ಕಾನೂನಿನ ಆಟದಲ್ಲಿ ಮೊನ್ನೆ ಗೆದ್ದು, ಇಂದು ಸೋತ BCCI ಕಳಕೊಂಡಿದ್ದೆಷ್ಟು ಗೊತ್ತಾ?

ಮುಂಬೈ: ಭಾರತೀಯ ಕ್ರಿಕೆಟ್‌ ಬೋರ್ಡ್‌ ಅಂದ್ರೆ ಬಿಸಿಸಿಐಗೆ ಕಳೆದ ಕೆಲ ದಿನಗಳಲ್ಲಿ ಬೇವು ಬೆಲ್ಲದ ಅನುಭವಾಗ್ತಿದೆ. ಯಾಕಂದ್ರೆ ಕೆಲ ದಿನಗಳ ಹಿಂದೆ ವರ್ಲ್ಡ್‌ ಸ್ಪೋರ್ಟ್ಸ್‌ ಗ್ರೂಪ್‌ ವಿರುದ್ಧದ ಕಾನೂನು ಸಮರದಲ್ಲಿ ಗೆದ್ದು ಬೀಗಿದ್ದ ಬಿಸಿಸಿಐಗೆ ಈಗ ಶಾಕ್‌ ಹೊಡೆದಿದೆ. ಐಪಿಎಲ್‌ನ ಮಾಜಿ ಫ್ರಾಂಚೈಸಿ ಡೆಕ್ಕನ್‌ ಚಾರ್ಜರ್‌ ವಿರುದ್ಧದ ಕಾನೂನು ಸಮರದಲ್ಲಿ ಹಿನ್ನಡೆಯಾಗಿ ಮುಖಭಂಗ ಅನುಭವಿಸಿದೆ. ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ದೊರೆ ಬಿಸಿಸಿಐಗೆ ಬಾಂಬೆ ಹೈಕೋರ್ಟ್‌ ನೇಮಿಸಿದ್ದ ಆರ್ಬಿಟ್ರೇಟರ್‌ ಅಂದ್ರೆ ಮಧ್ಯಸ್ತಿಕೆದಾರ ನೀಡಿದ ತೀರ್ಪು ಕಪಾಳ ಮೋಕ್ಷ ಮಾಡಿದಂತಾಗಿದೆ. […]

ಕಾನೂನಿನ ಆಟದಲ್ಲಿ ಮೊನ್ನೆ ಗೆದ್ದು, ಇಂದು ಸೋತ BCCI ಕಳಕೊಂಡಿದ್ದೆಷ್ಟು ಗೊತ್ತಾ?
Follow us
Guru
| Updated By: ಸಾಧು ಶ್ರೀನಾಥ್​

Updated on: Jul 18, 2020 | 3:35 PM

ಮುಂಬೈ: ಭಾರತೀಯ ಕ್ರಿಕೆಟ್‌ ಬೋರ್ಡ್‌ ಅಂದ್ರೆ ಬಿಸಿಸಿಐಗೆ ಕಳೆದ ಕೆಲ ದಿನಗಳಲ್ಲಿ ಬೇವು ಬೆಲ್ಲದ ಅನುಭವಾಗ್ತಿದೆ. ಯಾಕಂದ್ರೆ ಕೆಲ ದಿನಗಳ ಹಿಂದೆ ವರ್ಲ್ಡ್‌ ಸ್ಪೋರ್ಟ್ಸ್‌ ಗ್ರೂಪ್‌ ವಿರುದ್ಧದ ಕಾನೂನು ಸಮರದಲ್ಲಿ ಗೆದ್ದು ಬೀಗಿದ್ದ ಬಿಸಿಸಿಐಗೆ ಈಗ ಶಾಕ್‌ ಹೊಡೆದಿದೆ. ಐಪಿಎಲ್‌ನ ಮಾಜಿ ಫ್ರಾಂಚೈಸಿ ಡೆಕ್ಕನ್‌ ಚಾರ್ಜರ್‌ ವಿರುದ್ಧದ ಕಾನೂನು ಸಮರದಲ್ಲಿ ಹಿನ್ನಡೆಯಾಗಿ ಮುಖಭಂಗ ಅನುಭವಿಸಿದೆ. ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ದೊರೆ ಬಿಸಿಸಿಐಗೆ ಬಾಂಬೆ ಹೈಕೋರ್ಟ್‌ ನೇಮಿಸಿದ್ದ ಆರ್ಬಿಟ್ರೇಟರ್‌ ಅಂದ್ರೆ ಮಧ್ಯಸ್ತಿಕೆದಾರ ನೀಡಿದ ತೀರ್ಪು ಕಪಾಳ ಮೋಕ್ಷ ಮಾಡಿದಂತಾಗಿದೆ.

ಹೌದು ವಿಶ್ವ ಕ್ರಿಕೆಟ್‌ ದೊಡ್ಡಣ್ಣ ಬಿಸಿಸಿಐಗೆ ಬಾಂಬೆ ಹೈಕೋರ್ಟ್‌ ನೇಮಿಸಿದ್ದ ಆರ್ಬಿಟ್ರೇಟರ್‌ ಅಂದ್ರೆ ಮಧ್ಯಸ್ತಿಕೆದಾರ ನೀಡಿದ ತೀರ್ಪಿನಿಂದ ಭಾರೀ ಮುಖಭಂಗವಾಗದೆ. ಈ ತೀರ್ಪಿನ ಪ್ರಕಾರ ಬಿಸಿಸಿಐ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮಾಜಿ ಫ್ರಾಂಚೈಸಿ ಡೆಕ್ಕನ್‌ ಚಾರ್ಜರ್ಸ್‌ಗೆ 4,800 ಕೋಟಿ ರೂ.ಗಳನ್ನು ನೀಡಬೇಕು. ಇದು ಮೊದಲೇ ಈ ವರ್ಷ ಐಪಿಎಲ್‌ ನಡೆಸಲು ಸಾಧ್ಯವಾಗದೇ ಭಾರೀ ನಷ್ಟದಲ್ಲಿರುವ BCCIಗೆ ಬರಸಿಡಿಲಿನಂತಾಗಿದೆ.

2012ರಲ್ಲಿ ಲಲೀತ್‌ ಮೋದಿ ವಿವಾದ ಶುರವಾದ ನಂತರ ಬಿಸಿಸಿಐ ಅವರಿಗೆ ಗೇಟ್‌ ಪಾಸ್‌ ನೀಡಿತ್ತು. ಆ ನಂತರ ಶುರುವಾದ ಬೆಳವಣಿಗಗಳಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಫ್ರಾಂಚೈಸಿಗೆ ಟರ್ಮಿನೇಶನ್‌ ನೋಟಿಸ್‌ ಕಳಿಸಿದ್ದ ಬಿಸಿಸಿಸಿ 30 ದಿನಗಳ ಗಡುವು ನೀಡಿತ್ತು. ಆದ್ರೆ 29ನೇ ದಿನವೇ ಡೆಕ್ಕನ್‌ ಚಾರ್ಜರ್ಸ್‌ ಫ್ರಾಸಂಚೈಸಿಯನ್ನ ಟರ್ಮಿನೇಟ್‌ ಮಾಡಿತ್ತು. ಬಿಸಿಸಿಐನ ಈ ಕ್ರಮ ಪ್ರಶ್ನಿಸಿ ಡೆಕ್ಕನ್‌ ಚಾರ್ಜರ್ಸ್‌ ಬಾಂಬೈ ಹೈಕೋರ್ಟ್‌ ಮೇಟ್ಟಿಲೇರಿತ್ತು.

ವಿಚಾರಣೆ ನಡೆಸಿದ ಬಾಂಬೈ ಹೈಕೋರ್ಟ್‌ 2012ರಲ್ಲಿ ಸುಪ್ರೀಮ್‌ ಕೋರ್ಟ್‌ನ ನೀವೃತ್ತ ನ್ಯಾಯಮೂರ್ತಿ ಎಸ್‌ ಎಸ್‌ ಠಕ್ಕರ್‌ ಅವರನ್ನು ಆರ್ಬಿಟ್ರೇಟರ್‌ ಆಗಿ ನೇಮಿಸಿತ್ತು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಎಸ್‌ ಠಕ್ಕರ್‌ ಡೆಕ್ಕನ್‌ ಚಾರ್ಜರ್ಸ್‌ ಪರ ತೀರ್ಪು ನೀಡಿದ್ದಾರೆ. ಡೆಕ್ಕನ್‌ ಚಾರ್ಜರ್ಸ್‌ ಫ್ರಾಂಚೈಸಿಯನ್ನ ರದ್ದು ಮಾಡಿದ ಬಿಸಿಸಿಐ ಕ್ರಮ ಏಕಪಕ್ಷಿಯ ಮತ್ತು ಕಾನೂನುಬಾಹಿರ ಎಂದು ತೀರ್ಪು ನೀಡಿದೆ.

ಈ ತೀರ್ಪಿನ ಪ್ರಕಾರ ಬಿಸಿಸಿಐ ಡೆಕ್ಕನ್‌ ಚಾರ್ಚರ್ಸ್‌ಗೆ ನಷ್ಟವಾಗಿದ್ದಕ್ಕೆ 630 ಕೋಟಿ ರೂ, ಕಾನೂನುಬಾಹಿರವಾಗಿ ಫ್ರಾಂಚೈಸಿ ಟರ್ಮಿನೇಟ್‌ ಮಾಡಿದ್ದಕ್ಕೆ ಪರಿಹಾರವಾಗಿ 4,160 ಕೋಟಿ ಮತ್ತು ಅಗ್ರಿಮೆಂಟ್‌ ನಲ್ಲಿರುವಂತೆ 36 ಕೋಟಿ ರೂ.ಗಳನ್ನು ನೀಡಲು ಆದೇಶಿಸಿದೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ