5 ಪಂದ್ಯಗಳಲ್ಲಿ ಬರೋಬ್ಬರಿ 58 ಗೋಲುಗಳು: ಸೆಮಿಫೈನಲ್​ಗೇರಿದ ಭಾರತ

Asian Games: ಈ ಬಾರಿ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಹಾಕಿ ತಂಡ ಇದುವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ ಬಾರಿಸಿದ ಒಟ್ಟು ಗೋಲುಗಳ ಸಂಖ್ಯೆ ಬರೋಬ್ಬರಿ 58. ಇದೇ ವೇಳೆ ಹೊಡೆಸಿಕೊಂಡ ಗೋಲುಗಳ ಸಂಖ್ಯೆ ಕೇವಲ 5 ಮಾತ್ರ. ಅಂದರೆ ಮೊದಲ ಐದು ಪಂದ್ಯಗಳಲ್ಲಿ ಭಾರತ ತಂಡವು ಪಾರುಪತ್ಯ ಮೆರೆದಿದ್ದು, ಸೆಮಿಫೈನಲ್​ನಲ್ಲೂ ಗೆದ್ದು ಫೈನಲ್​ಗೇರುವ ವಿಶ್ವಾಸದಲ್ಲಿದೆ.

5 ಪಂದ್ಯಗಳಲ್ಲಿ ಬರೋಬ್ಬರಿ 58 ಗೋಲುಗಳು: ಸೆಮಿಫೈನಲ್​ಗೇರಿದ ಭಾರತ
Indian Hockey Team
Edited By:

Updated on: Oct 02, 2023 | 5:52 PM

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನ ಪುರುಷರ ಹಾಕಿ ಪಂದ್ಯಾಟದಲ್ಲಿ ಬಾಂಗ್ಲಾದೇಶ್ ತಂಡವನ್ನು ಮಣಿಸಿ ಭಾರತ ತಂಡವು ಸೆಮಿಫೈನಲ್​ಗೇರಿದೆ. ಆರಂಭದಿಂದಲೇ ಏಕಪಕ್ಷೀಯವಾಗಿ ಸಾಗಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮುನ್ಪಡೆ ಆಟಗಾರರು ಅದ್ಭುತ ಆಟ ಪ್ರದರ್ಶಿಸಿದರು.

ಆರಂಭದಲ್ಲೇ ಕಂಡು ಸಾಂಘಿಕ ಪ್ರದರ್ಶನದ ಫಲವಾಗಿ ನಾಯಕ ಹರ್ಮನ್​ಪ್ರೀತ್ ಸಿಂಗ್ 2ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರೆ, 4ನೇ ನಿಮಿಷದಲ್ಲಿ ಮತ್ತೊಂದು ಗೋಲುಗಳಿಸಿದರು. ಆರಂಭದಲ್ಲೇ ಭಾರತ ತಂಡ ಬಾರಿಸಿದ ಗೋಲುಗಳಿಂದ ಬಾಂಗ್ಲಾದೇಶ್ ಆಟಗಾರರು ಒತ್ತಡಕ್ಕೊಳಗಾದರು.

ಇದರ ಸಂಪೂರ್ಣ ಲಾಭ ಪಡೆದ ಮನ್​ದೀಪ್ ಸಿಂಗ್ 18ನೇ ನಿಮಿಷದಲ್ಲಿ 3ನೇ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ 23ನೇ ನಿಮಿಷದಲ್ಲಿ ಸಿಕ್ಕ ಅತ್ಯುತ್ತಮ ಪಾಸ್ ಅನ್ನು ಗೋಲ್ ಆಗಿ ಪರಿವರ್ತಿಸುವಲ್ಲಿ ಲಲಿತ್ ಕುಮಾರ್ ಉಪಾಧ್ಯಾಯ ಯಶಸ್ವಿಯಾದರು.

4-0 ಅಂತರದಿಂದ ಬೀಗಿದ್ದ ಟೀಮ್ ಇಂಡಿಯಾ ಪರ ಮನದೀಪ್ ಸಿಂಗ್ 24ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಇತ್ತ ಗೆಲುವು ಖಚಿತವಾಗುತ್ತಿದ್ದಂತೆ ಭಾರತೀಯ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು.

ಪರಿಣಾಮ 28ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಸ್ಟಿಕ್​ನಿಂದ ಗೋಲು ಬಂದರೆ, 32ನೇ ನಿಮಿಷದಲ್ಲಿ ಹರ್ಮನ್​ಪ್ರೀತ್ ಸಿಂಗ್ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಇನ್ನು 41ನೇ ನಿಮಿಷದಲ್ಲಿ ಅಭಿಷೇಕ್ ಗೋಲು ಬಾರಿಸಿದರೆ, 46ನೇ ನಿಮಿಷದಲ್ಲಿ ಮನ್​ದೀಪ್ ಸಿಂಗ್ ಮೂರನೇ ಗೋಲುಗಳಿಸಿದರು. ಇದರ ಬೆನ್ನಲ್ಲೇ 47ನೇ ನಿಮಿಷದಲ್ಲಿ ನೀಲಕಂಠ ಅವರ ಅತ್ಯಾಕರ್ಷಕ ಶಾಟ್ ಗೋಲಾಗಿ ಪರಿವರ್ತನೆಯಾಯಿತು. ಇದರೊಂದಿಗೆ ಭಾರತದ ಸ್ಕೋರ್ 10-0 ಅಂತರಕ್ಕೇರಿತು.

ಇದರ ಬೆನ್ನಲ್ಲೇ 56ನೇ ನಿಮಿಷದಲ್ಲಿ ಸುಮಿತ್ 11ನೇ ಯಶಸ್ಸು ತಂದುಕೊಟ್ಟರೆ, ಮರು ನಿಷಯದಲ್ಲೇ ಅಭಿಷೇಕ್ ಮತ್ತೊಂದು ಗೋಲುಗಳಿಸಿದರು. ಈ ಮೂಲಕ ಭಾರತ ತಂಡವು 12-0 ಅಂತರದಿಂದ ಬಾಂಗ್ಲಾದೇಶ್ ತಂಡವನ್ನು ಬಗ್ಗು ಬಡಿದು ಸೆಮಿಫೈನಲ್​ಗೇರಿದೆ.

ಬರೋಬ್ಬರಿ 58 ಗೋಲುಗಳು:

ಈ ಬಾರಿ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಹಾಕಿ ತಂಡ ಇದುವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ ಬಾರಿಸಿದ ಒಟ್ಟು ಗೋಲುಗಳ ಸಂಖ್ಯೆ ಬರೋಬ್ಬರಿ 58. ಇದೇ ವೇಳೆ ಹೊಡೆಸಿಕೊಂಡ ಗೋಲುಗಳ ಸಂಖ್ಯೆ ಕೇವಲ 5 ಮಾತ್ರ. ಅಂದರೆ ಮೊದಲ ಐದು ಪಂದ್ಯಗಳಲ್ಲಿ ಭಾರತ ತಂಡವು ಪಾರುಪತ್ಯ ಮೆರೆದಿದ್ದು, ಸೆಮಿಫೈನಲ್​ನಲ್ಲೂ ಗೆದ್ದು ಫೈನಲ್​ಗೇರುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಕಠಿಣ ಎದುರಾಳಿ ಯಾರು? ಇಲ್ಲಿದೆ ಮಾಹಿತಿ

ಏಷ್ಯನ್ ಗೇಮ್ಸ್​​ನಲ್ಲಿ ಭಾರತ ಹಾಕಿ ತಂಡದ ಪ್ರದರ್ಶನದ ಝಲಕ್ ಇಲ್ಲಿದೆ:

  1. ಭಾರತ vs ಉಜ್ಬೇಕಿಸ್ತಾನ್: 16-0
  2. ಭಾರತ vs ಸಿಂಗಾಪುರ್: 16-1
  3. ಭಾರತ vs ಜಪಾನ್: 4-2
  4. ಭಾರತ vs ಪಾಕಿಸ್ತಾನ್: 10-2.
  5. ಭಾರತ vs ಬಾಂಗ್ಲಾದೇಶ್: 12-0.