ಆಸ್ಟ್ರೇಲಿಯನ್ ಓಪನ್ 2022 ರ ( Australian Open 2022) ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ವಿಶ್ವದ ನಂಬರ್ ಒನ್ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ (Ashleigh Barty) ತಮ್ಮದಾಗಿಸಿಕೊಂಡಿದ್ದಾರೆ. ಆಶ್ಲೇ ಬಾರ್ಟಿ ಅವರು ಅಮೆರಿಕದ ಡೇನಿಯಲ್ ಕಾಲಿನ್ಸ್ ಅವರನ್ನು ಫೈನಲ್‌ನಲ್ಲಿ ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಜನವರಿ 29 ರ ಶನಿವಾರದಂದು ರಾಡ್ ಲೇವರ್ ಅರೆನಾದಲ್ಲಿ ನಡೆದ ಈ ಫೈನಲ್‌ನಲ್ಲಿ ಬಾರ್ಟಿ 6-3, 7-6 ರಿಂದ ಕೊಲಿನ್ಸ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ಇತಿಹಾಸವನ್ನೂ ಸೃಷ್ಟಿಸಿದರು. 44 ವರ್ಷಗಳಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಆಸ್ಟ್ರೇಲಿಯನ್ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇವರಗೂ ಮುನ್ನ ಕ್ರಿಸ್ ಓ’ನೀಲ್ ಅವರು 1978 ರಲ್ಲಿ ಕೊನೆಯ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದರು.
ಈ ಫೈನಲ್ ಸ್ವತಃ ವಿಶೇಷವಾಗಿತ್ತು, ಏಕೆಂದರೆ ಇಬ್ಬರೂ ಆಟಗಾರ್ತಿಯರು ಮೊದಲ ಬಾರಿಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಇದು ಬಾರ್ಟಿಯ ಮೂರನೇ ಫೈನಲ್ ಆಗಿದ್ದು, ಕಾಲಿನ್ಸ್ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್‌ನ ಫೈನಲ್ ತಲುಪಿದ್ದರು. ವಾಸ್ತವವಾಗಿ, ಕಾಲಿನ್ಸ್ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್‌ನ ಕ್ವಾರ್ಟರ್‌ಫೈನಲ್ ಗೆದ್ದು ಫೈನಲ್‌ಗೆ ಎಂಟ್ರಿಕೊಟ್ಟಿದ್ದರು. ಆದಾಗ್ಯೂ, ಅವರ ಅದ್ಭುತ ಪ್ರಯಾಣವು ಫೈನಲ್‌ನಲ್ಲಿ ಪ್ರಶಸ್ತಿಯಾಗಿ ಬದಲಾಗಲಿಲ್ಲ.ಆಸ್ಟ್ರೇಲಿಯಾದ ಸ್ಥಳೀಯ ತಾರೆ ಬಾರ್ಟಿ ಅವರ ಮುಂದೆ ಪ್ರಶಸ್ತಿ ಗೆಲ್ಲುವ ಕನಸು ನನಸಾಗಲಿಲ್ಲ.
ಪಂದ್ಯದ ರೋಚಕತೆ
25 ವರ್ಷದ ಬಾರ್ಟಿ ಈ ಫೈನಲ್‌ಗೆ ಉತ್ತಮ ಆರಂಭವನ್ನು ನೀಡಿ ಮೊದಲ ಸೆಟ್ ಅನ್ನು ಹೆಚ್ಚು ಕಷ್ಟವಿಲ್ಲದೆ ಸುಲಭವಾಗಿ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ನಿಜವಾದ ರೋಚಕತೆ ತೋರಿತು. ಕಾಲಿನ್ಸ್ ಆರಂಭದಲ್ಲಿಯೇ ಬಾರ್ಟಿ ಅವರ ಸರ್ವ್‌ಗಳನ್ನು ಎರಡು ಬಾರಿ ಮುರಿಯುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಕಾಲಿನ್ಸ್ ಕೂಡ ತಮ್ಮ ಸರ್ವ್ ಉಳಿಸಿಕೊಂಡರು ಮತ್ತು ತಕ್ಷಣವೇ 5-1 ಮುನ್ನಡೆ ಪಡೆದರು. ಈ ಪಂದ್ಯವು ಮೂರನೇ ಸೆಟ್‌ನವರೆಗೂ ಸಾಗಲಿದೆ ಎಂದು ತೋರುತ್ತಿತ್ತು. ಆದರೆ ಬಾರ್ಟಿ ಕೊನೆಯ ಕ್ಷಣದಲ್ಲಿ ಕಾಲಿನ್ಸ್ ಅವರ ಸರ್ವ್ ಅನ್ನು ಮುರಿದ ಸ್ಕೋರ್ ಅನ್ನು 2-5 ಮಾಡಿದರು.
ಬಾರ್ಟಿಯನ್ನು ಇಲ್ಲಿಂದ ನಿಲ್ಲಿಸುವುದು ಕಷ್ಟವಾಯಿತು. ಶೀಘ್ರದಲ್ಲೇ ಇಬ್ಬರೂ ಆಟಗಾರ್ತಿಯರು 5-5 ರಲ್ಲಿ ಸಮಬಲಗೊಂಡರು. 5-1 ಮುನ್ನಡೆಯನ್ನು ಪಡೆದ ಬಾರ್ಟಿ ಅವರ ಪ್ರಚಂಡ ಪುನರಾಗಮನದಿಂದ, ಕಾಲಿನ್ಸ್ ಧೈರ್ಯವನ್ನು ಕಳೆದುಕೊಂಡರು. ಹೀಗಾಗಿ ಪಂದ್ಯವು ಟೈ-ಬ್ರೇಕ್‌ಗೆ ಹೋಯಿತು. ಟೈ ಬ್ರೇಕರ್ ಅನ್ನು 7-2 ರಿಂದ ಗೆದ್ದ ನಂತರ ಬಾರ್ಟಿ ಫೈನಲ್ ಅನ್ನು 6-3, 7-6 ರಲ್ಲಿ ಗೆದ್ದರು ಮತ್ತು ತನ್ನ ತವರು ಅಭಿಮಾನಿಗಳ ಮುಂದೆ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು.
ಬಾರ್ಟಿ ಮೂರನೇ ಪ್ರಶಸ್ತಿ
ಇದು ಆಶ್ಲೇ ಬಾರ್ಟಿ ಅವರ ಮೂರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಾಗಿದೆ. ವಿಶ್ವದ ನಂಬರ್ ಒನ್ ಆಟಗಾರ್ತಿ 2019 ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದರ ನಂತರ ಬಾರ್ಟಿ ಮುಂದಿನ ಪ್ರಶಸ್ತಿಗಾಗಿ ಎರಡು ವರ್ಷ ಕಾಯಬೇಕಾಯಿತು. ಕಳೆದ ವರ್ಷ 2021 ರಲ್ಲಿ ವಿಂಬಲ್ಡನ್ ಫೈನಲ್‌ನಲ್ಲಿ ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸುವ ಮೂಲಕ ಅವರು ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದರು.
ಇದನ್ನೂ ಓದಿ:Australian Open 2022: ಸತತ ಎರಡನೇ ಬಾರಿಗೆ ಫೈನಲ್ಗೇರಿದ ಡೇನಿಯಲ್ ಮೆಡ್ವೆಡೆವ್! ಅಂತಿಮ ಎದುರಾಳಿ ನಡಾಲ್
Published On - 4:00 pm, Sat, 29 January 22