Australian Open: ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿ ಗೆದ್ದ ಇವಾನ್-ಫಿಲಿಪ್ ಜೋಡಿ

Australian Open: ಕ್ರೊವೇಷಿಯಾದ ಇವಾನ್ ಡೊಡಿಗ್ ಮತ್ತು ಸ್ಲೋವಾಕಿಯಾದ ಫಿಲಿಪ್ ಪೋಲೆಸೆಕ್ ಜೋಡಿ ಆಸ್ಟ್ರೇಲಿಯಾದ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Australian Open: ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿ ಗೆದ್ದ ಇವಾನ್-ಫಿಲಿಪ್ ಜೋಡಿ
ಇವಾನ್ ಡೊಡಿಗ್ ಮತ್ತು ಫಿಲಿಪ್ ಪೋಲೆಸೆಕ್
Follow us
ಪೃಥ್ವಿಶಂಕರ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 21, 2021 | 3:31 PM

ಕ್ರೊವೇಷಿಯಾದ ಇವಾನ್ ಡೊಡಿಗ್ ಮತ್ತು ಸ್ಲೋವಾಕಿಯಾದ ಫಿಲಿಪ್ ಪೋಲೆಸೆಕ್ ಜೋಡಿ ಆಸ್ಟ್ರೇಲಿಯಾದ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು. 9ನೇ ಶ್ರೇಯಾಂಕಿತ ಜೋಡಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್‌ನ ಜೋಯಿ ಸಾಲಿಸ್‌ಬುರಿ ಅವರನ್ನು ಸೋಲಿಸಿತು. 1.28 ಗಂಟೆ ನಡೆದ ಪಂದ್ಯದಲ್ಲಿ ದೋಡಿಗ್ ಮತ್ತು ಪೋಲಾಸೆಕ್ ಜೋಡಿ ಸತತ 6-3, 6-4 ಸೆಟ್‌ಗಳಿಂದ ರಾಮ್ ಮತ್ತು ಸಾಲಿಸ್‌ಬುರಿ ಜೋಡಿಯನ್ನು ಸೋಲಿಸಿತು.

ಡೊಡಿಗ್ ಮತ್ತು ಪೋಲೆಸೆಕ್ ಜೋಡಿಗೆ ಇದು ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿ. ಡೊಡಿಗ್ ಮತ್ತು ಪೋಲೆಸೆಕ್ ಜೋಡಿ ಮೊದಲಿನಿಂದಲೂ ರಾಮ್ ಮತ್ತು ಸಾಲಿಸಾಬುರಿ ಜೋಡಿಯ ಮೇಲೆ ಒತ್ತಡ ಹೆರುತ್ತಾ ಸಾಗಿತು. ರಾಮ್ ಮತ್ತು ಸಾಲಿಸಾಬುರಿ ಜೋಡಿಗೆ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಅವಕಾಶವೇ ಸಿಗಲಿಲ್ಲ.

5ನೇ ಶ್ರೇಯಾಂಕದ ರಾಮ್ ಮತ್ತು ಸಾಲಿಸ್‌ಬುರಿ ಜೋಡಿ ಸತತ ಎರಡನೇ ವರ್ಷ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್‌ನ ಫೈನಲ್ ತಲುಪಿತ್ತು. ಅವರು ಈ ಪಂದ್ಯವನ್ನು ಗೆದ್ದಿದ್ದರೆ, ಬಾಬ್ ಬ್ರಿಯಾನ್ ಮತ್ತು ಮೈಕ್ ಬ್ರಿಯಾನ್ ನಂತರ ಸತತ ಎರಡು ಬಾರಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಪುರುಷ ಜೋಡಿಯಾಗುತ್ತಿದ್ದರು.

ಸತತ 3 ಬಾರಿ ಪುರುಷರ ಡಬಲ್ಸ್ ಗೆದ್ದಿದ್ದ ಬ್ರಿಯಾನ್ ಸಹೋದರರು ಅಮೆರಿಕ ಮೂಲದ ಬಾಬ್ ಮತ್ತು ಬ್ರಿಯಾನ್ ಜೋಡಿ 2009, 2010 ಮತ್ತು 2011 ರಲ್ಲಿ ಸತತ ಮೂರು ಬಾರಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ: IPL Auction 2021: ಚೆಂಡಿರೋದೆ ಚಚ್ಚುವುದಕ್ಕೆ ಧೋರಣೆಯ ಅಜರುದ್ದೀನ್ 2021 ಐಪಿಎಲ್ ಸೀಸನ್​ನಲ್ಲಿ ಆರ್​ಸಿಬಿಗೆ ಆಡುತ್ತಾರೆ!

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ