ಐಪಿಎಲ್ 2021 ಇನ್ನೇನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಕೊರೊನಾ ಸೋಂಕಿನ ಉಪಟಳದ ಬಗ್ಗೆ ಎಚ್ಚರಿಕೆವಹಿಸಿರುವ ಬಿಸಿಸಿಐ ಕಾರ್ಯಪ್ರವೃತ್ತವಾಗಿದೆ. ಕೊರೊನಾ ಸೋಂಕು ಮತ್ತೊಮ್ಮೆ ಭಾರತದಲ್ಲಿ ಹಾನಿಯುಂಟುಮಾಡುತ್ತಿದೆ. ಮತ್ತೊಮ್ಮೆ, ಹೊಸ ಪ್ರಕರಣಗಳು ವೇಗವನ್ನು ಪಡೆದುಕೊಳ್ಳುತ್ತಿವೆ. ಹೀಗಾಗಿ ಲಾಕ್‌ಡೌನ್‌ನಂತಹ ಸಂದರ್ಭಗಳನ್ನು ನೋಡಲಾಗುತ್ತಿದೆ.ಕೊರೊನಾದ ಪ್ರಭಾವದಿಂದ ಹೆಚ್ಚುತ್ತಿರುವ ಹಾನಿಯ ಬಗ್ಗೆ ಬಿಸಿಸಿಐ ಎಚ್ಚರವಹಿಸಿದ್ದು, ಐಪಿಎಲ್ 2021 ರ ಆರಂಭಕ್ಕೂ ಮೊದಲು, ದೇಶಾದ್ಯಂತ ನಡೆಯುತ್ತಿರುವ ಎಲ್ಲಾ ವಯೋಮಿತಿಯ ಕ್ರಿಕೆಟ್ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಎಲ್ಲಾ ಕ್ರಿಕೆಟ್ ಸಂಘಗಳಿಗೆ ಪತ್ರ ಬರೆದ ಜೈ ಷಾ..
ಈ ವಿಷಯದಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈ ಷಾ ಅವರು ರಾಜ್ಯದ ಎಲ್ಲಾ ಕ್ರಿಕೆಟ್ ಸಂಘಗಳಿಗೆ ಪತ್ರ ಬರೆದು ಎಲ್ಲಾ ವಯೋಮಿತಿಯ ಕ್ರಿಕೆಟ್ ಪಂದ್ಯಗಳನ್ನು ಸ್ಥಗಿತಗೊಳಿಸುವಂತೆ ಕೇಳಿಕೊಂಡಿದ್ದಾರೆ. ಎಎನ್‌ಐ ಪ್ರಕಾರ, ಷಾ ತಮ್ಮ ಪತ್ರದಲ್ಲಿ, ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭರಾಟೆ ಇದೆ. ಕೊರೊನಾದ ಈ ಹೊಸ ಅಲೆಯಿಂದಾಗಿ, ನಾವು ಎಲ್ಲಾ ವಯೋಮಿತಿಯ ಪಂದ್ಯಾವಳಿಗಳನ್ನು ನಿಲ್ಲಿಸಬೇಕಾಗಿದೆ. ಈ ಹದಗೆಡುತ್ತಿರುವ ಪರಿಸ್ಥಿತಿಯಲ್ಲಿ, ಎಲ್ಲಾ ಆಟಗಾರರಿಗೆ ಇಂಟರ್ಸಿಟಿ ಟ್ರಾವೆಲ್, ಕ್ಯಾರೆಂಟೈನ್ ಮತ್ತು ಬಯೋ ಸೆಕ್ಯೂರ್‌ನಂತಹ ಸಮಸ್ಯೆಗಳಿರಬಹುದು ಹಾಗಾಗಿ ಈ ಪಂದ್ಯಾವಳಿಗಳನ್ನು ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.
ಜನವರಿಯಿಂದ ಪ್ರಾರಂಭವಾದ ದೇಶೀಯ ಪಂದ್ಯಾವಳಿಗಳು
ಭಾರತೀಯ ಕ್ರಿಕೆಟ್‌ನ ದೇಶೀಯ ಪಂದ್ಯಾವಳಿಗಳು ಜನವರಿ 2021 ರಿಂದ ಪ್ರಾರಂಭವಾದವು. ಇದರಲ್ಲಿ, ಮಂಡಳಿಯು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಅವರನ್ನು ಯಶಸ್ವಿಯಾಗಿ ಆಯೋಜಿಸಿತು. ಜೊತೆಗೆ ಮಹಿಳಾ ಹಿರಿಯ ಏಕದಿನ ಪಂದ್ಯಗಳನ್ನು ಸಹ ಅನೇಕ ಸ್ಥಳಗಳಲ್ಲಿ ಆಡಲಾಗುತ್ತಿದೆ.
ಜೈ ಷಾ ಅವರು ರಾಜ್ಯ ಕ್ರಿಕೆಟ್ ಸಂಘಗಳಿಗೆ ಬರೆದ ಪತ್ರದಲ್ಲಿ, ನಾವು ಪಂದ್ಯಾವಳಿಗಳನ್ನು ನಿಲ್ಲಿಸುವುದರಿಂದ ಈಗಾಗಲೇ ಕೊರೊನಾದಿಂದ ಓದಲು ತೊಂದರೆಗೊಳಗಾಗಿರುವ 10 ಮತ್ತು 12ನೇ ತರಗತಿಯ ಮಕ್ಕಳಿಗೆ ಅತಿ ಹೆಚ್ಚಿನ ಸಮಯ ಸಿಗಲಿದೆ. ಜೊತೆಗೆ ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ ಈ ಎಲ್ಲಾ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಂಡು ಪಂದ್ಯಾವಳಿಗಳನ್ನು ನಿಲ್ಲಿಸುವುದು ಸೂಕ್ತ ಎಂದಿದ್ದಾರೆ.
ಐಪಿಎಲ್ 2021 ಮೇಲೆ ಪರಿಣಾಮ ಬೀರಬಹುದಾ?
ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ವಿಧಾನವನ್ನು ಗಮನದಲ್ಲಿಟ್ಟುಕೊಂಡು, ಈ ವಯೋಮಾನದ ಪಂದ್ಯಾವಳಿಯನ್ನು ಮುಂದೂಡಲಾಗಿದೆ. ಆದರೆ, ಮುಂದೆ ಐಪಿಎಲ್ 2021 ಇದೆ. ಇದನ್ನು ಭಾರತದ 6 ನಗರಗಳಲ್ಲಿ ಆಯೋಜಿಸಲಾಗುವುದು. ಈವೆಂಟ್‌ನ ಎಲ್ಲಾ 6 ನಗರಗಳಲ್ಲಿ, ಕೊರೊನಾದ ಪ್ರಭಾವವು ಪ್ರಬಲವಾಗಿದೆ. ಪ್ರಸ್ತುತ, ಖಾಲಿ ಕ್ರೀಡಾಂಗಣದಲ್ಲಿಯೇ ಐಪಿಎಲ್ ಆಡಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ. ಆದರೆ, ಈ ಎಲ್ಲಾ ಯೋಜನೆಗಳು ಎಷ್ಟರಮಟ್ಟಿಗೆ ಸಹಕಾರಿಯಾಗಲಿವೆ ಎಂಬುದನ್ನು ಕಾದುನೋಡಬೇಕಾಗಿದೆ.
ಇದನ್ನೂ ಓದಿ: BCCI ಫಿಟ್ನೆಸ್ ಪರೀಕ್ಷೆಯಲ್ಲಿ ವರುಣ್ ಚಕ್ರವರ್ತಿ ಫೇಲ್.. ಯುವ ಆಟಗಾರರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕ್ಯಾಪ್ಟನ್ ಕೊಹ್ಲ