AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Australian Open 2022: ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಡೇನಿಯಲ್ ಮೆಡ್ವೆಡೆವ್! ಅಂತಿಮ ಎದುರಾಳಿ ನಡಾಲ್

Australian Open 2022: ಮೆಡ್ವೆಡೆವ್ ಸತತ ಎರಡನೇ ವರ್ಷ ಈ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಕಳೆದ ವರ್ಷ, ಅವರು ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.

Australian Open 2022: ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಡೇನಿಯಲ್ ಮೆಡ್ವೆಡೆವ್! ಅಂತಿಮ ಎದುರಾಳಿ ನಡಾಲ್
ಡೇನಿಯಲ್ ಮೆಡ್ವೆಡೆವ್
TV9 Web
| Updated By: ಪೃಥ್ವಿಶಂಕರ|

Updated on: Jan 28, 2022 | 7:35 PM

Share

ರಷ್ಯಾದ ಡೇನಿಯಲ್ ಮೆಡ್ವೆಡೆವ್ ( Daniil Medvedev) ಆಸ್ಟ್ರೇಲಿಯನ್ ಓಪನ್ 2022 ರ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದ್ದಾರೆ. ಎರಡನೇ ಶ್ರೇಯಾಂಕದ ಮೆಡ್ವೆಡೆವ್ ನಾಲ್ಕು ಸೆಟ್‌ಗಳ ಪಂದ್ಯದಲ್ಲಿ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಸೋಲಿಸುವ ಮೂಲಕ ಸತತ ಎರಡನೇ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಪ್ರವೇಶಿಸಿದರು. ಅವರು ಫೈನಲ್‌ನಲ್ಲಿ ರಾಫೆಲ್ ನಡಾಲ್ (Rafael Nadal) ಅವರನ್ನು ಎದುರಿಸಲಿದ್ದಾರೆ. ಟೂರ್ನಿಯಲ್ಲಿ ಈಗಾಗಲೇ ಹಲವು ಸುದೀರ್ಘ ಪಂದ್ಯಗಳನ್ನು ಆಡಿರುವ ಮೆಡ್ವೆಡೆವ್ ಮತ್ತೊಮ್ಮೆ ಸುದೀರ್ಘ ಕಾಲ ಅಂಗಳದಲ್ಲಿ ಉಳಿಯಬೇಕಾಯಿತು. ಕಠಿಣ ಹೋರಾಟದ ನಂತರ ಅವರು 7-6(5), 4-6, 6-4 ಸೆಟ್‌ಗಳಿಂದ ಗ್ರೀಕ್ ಸ್ಟಾರ್ ಸಿಟ್ಸಿಪಾಸ್ ಅವರನ್ನು ಸೋಲಿಸಿದರು. ಮೆಡ್ವೆಡೆವ್ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್ ತಲುಪಿದ್ದಾರೆ.

ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಅನುಪಸ್ಥಿತಿಯಲ್ಲಿ ಈ ಬಾರಿ ಟೂರ್ನಿಯ ಅತ್ಯುನ್ನತ ಶ್ರೇಯಾಂಕದ ಆಟಗಾರನಾಗಿ ಅಂಗಳಕ್ಕೆ ಕಾಲಿಡುತ್ತಿದ್ದ ರಷ್ಯಾದ ಸ್ಟಾರ್ ಮೆಡ್ವೆಡೆವ್ ಟೂರ್ನಿಯುದ್ದಕ್ಕೂ ಅದನ್ನೇ ಮುಂದುವರಿಸಿ ಸೆಮಿಫೈನಲ್‌ನಲ್ಲಿ ಮುಂದುವರಿದರು. ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದ ಆಸ್ಟ್ರೇಲಿಯನ್ ಪ್ರೇಕ್ಷಕರು ಕಡಿಮೆ ಬೆಂಬಲವನ್ನು ಹೊಂದಿದ್ದರೂ, ಮೆಡ್ವೆಡೆವ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು ಮತ್ತು ಮೂರನೇ ಗ್ರ್ಯಾಂಡ್ ಸ್ಲಾಮ್ ಫೈನಲ್‌ಗೆ ಪ್ರವೇಶಿಸಿದರು.

ಅಂಪೈರ್ ಜೊತೆಗಿನ ವಾಗ್ವಾದ 25 ವರ್ಷದ ಮೆಡ್ವೆಡೆವ್ ಮತ್ತು ನಾಲ್ಕನೇ ಶ್ರೇಯಾಂಕದ 23 ವರ್ಷದ ಸಿಟ್ಸಿಪಾಸ್ ನಡುವಿನ ಪಂದ್ಯವು ಪ್ರಬಲ ಆರಂಭವನ್ನು ಹೊಂದಿತ್ತು. ಮೊದಲ ಸೆಟ್ ಅನ್ನು ಗೆಲ್ಲಲು ಟೈ ಬ್ರೇಕರ್ ಅನ್ನು ಆಶ್ರಯಿಸಬೇಕಾಯಿತು, ಅಲ್ಲಿ ಮೆಡ್ವೆಡೆವ್ ಮುನ್ನಡೆ ಸಾಧಿಸಿದರು. ನಂತರ ಎರಡನೇ ಸೆಟ್‌ನಲ್ಲಿ, ಸಿಟ್ಸಿಪಾಸ್ ಹಿಂತಿರುಗಿ ಅದನ್ನು ತನ್ನ ಹೆಸರಿಗೆ ತೆಗೆದುಕೊಂಡರು. ಈ ವೇಳೆ ಕೋರ್ಟ್‌ನಲ್ಲಿ ಮೆಡ್ವೆಡೆವ್ ಬಗ್ಗೆ ಚೇರ್ ಅಂಪೈರ್ ಜೊತೆ ತೀವ್ರ ವಾಗ್ವಾದ ನಡೆದಿದ್ದು, ಅವರು ಸಾಕಷ್ಟು ಕೂಗಾಡಿದ್ದು ಕಂಡುಬಂತು. ವಿಶೇಷವಾಗಿ ನಾಲ್ಕನೇ ಸೆಟ್‌ನಲ್ಲಿ, ಅವರು ಸಿಟ್ಸಿಪಾಸ್ ಅನ್ನು ಸಂಪೂರ್ಣವಾಗಿ ಹಿಂದಿಕ್ಕಿದರು. ಗ್ರೀಕ್ ಸ್ಟಾರ್ ಕೇವಲ ಒಂದು ಸೆಟ್ ಅನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು.

ಮೆಡ್ವೆಡೆವ್- ನಡಾಲ್ ನಡುವೆ ಫೈನಲ್ ಮೆಡ್ವೆಡೆವ್ ಸತತ ಎರಡನೇ ವರ್ಷ ಈ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಕಳೆದ ವರ್ಷ, ಅವರು ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ನಂತರ ಯುಎಸ್ ಓಪನ್‌ನ ಫೈನಲ್‌ನಲ್ಲಿ ಇಬ್ಬರೂ ಸೆಣಸಾಡಿದರು, ಅಲ್ಲಿ ಮೆಡ್ವೆಡೆವ್ ವಿಶ್ವದ ನಂಬರ್ ಒನ್ ಆಟಗಾರನನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು. ನಂತರ ಮೆಡ್ವೆಡೆವ್ ಜೊಕೊವಿಕ್ ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಗೆಲ್ಲದಂತೆ ತಡೆದರು.

ಇದೀಗ ರಷ್ಯಾದ ತಾರೆ ಮತ್ತೊಮ್ಮೆ ಅದೇ ಕೆಲಸವನ್ನು ಮಾಡಬೇಕಾಗಿದೆ, ಏಕೆಂದರೆ ಈ ಬಾರಿ ಅವರು 20 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ಸ್ಪ್ಯಾನಿಷ್ ದಂತಕಥೆ ರಾಫೆಲ್ ನಡಾಲ್ ಅವರನ್ನು ಫೈನಲ್‌ನಲ್ಲಿ ಎದುರಿಸಲಿದ್ದಾರೆ. ನಡಾಲ್ ಮೊದಲ ಸೆಮಿಫೈನಲ್‌ನಲ್ಲಿ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು 6-3, 6-2, 3-6, 6-3 ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ರೋಜರ್ ಫೆಡರರ್ ಮತ್ತು ಜೊಕೊವಿಕ್ ಅವರನ್ನು ಹಿಂದಿಕ್ಕುವ ಅವಕಾಶ ನಡಾಲ್​ಗೆ ಇದೆ.