ ಇಡೀ ತಂಡ ಡ್ರೆಸ್ಸಿಂಗ್ ರೂಂನಲ್ಲಿ ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಿತು. ಅದರಲ್ಲೂ ತನ್ನ ಕಾಲ್ಚೆಳಕದಿಂದ ಫುಟ್ಬಾಲ್ ಜಗತ್ತಿನಲ್ಲಿ ಅನೇಕ ದೊಡ್ಡ ದಾಖಲೆಗಳು ಮತ್ತು ಟ್ರೋಫಿಗಳನ್ನು ಗೆದ್ದಿರುವ ಮೆಸ್ಸಿ, ಇದೊಂದು ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಈ ಟ್ರೋಫಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿರುವ ಮೆಸ್ಸಿ ಕೂಡ ತಂಡದ ಆಟಗಾರರೊಂದಿಗೆ ಕುಣಿದು ಕುಪ್ಪಳಿಸಿದರು.

ಅರ್ಜೇಂಟಿನಾ ಗೆಲುವಿಗೆ ಶರ್ಟ್​ ಬಿಚ್ಚಿ ಸಂಭ್ರಮಿಸಿದ ಮಹಿಳಾ ಅಭಿಮಾನಿ! ಭಾರೀ ದಂಡ ಅಥವಾ ಜೈಲು ಶಿಕ್ಷೆ ಖಚಿತ

2. ಮೇಜಿನ ಮೇಲೆ ಮೆಸ್ಸಿ ಡಾನ್ಸ್

ಅರ್ಜೆಂಟೀನಾ ತಂಡದ ಆಟಗಾರ ನಿಕೋಲಸ್ ಒಟ್ಮೆಂಡಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರು ಸಂಭ್ರಮಾಚರಣೆ ಮಾಡಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಇಡೀ ತಂಡ ಸಂತಸದ ಅಲೆಯಲ್ಲಿ ಕುಣಿದು ಕುಪ್ಪಳಿಸುವುದನ್ನು ಕಾಣಬಹುದಾಗಿದೆ. ಡ್ರೆಸಿಂಗ್ ಕೋಣೆಗೆ ವಿಶ್ವಕಪ್ ಟ್ರೋಫಿಯೊಂದಿಗೆ ಎಂಟ್ರಿಕೊಡುವ ಮೆಸ್ಸಿ, ಅಲ್ಲೆ ಇದ್ದ ಮೇಜಿನ ಮೇಲೆ ಏರಿ ಡಾನ್ಸ್ ಮಾಡಲು ಆರಂಭಿಸುತ್ತಾರೆ. ಮೆಸ್ಸಿಯನ್ನು ಕಂಡ ಇಡೀ ತಂಡ ಡಾನ್ಸ್ ಮಾಡಲು ಆರಂಭಿಸುತ್ತದೆ. ಇಡೀ ವಿಡಿಯೋದಲ್ಲಿ ಅರ್ಜೆಂಟೀನಾ ಆಟಗಾರರು ಹಾಡನ್ನು ಹಾಡುತ್ತಾ ಕುಣಿದು ಕುಪ್ಪಳಿಸುವುದನ್ನು ಕಾಣಬಹುದಾಗಿದೆ.

3. ರೋಚಕ ಪಂದ್ಯದಲ್ಲಿ ಫ್ರಾನ್ಸ್‌ ಕನಸು ಭಗ್ನ

ಫೈನಲ್ ಪಂದ್ಯದ ಮಟ್ಟಿಗೆ ಈ ಪಂದ್ಯ ರೋಚಕವಾಗಿತ್ತು. ಮೊದಲಾರ್ಧದಲ್ಲಿ ಅರ್ಜೆಂಟೀನಾ ಎರಡು ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿತು. 23ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಮೆಸ್ಸಿ ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಾಗೆ ಮುನ್ನಡೆ ತಂದುಕೊಟ್ಟರು. ನಂತರ 36ನೇ ನಿಮಿಷದಲ್ಲಿ ಏಂಜೆಲ್ ಡಿಮಾರಿಯಾ ಗೋಲು ಬಾರಿಸುವುದರೊಂದಿಗೆ ಅರ್ಜೆಂಟೀನಾಕ್ಕೆ 2-0 ಗೋಲುಗಳ ಮುನ್ನಡೆ ತಂದುಕೊಟ್ಟರು. ಹೀಗಾಗಿ ಪಂದ್ಯವನ್ನು ಮೆಸ್ಸಿಯ ತಂಡ ಭಾಗಶಃ ಗೆದ್ದಂತೆಯೇ ತೋರುತ್ತಿತ್ತು. ಆದರೆ ಫ್ರೆಂಚ್ ಸ್ಟಾರ್ ಕೈಲಿಯನ್ ಎಂಬಪ್ಪೆ 80 ಮತ್ತು 81 ನೇ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಿ ತಮ್ಮ ತಂಡವನ್ನು ಸಮಸ್ಥಿತಿಗೆ ತಂದರು. ಇದರ ನಂತರ, ಹೆಚ್ಚುವರಿ ಸಮಯದಲ್ಲಿ, ಮೆಸ್ಸಿ 108 ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಾಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ 10 ನಿಮಿಷಗಳ ನಂತರ ಎಂಬಾಪ್ಪೆ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಸ್ಕೋರ್ ಅನ್ನು ಸಮಗೊಳಿಸಿದರು. ಅಂತಿಮವಾಗಿ ಪೆನಾಲ್ಟಿ ಶೂಟೌಟ್​ನಲ್ಲಿ ಅರ್ಜೆಂಟೀನಾ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿ ವಿಶ್ವಕಪ್ ಎತ್ತಿಹಿಡಿಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:34 pm, Mon, 19 December 22