Asian Hockey Championship: ಹ್ಯಾಟ್ರಿಕ್ ಗೆಲುವು; ಹಾಲಿ ಚಾಂಪಿಯನ್ ಜಪಾನ್​ಗೆ ಸೋಲುಣಿಸಿದ ಭಾರತ ಹಾಕಿ ತಂಡ!

Asian Hockey Championship: ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಹ್ಯಾಟ್ರಿಕ್ ಗೆಲುವನ್ನು ಪೂರ್ಣಗೊಳಿಸಿದೆ. ಸೆಮಿಫೈನಲ್‌ಗೂ ಮುನ್ನ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ 6-0 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿತು.

Asian Hockey Championship: ಹ್ಯಾಟ್ರಿಕ್ ಗೆಲುವು; ಹಾಲಿ ಚಾಂಪಿಯನ್ ಜಪಾನ್​ಗೆ ಸೋಲುಣಿಸಿದ ಭಾರತ ಹಾಕಿ ತಂಡ!
ಭಾರತ ವಿರುದ್ಧ ಜಪಾನ್
Edited By:

Updated on: Dec 19, 2021 | 5:30 PM

ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಹ್ಯಾಟ್ರಿಕ್ ಗೆಲುವನ್ನು ಪೂರ್ಣಗೊಳಿಸಿದೆ. ಸೆಮಿಫೈನಲ್‌ಗೂ ಮುನ್ನ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ 6-0 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿತು. ಭಾರತದ ಪರ ಜರ್ಮನ್‌ಪ್ರೀತ್ ಸಿಂಗ್, ಶಂಶೇರ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ದಿಲ್‌ಪ್ರೀತ್ ಸಿಂಗ್ ಮತ್ತು ಸುಮಿತ್ ಗೋಲು ಗಳಿಸಿದರು. ಮತ್ತೊಂದೆಡೆ ಏಷ್ಯನ್ ಚಾಂಪಿಯನ್ ಜಪಾನ್​ಗೆ ಭಾರತದ ಗೋಲ್ ಕೀಪರ್ ಸೂರಜ್ ಕರ್ಕೇರಾ ಕಾವಲನ್ನು ಮುರಿಯಲು ಸಾಧ್ಯವಾಗಲಿಲ್ಲ. ಭಾರತ ಈಗಾಗಲೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಭಾರತ ತಂಡ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತ ರಾಬಿನ್ ಸುತ್ತಿನಲ್ಲಿ ನಾಲ್ಕು ಪಂದ್ಯಗಳ ನಂತರ ನಾಲ್ಕು ಗೆಲುವುಗಳು ಮತ್ತು ಒಂದು ಡ್ರಾದೊಂದಿಗೆ ಒಟ್ಟು 10 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರು. ಭಾರತದ ಮೊದಲ ಪಂದ್ಯ ಕೊರಿಯಾ ವಿರುದ್ಧ 2-2 ಡ್ರಾ ಆಗಿತ್ತು. ಆದರೆ ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ನಂತರ ಜಪಾನ್ ಅನ್ನು ಸೋಲಿಸಿದ ನಂತರ ಬಾಂಗ್ಲಾದೇಶವನ್ನು 9-0 ಅಂತರದಿಂದ ಸೋಲಿಸುವ ಮೂಲಕ ವಿಷಯಗಳನ್ನು ತಿರುಗಿಸಿತು.

ಭಾರತಕ್ಕೆ ಸತತ ಮೂರನೇ ಗೆಲುವು
ಇದು ಭಾರತಕ್ಕೆ ಸತತ ಮೂರನೇ ಗೆಲುವು. ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಕೊರಿಯಾ ಭಾರತವನ್ನು ಡ್ರಾಕ್ಕೆ ತೃಪ್ತಿ ಪಡುವಂತೆ ಮಾಡಿತ್ತು. ಈ ಪ್ರಭಾವಿ ಗೆಲುವು ಭಾರತದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದ್ದು, ಟೂರ್ನಿಯ ಕೊನೆಯಲ್ಲಿ ತಂಡ ಆತ್ಮವಿಶ್ವಾಸ ತುಂಬಲಿದೆ. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ತಂಡ ಜಪಾನ್ ತಂಡವನ್ನು ಭಾರತ ತಂಡವು ಎಲ್ಲಾ ವಿಭಾಗಗಳಲ್ಲಿ ಸಂಪೂರ್ಣವಾಗಿ ಮಕಾಡೆ ಮಲಗಿಸಿತು.

Published On - 5:03 pm, Sun, 19 December 21