Axar Patel: ಟೀಂ ಇಂಡಿಯಾದ ಈ ಕ್ರಿಕೆಟಿಗನಿಂದ ನನಗೆ ತಂಡದಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ – ಅಕ್ಷರ್ ಪಟೇಲ್

| Updated By: Skanda

Updated on: May 28, 2021 | 10:47 AM

Axar Patel: ಅಕ್ಷರ್ ಅವರ ಪ್ರಕಾರ, ಜಡೇಜಾ ಆಡುತ್ತಿರುವ ರೀತಿ, ಬೇರೆ ಯಾವುದೇ ಎಡಗೈ ಆಲ್‌ರೌಂಡರ್‌ಗೆ ಅವರು ಇರುವವರೆಗೂ ಅವಕಾಶ ಸಿಗುವುದು ಕಷ್ಟ.

Axar Patel: ಟೀಂ ಇಂಡಿಯಾದ ಈ ಕ್ರಿಕೆಟಿಗನಿಂದ ನನಗೆ ತಂಡದಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ - ಅಕ್ಷರ್ ಪಟೇಲ್
ಅಕ್ಷರ್​ ಪಟೇಲ್
Follow us on

ರವೀಂದ್ರ ಜಡೇಜಾ ಪ್ರಸ್ತುತ ಭಾರತದ ಅತ್ಯುತ್ತಮ ಆಲ್‌ರೌಂಡರ್. ಆದರೆ, ಎಡಗೈ ಆಟಗಾರ ಜಡೇಜಾ ಅವರಿಂದ 27 ವರ್ಷದ ಎಡಗೈ ಆಲ್‌ರೌಂಡರ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟಕರವಾಗಿದೆ. 2014 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೂ, ಅವರು ಕೇವಲ 38 ಏಕದಿನ ಮತ್ತು 12 ಟಿ -20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಅಕ್ಷರ್ ಪಟೇಲ್.

ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡುವಾಗ ಅಕ್ಷರ್ ಈ ಮಾಹಿತಿ ನೀಡಿದರು. ಅಕ್ಷರ್ ಅವರ ಪ್ರಕಾರ, ಜಡೇಜಾ ಆಡುತ್ತಿರುವ ರೀತಿ, ಬೇರೆ ಯಾವುದೇ ಎಡಗೈ ಆಲ್‌ರೌಂಡರ್‌ಗೆ ಅವರು ಇರುವವರೆಗೂ ಅವಕಾಶ ಸಿಗುವುದು ಕಷ್ಟ. ಅಲ್ಲದೆ, ನನ್ನನ್ನು ಭಾರತೀಯ ತಂಡದಲ್ಲಿ ಆಯ್ಕೆ ಮಾಡಬಹುದು, ಆದರೆ ಅಂತಿಮ 11 ರಲ್ಲಿ ಜಡೇಜಾಗೆ ಖಂಡಿತವಾಗಿಯೂ ಅವಕಾಶ ಸಿಗುತ್ತದೆ ಎಂದರು.

ಅವಕಾಶ ಸಿಗದ ಕಾರಣ ನಿರಾಶೆ
ಅಕ್ಷರ್ ಪಟೇಲ್ ಅವರು ಅಕ್ಟೋಬರ್, 2017 ರಿಂದ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿಲ್ಲ. ಸರಿಯಾದ ಅವಕಾಶ ಸಿಗದ ಕಾರಣ ನಿರಾಶೆಗೊಂಡಿದ್ದಾರೆ ಎಂದು ಹೇಳಿದರು. ಆದರೆ ಇದು ತಾಳ್ಮೆಯಿಂದಿರಿ ಮತ್ತು ನಮ್ಮ ಅವಕಾಶಕ್ಕಾಗಿ ಕಾಯಬೇಕೆಂದು ಕಲಿಸಿದೆ ಎಂಬುದನ್ನು ಅಕ್ಷರ್ ಅರಿತುಕೊಂಡಿದ್ದಾರಂತೆ.

ಡಬ್ಲ್ಯುಟಿಸಿಯಲ್ಲಿ ಜಡೇಜಾ ಇನ್ ಅಕ್ಷರ್ ಔಟ್
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ ಫೈನಲ್) ಫೈನಲ್‌ಗೆ ಭಾರತೀಯ ತಂಡವನ್ನು ಘೋಷಿಸಲಾಗಿದೆ. ಅವರಲ್ಲಿ ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್ ಮತ್ತು ಉಮೇಶ್ ಯಾದವ್. ಅಕ್ಷರ್ ಮತ್ತು ಜಡೇಜಾ ಇಬ್ಬರೂ ಇಂಗ್ಲೆಂಡ್‌ಗೆ ಹೋಗುತ್ತಿದ್ದರೂ, ಅಂತಿಮ 11 ರಲ್ಲಿ ಅಕ್ಷರ್ ಬದಲಿಗೆ ಜಡೇಜಾಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ:
ವೈರಲ್​ ವಿಡಿಯೋ; ಕೊರೊನಾ ಕಂಟಕ.. ಹೆಂಡತಿಯೊಂದಿಗೆ ಮನೆಯೊಳಗೆ ಕ್ರಿಕೆಟ್ ಆಡಿದ ಮೊಹಮ್ಮದ್ ಕೈಫ್ 

ಕ್ರಿಕೆಟ್ ಪಂಟರ್​ಗಳಂತೆ ಬ್ಯಾಟ್ ಬೀಸ್ತಾಳೆ ಈ 6 ವರ್ಷದ ಪೋರಿ; ವಿಡಿಯೋ ನೋಡಿ ನೀವೂ ಮೂಗಿನ ಮೇಲೆ ಬೆರಳಿಡ್ತೀರಾ..!