ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನದಾಟ ನಡೆಯುತ್ತಿದ್ದು, ಪ್ರಮುಖ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಅವರ ಜೊತೆಯಾಟ ನೆರವಾಗಿದೆ.
ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಭಾರತವು ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ನಂತರ ಮಾಯಾಂಕ್ ಅಗರ್ವಾಲ್ ಮತ್ತು ರಿಷಭ್ ಪಂತ್ ಕೂಡ ಬೇಗನೆ ಮರಳಿದರು. ಟೀ ವಿರಾಮದ ವೇಳೆಗೆ ಭಾರತದ ಸ್ಕೋರ್ 253/6 ಆಗಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ ಅವರ ಇನ್ನಿಂಗ್ಸ್ ಆಸರೆಯಾಗಿದೆ.
ಟೀಂ ಇಂಡಿಯಾದ ಪ್ರಮುಖ ದಾಂಡಿಗರು ಬಹುಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ ಸಮಯದಲ್ಲಿ ಮೈದಾನಕ್ಕಿಳಿದ ಈ ಜೋಡಿ ಅದ್ಭುತ ಆಟವಾಡಿತು. ಇಬ್ಬರೂ ಸಹ ಅರ್ಧ ಶತಕ ಬಾರಿಸಿದ್ದಾರೆ. ಮೈದಾನದಲ್ಲಿ ಆರ್ಭಟ ಶುರು ಮಾಡಿರುವ ಶಾರ್ದುಲ್ ಠಾಕೂರ್ 94 ಎಸೆತ ಎದುರಿಸಿ ಭರ್ಜರಿ 2 ಸಿಕ್ಸರ್ಗಳೊಂದಿಗೆ 54 ರನ್ ಸಿಡಿಸಿದರೆ, 110 ಬಾಲ್ಗಳನ್ನ ಎದುರಿಸಿರುವ ವಾಷಿಂಗ್ಟನ್ ಸುಂದರ್ 50 ರನ್ ಬಾರಿಸಿದ್ದಾರೆ. ಈ ಜೋಡಿಯ ಶತಕದ ಜೊತೆಯಾಟ ತಂಡವನ್ನು ಫಾಲೋ ಆನ್ನಿಂದ ಪಾರು ಮಾಡಿವೆ.
FIFTY!
A gritty half-century by @imShard here at the Gabba. Brings it up with a maximum ??
Live – https://t.co/gs3dZfTNNo #AUSvIND pic.twitter.com/fyVvEfbs1p
— BCCI (@BCCI) January 17, 2021
A dream debut for @Sundarwashi5 as he brings up his maiden Test FIFTY here at the Gabba.
Live – https://t.co/bSiJ4wW9ej #AUSvIND pic.twitter.com/8fqU934D83
— BCCI (@BCCI) January 17, 2021