Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜೇಂಟಿನಾ ಗೆಲುವಿಗೆ ಶರ್ಟ್​ ಬಿಚ್ಚಿ ಸಂಭ್ರಮಿಸಿದ ಮಹಿಳಾ ಅಭಿಮಾನಿ! ಭಾರೀ ದಂಡ ಅಥವಾ ಜೈಲು ಶಿಕ್ಷೆ ಖಚಿತ

FIFA World Cup 2022: ಅಂತಿಮವಾಗಿ ಮೆಸ್ಸಿ ತಂಡ ಫ್ರಾನ್ಸ್ ತಂಡವನ್ನು ಮಣಿಸಿದಾಗ ಇಡೀ ಕ್ರೀಡಾಂಗಣವೇ ಹುಚ್ಚೆದ್ದು ಕುಣಿಯಿತು. ಈ ನಡುವೆ ಸಂತಸದ ಅಲೆಯಲ್ಲಿ ತೇಲುತ್ತಿದ್ದ ಅರ್ಜೇಂಟಿನಾ ತಂಡದ ಮಹಿಳಾ ಅಭಿಮಾನಿಯೊಬ್ಬರು ಕ್ರೀಡಾಂಗಣದಲ್ಲಿಯೇ ತಮ್ಮ ಶರ್ಟ್​ ಬಿಚ್ಚಿ ಸಂಭ್ರಮಾಚರಣೆ ಮಾಡಿದರು.

ಅರ್ಜೇಂಟಿನಾ ಗೆಲುವಿಗೆ ಶರ್ಟ್​ ಬಿಚ್ಚಿ ಸಂಭ್ರಮಿಸಿದ ಮಹಿಳಾ ಅಭಿಮಾನಿ! ಭಾರೀ ದಂಡ ಅಥವಾ ಜೈಲು ಶಿಕ್ಷೆ ಖಚಿತ
ಶರ್ಟ್​ ಬಿಚ್ಚಿ ಸಂಭ್ರಮಿಸಿದ ಮಹಿಳಾ ಫ್ಯಾನ್Image Credit source: itsgame7
Follow us
TV9 Web
| Updated By: ಪೃಥ್ವಿಶಂಕರ

Updated on:Dec 19, 2022 | 11:54 AM

ಕತಾರ್​ನಲ್ಲಿ ಒಂದು ತಿಂಗಳ ಕಾಲ ನಡೆದ ಫುಟ್ಬಾಲ್ ಹಬ್ಬಕ್ಕೆ (FIFA World Cup) ಅದ್ಧೂರಿ ತೆರೆ ಬಿದ್ದಿದೆ. ಫೈನಲ್ ಕದನದಲ್ಲಿ ಪೆನಾಲ್ಟಿ ಶೂಟೌಟ್‌ ಮೂಲಕ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಮಣಿಸಿದ ಅರ್ಜೇಂಟಿನಾ ತಂಡ (Argentina vs France) ಬರೋಬ್ಬರಿ 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿದೆ. ಬಹಳ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದವು. ಅದರಲ್ಲೂ ಏಕಾಂಗಿಯಾಗಿ ತಂಡವನ್ನು ಫೈನಲ್​ವರೆಗೂ ಕರೆತಂದಿದ್ದ ಮೆಸ್ಸಿಗೆ (Lionel Messi) ಈ ಗೆಲುವು ಬಹಳ ಮುಖ್ಯವಾಗಿತ್ತು. ಅಲ್ಲದೆ ಈ ಫೈನಲ್ ಪಂದ್ಯವನ್ನು ಮೆಸ್ಸಿ ಅಂತಾರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವೆಂದೆ ಹೇಳಲಾಗಿತ್ತು. ಹೀಗಾಗಿ ಮೆಸ್ಸಿಯ ಕೊನೆಯ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರೀಡಾಂಗಣವೇ ಅರ್ಜೇಂಟಿನಾ ತಂಡದ ಜೆರ್ಸಿಯಿಂದ ಕಂಗೊಳ್ಳಿಸುತ್ತಿತ್ತು. ಅಂತಿಮವಾಗಿ ಮೆಸ್ಸಿ ತಂಡ ಫ್ರಾನ್ಸ್ ತಂಡವನ್ನು ಮಣಿಸಿದಾಗ ಇಡೀ ಕ್ರೀಡಾಂಗಣವೇ ಹುಚ್ಚೆದ್ದು ಕುಣಿಯಿತು. ಈ ನಡುವೆ ಸಂತಸದ ಅಲೆಯಲ್ಲಿ ತೇಲುತ್ತಿದ್ದ ಅರ್ಜೇಂಟಿನಾ ತಂಡದ ಮಹಿಳಾ ಅಭಿಮಾನಿಯೊಬ್ಬರು ಕ್ರೀಡಾಂಗಣದಲ್ಲಿಯೇ ಟಾಪ್​ ಲೇಸ್​ ಆಗಿ ಕಾಣಿಸಿಕೊಂಡರು. ಅಲ್ಲದೆ ತಮ್ಮ ಶರ್ಟ್​ ಬಿಚ್ಚಿ ಸಂಭ್ರಮಾಚರಣೆ ಮಾಡಿದರು.

2. ಭಾರೀ ದಂಡ ಅಥವಾ ಜೈಲು ಶಿಕ್ಷೆ

ವಾಸ್ತವವಾಗಿ, ಅರ್ಜೇಂಟಿನಾ ಪರ ಮೊಂಟಿಯೆಲ್ ಗೋಲು ಗಳಿಸಿದ ನಂತರ ಅರ್ಜೆಂಟೀನಾದ ಮಹಿಳಾ ಅಭಿಮಾನಿಯೊಬ್ಬರು ಟಾಪ್​ ಲೆಸ್ ಆಗಿ ಕಾಣಿಸಿಕೊಂಡರು. ಇದನ್ನು​ ಟಿವಿ ಪರದೆಯ ಮೇಲೂ ತೋರಿಸಲಾಯಿತು. ಸಂತಸದ ಅಲೆಯಲ್ಲಿ ಮೈಮರೆತ ಈ ಮಹಿಳಾ ಅಭಿಮಾನಿಗೆ ಇದೀಗ ಸಂಕಷ್ಟ ಎದುರಾಗಿದೆ. ವಾಸ್ತವವಾಗಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ಕತಾರ್‌ ಸರ್ಕಾರ ಕೆಲವೊಂದು ನಿಯಮಗಳನ್ನು ಫಿಫಾ ವಿಶ್ವಕಪ್​ನಲ್ಲಿ ಕಡ್ಡಾಯಗೊಳಿಸಲಾಗಿತ್ತು. ಇದರಲ್ಲಿ ಪಂದ್ಯಾವಳಿಯ ಸಮಯದಲ್ಲಿ ಮಹಿಳೆಯರ ಉಡುಪುಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಲಾಗಿತ್ತು. ಅಲ್ಲದೆ ಮಹಿಳೆಯರು ಸಾರ್ವಜನಿಕವಾಗಿ ಸ್ಕರ್ಟ್​ (ಮೊಣಕಾಲು ಕಾಣಿಸುವಂತಹ ಬಟ್ಟೆಗಳನ್ನು ಧರಿಸುವಂತಿರಲಿಲ್ಲ) ಹಾಗೂ ಆಫ್-ಶೋಲ್ಡರ್ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿತ್ತು. ಒಂದು ವೇಳೆ ಈ ನಿಯಮಗಳನ್ನು ಉಲಂಘಿಸಿದರೆ ಭಾರಿ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸುವುದಾಗಿ ಕತಾರ್ ಸರ್ಕಾರ ಹೇಳಿತ್ತು.

ಮೆಸ್ಸಿ ಫಿಫಾ ವಿಶ್ವಕಪ್ ಗೆದ್ದಿದ್ದನ್ನು ಸಂಭ್ರಮಿಸಿದ ರಣಬೀರ್ ಕಪೂರ್-ಆಲಿಯಾ ಭಟ್; ನಡೆಯಿತು ಭರ್ಜರಿ ಪಾರ್ಟಿ  

3. ಈ ರೀತಿಯ ಬಟ್ಟೆಗಳನ್ನು ಧರಿಸುವಂತಿಲ್ಲ

ವಿಶ್ವಕಪ್‌ ನೋಡಲು ಕತಾರ್‌ಗೆ ಬರುವ ಮಹಿಳೆಯರು ಟೈಟ್ ಬಟ್ಟೆಗಳನ್ನು ಧರಿಸುವುದನ್ನು ಮತ್ತು ಅಂಗಾಂಗಗಳನ್ನು ತೋರಿಸುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿತ್ತು. ಆದರೆ ಈ ಕಟ್ಟುನಿಟ್ಟಿನ ನಿಯಮಗಳ ನಡುವೆಯೂ ಅರ್ಜೆಂಟೀನಾದ ಮಹಿಳಾ ಅಭಿಮಾನಿಯ ವೈರಲ್ ಟಾಪ್‌ಲೆಸ್ ವಿಡಿಯೋ ಇದೀಗ ಸಂಚಲನವನ್ನು ಸೃಷ್ಟಿಸಿದೆ. ಹೀಗಾಗಿ ಕತಾರ್‌ನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಮಹಿಳೆ ಜೈಲಿಗೆ ಹೋಗುವ ಸಾಧ್ಯತೆಗಳಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:42 am, Mon, 19 December 22

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ