India vs England: ಉತ್ತಮವಾಗಿ ಆಡುತ್ತಿದ್ದ ಪಂತ್ ಔಟಾಗಲು ಕೊಹ್ಲಿಯೇ ಕಾರಣವೆಂದ ನೆಟ್ಟಿಗರು! ವಿಡಿಯೋ ನೋಡಿ
India vs England: ಆರಂಭದಲ್ಲಿ ರನ್ ಬೇಡ ಎಂದು ನಿರ್ಧರಿಸಿದವರೂ ಮತ್ತೆ ಮೂರನೇ ರನ್ ಓಡಲು ಪ್ರಾರಂಭಿಸಿದರು. ಆದರೆ ಇದನ್ನು ಗಮಸಿದ ಜೋಸ್ ಬಟ್ಲರ್ ಚೆಂಡನ್ನು, ವಿಕೆಟ್ ಬಳಿ ನಿಂತಿದ್ದ ಸ್ಯಾಮ್ ಕರನ್‌ನತ್ತ ಎಸೆದರು.
ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಗೆಲುವಿನ ಲಯಕಂಡುಕೊಂಡಿದ್ದ ಕೊಹ್ಲಿ ಹುಡುಗರು, 3ನೇ ಟಿ20 ಪಂದ್ಯದಲ್ಲಿ ಮತ್ತೆ ಆಂಗ್ಲರ ಮುಂದೆ ಶರಣಾಗಿದ್ದಾರೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ, ಟೀಮ್ ಇಂಡಿಯಾ 8 ವಿಕೆಟ್ಗಳ ಅಂತರದಲ್ಲಿ ಮುಗ್ಗರಿಸಿದೆ. ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿರುವ ಆಂಗ್ಲರು, 2-1ರ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆದರೆ ವಿಚಾರವಿರುವುದು ಸೋಲು- ಗೆಲುವಿನ ಬಗೆಗಲ್ಲ. ಬದಲಿಗೆ, ಉತ್ತಮವಾಗಿ ಆಡುತ್ತಿದ್ದ ರಿಶಭ್ ಪಂತ್ನನ್ನು, ರನ್ ಕದಿಯುವ ಅತಿಯಾಸೆಯಿಂದಾಗಿ ಕೊಹ್ಲಿಯೆ ರನ್ಔಟ್ ಮಾಡಿಸಿದ್ದಾರೆ ಎಂಬ ನೆಟ್ಟಿಗರ ಕೋಪದ ಬಗ್ಗೆ.
ರಿಷಭ್ ಪಂತ್ ರನ್‌ಗಾಗಿ ಓಡಿದರು.. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 16 ನಡೆದ 3ನೇ ಟಿ20 ಪಂದ್ಯದಲ್ಲಿ 11ನೇ ಓವರ್ ಎಸೆಯಲು ಬಂದ ಸ್ಯಾಮ್ ಕರನ್ ಮೊದಲ ಎಸೆತಕ್ಕೆ ಬ್ಯಾಟ್ ಬೀಸಿದ ರಿಷಭ್ ಪಂತ್ ರನ್‌ಗಾಗಿ ಓಡಿದರು. ನಾನ್ ಸ್ಟ್ರೈಕ್‌ನಲ್ಲಿದ್ದ ನಾಯಕ ವಿರಾಟ್ ಕೂಡ ಸಿಂಗಲ್ ರನ್ ಮಾಡಿದರು. ಆದರೆ ಇಂಗ್ಲೆಂಡ್ ತಂಡದ ಆಟಗಾರರು ಚುರುಕಿನ ಫೀಲ್ಡಿಂಗ್ ಮಾಡುವಲ್ಲಿ ವಿಫಲರಾದರು. ಇದನ್ನು ಕಂಡ ಪಂತ್ ಮತ್ತು ಕೊಹ್ಲಿ ಮತ್ತೊಂದು ರನ್ ಓಡಿದರು.
ಇಷ್ಟಕ್ಕೆ ಸುಮ್ಮನಾಗದ ಟೀಂ ಇಂಡಿಯಾದ ಜೋಡಿ ಮತ್ತೆ ಮೂರನೇ ರನ್ ಕದಿಯುವ ಯತ್ನದಲ್ಲಿ ಕೊಂಚ ಗೊಂದಲಕ್ಕಿಡಾದರು. ಆರಂಭದಲ್ಲಿ ರನ್ ಬೇಡ ಎಂದು ನಿರ್ಧರಿಸಿದವರೂ ಮತ್ತೆ ಮೂರನೇ ರನ್ ಓಡಲು ಪ್ರಾರಂಭಿಸಿದರು. ಆದರೆ ಇದನ್ನು ಗಮಸಿದ ಜೋಸ್ ಬಟ್ಲರ್ ಚೆಂಡನ್ನು, ವಿಕೆಟ್ ಬಳಿ ನಿಂತಿದ್ದ ಸ್ಯಾಮ್ ಕರನ್‌ನತ್ತ ಎಸೆದರು. ಕೂಡಲೇ ಕರನ್ ಚೆಂಡನ್ನು ವಿಕೆಟ್‌ಗೆ ತಾಗಿಸಿದರು. ಹೀಗಾಗಿ ಪಂತ್ ಔಟಾಗಿ ನಿರ್ಗಮಿಸಬೇಕಾಯ್ತು.
What a brilliant mind game Kohli..salute u..allrounder performance of Indian captain in India's defeat..#INDvENG #RishabhPant #virat#IndianCricketTeam #BCCI #badperformance pic.twitter.com/yZzHxzat7c
— pakas2009@gmail.com (@pakas2009) March 16, 2021
ಕೊಹ್ಲಿ ಏಕಾಂಗಿ ಹೋರಾಟ.. ಪಂತ್ ವಿಕೆಟ್ ಬಳಿಕ ಏಕಾಂಗಿಯಾಗಿ ಮಾರ್ಗನ್ ಪಡೆ ಬೌಲರ್ಗಳ ಮೇಲೆ ಸವಾರಿ ಮಾಡಿದ ಕ್ಯಾಪ್ಟನ್ ಕೊಹ್ಲಿ, ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದು ಆಕರ್ಷಕ ಅರ್ಧಶತಕ ಸಿಡಿಸಿದ್ರು. ಕೇವಲ 46 ಬಾಲ್ಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ ವಿರಾಟ್ ಅಜೇಯ 77 ರನ್ಗಳಿಸಿದ್ರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ಗಳಿಸಿತು. ಇಂಗ್ಲೆಂಡ್ ಪರ ಮಾರ್ಕ್ವುಡ್ 3 ವಿಕೆಟ್ ಮತ್ತು ಕ್ರಿಸ್ ಜೋರ್ಡಾನ್ 2 ವಿಕೆಟ್ ಪಡೆದು ಮಿಂಚಿದ್ರು. ಟೀಂ ಇಂಡಿಯಾ ನೀಡಿದ 157 ರನ್ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ಗೆ ಚಹಲ್ ಆಘಾತ ನೀಡಿದ್ರು. 9 ರನ್ಗಳಿಸಿದ್ದ ಜೇಸನ್ ರಾಯ್ರನ್ನ ಪೆವಿಲಿಯನ್ಗಟ್ಟಿದ್ರು.
ಜೋಸ್ ಬಟ್ಲರ್ ಮತ್ತು ಡೇವಿಡ್ ಮಲನ್ 53 ರನ್ಗಳ ಜೊತೆಯಾಟ ಆದ್ರೆ 2ನೇ ವಿಕೆಟ್‌ಗೆ ಜೊತೆಯಾದ ಜೋಸ್ ಬಟ್ಲರ್ ಮತ್ತು ಡೇವಿಡ್ ಮಲನ್ 53 ರನ್ಗಳ ಜೊತೆಯಾಟವಾಡಿದ್ರು. ಬಟ್ಲರ್ ಆಕರ್ಷಕ ಅರ್ಧಶತಕ ಸಿಡಿಸಿದ್ರೆ, 18 ರನ್ಗಳಿಸಿದ್ದ ಮಲನ್ಗೆ ವಾಷಿಂಗ್ಟನ್ ಸುಂದರ್ ಗೇಟ್ ಪಾಸ್ ನೀಡಿದ್ರು. ನಂತರ ಬಂದ ಜಾರಿ ಬೈರ್ಸ್ಟೊ ಜೊತೆಗೆ ಸ್ಪೋಟಕ ಬ್ಯಾಟಿಂಗ್ ಮಾಡಿದ ಬಟ್ಲರ್, ಇಂಗ್ಲೆಂಡ್ಗೆ ಅದ್ದೂರಿ ಗೆಲುವು ತಂದುಕೊಟ್ರು. ಅಂತಿಮವಾಗಿ ಇಂಗ್ಲೆಂಡ್ ಕೇವಲ 2 ವಿಕೆಟ್ ನಷ್ಟಕ್ಕೆ 18.2 ಓವರ್ಗಳಲ್ಲೇ ಗೇಲುವಿನ ಕೇಕೆ ಹಾಕಿತು. ಇಂಗ್ಲೆಂಡ್ ಪರ 52 ಬಾಲ್ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ ಜೋಸ್ ಬಟ್ಲರ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದ್ರು.