ಮಡದಿಯೊಂದಿಗೆ ಕ್ವಾರಂಟೈನ್​ ಆದ ಭುವನೇಶ್ವರ್​ ಕುಮಾರ್​; ಕೊರೊನಾ ಸೋಂಕಿಗೆ ತುತ್ತಾದ ತಾಯಿ ಆಸ್ಪತ್ರೆಗೆ ದಾಖಲು

ಮಡದಿಯೊಂದಿಗೆ ಕ್ವಾರಂಟೈನ್​ ಆದ ಭುವನೇಶ್ವರ್​ ಕುಮಾರ್​; ಕೊರೊನಾ ಸೋಂಕಿಗೆ ತುತ್ತಾದ ತಾಯಿ ಆಸ್ಪತ್ರೆಗೆ ದಾಖಲು
ಭುವನೇಶ್ವರ್​ ಕುಮಾರ್​ ಮತ್ತು ಪತ್ನಿ ನೂಪುರ್

ಭುವನೇಶ್ವರ್ ಕುಮಾರ್ ಅವರ ತಾಯಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಇವರಿಗೆ ಸೋಂಕಿನ ಲಕ್ಷಣಗಳು ಗೋಚರಿಸಿದೆ. ಸದ್ಯಕ್ಕೆ ಇಬ್ಬರಲ್ಲೂ ಕೊರೊನಾ ಸೋಂಕು ದೃಢವಾಗಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

Skanda

|

Jun 01, 2021 | 1:04 PM

ದೆಹಲಿ: ಕೊರೊನಾ ಎರಡನೇ ಅಲೆ ಯಾರನ್ನೂ ಬಿಡದೇ ಕಾಡುತ್ತಿದೆ. ಜನಸಾಮಾನ್ಯರಿಂದ ಗಣ್ಯಾತಿಗಣ್ಯರ ತನಕ ಲಕ್ಷಾಂತರ ಮಂದಿ ಸೋಂಕಿಗೆ ತುತ್ತಾಗಿ ಸಮಸ್ಯೆ ಅನುಭವಿಸಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಭುವನೇಶ್ವರ್ ಕುಮಾರ್ ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರು ಹಾಗೂ ಅವರ ಮಡದಿ ಕ್ವಾರಂಟೈನ್ ಆಗಿರುವುದಾಗಿ ತಿಳಿಸಿದ್ದಾರೆ. ಮೀರತ್​ನ ನಿವಾಸದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ನೂಪುರ್ ಇಬ್ಬರೂ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಆಗಿದ್ದಾರೆ.

ಭುವನೇಶ್ವರ್ ಕುಮಾರ್ ಅವರ ತಾಯಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಇವರಿಗೆ ಸೋಂಕಿನ ಲಕ್ಷಣಗಳು ಗೋಚರಿಸಿದೆ. ಸದ್ಯಕ್ಕೆ ಇಬ್ಬರಲ್ಲೂ ಕೊರೊನಾ ಸೋಂಕು ದೃಢವಾಗಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಭುವನೇಶ್ವರ್ ಅವರ ತಾಯಿಗೆ ಮೇ 21ರಂದು ಕೊರೊನಾ ಸೋಂಕು ದೃಢಪಟ್ಟಿದ್ದು, ತಕ್ಷಣವೇ ಕುಟುಂಬದ ಇತರೆ ಸದಸ್ಯರು ಪರೀಕ್ಷೆ ಮಾಡಿಸಿಕೊಂಡಿರುವರಾದರೂ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ.

ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್​ ಪಾಲ್ ಸಿಂಗ್ ಕಳೆದ ತಿಂಗಳಷ್ಟೇ ತಮ್ಮ 63ನೇ ವರ್ಷದಲ್ಲಿ ನಿಧನರಾಗಿದ್ದು, ಲಿವರ್ ಕ್ಯಾನ್ಸರ್ ಉಲ್ಬಣಿಸಿದ ಕಾರಣ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಭುವನೇಶ್ವರ್ ಎಲ್ಲಿಗೂ ಹೋಗದೇ ಮನೆಯಲ್ಲೇ ಇದ್ದು ಎಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಹಾಗೂ ಇಂಗ್ಲೆಂಟ್ ವಿರುದ್ಧ ಆಗಸ್ಟ್​ ತಿಂಗಳಲ್ಲಿ ನಡೆಯುವ ಸರಣಿ ಪಂದ್ಯದಲ್ಲಿ ಭುವನೇಶ್ವರ್ ತಂಡದಿಂದ ಹೊರಗುಳಿದಿದ್ದು, ಶ್ರೀಲಂಕಾದಲ್ಲಿ ಜುಲೈನಲ್ಲಿ ಆಯೋಜಿಸಬಹುದೆಂದು ಊಹಿಸಲಾಗಿರುವ ಸೀಮಿತ ಓವರ್​ಗಳ ಪಂದ್ಯದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಶಿಖರ್ ಧವನ್​ ಜತೆಗೆ ಇವರೂ ಕೂಡಾ ಸದರಿ ಪಂದ್ಯಗಳ ನಾಯಕನಾಗಲು ರೇಸ್​ನಲ್ಲಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಇತ್ತೀಚೆಗಷ್ಟೇ ಕೆಲ ವರದಿಗಳು ಭುವನೇಶ್ವರ್ ಕುಮಾರ್ ಟೆಸ್ಟ್ ಪಂದ್ಯಗಳನ್ನು ಆಡಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದವು. ಆದರೆ, ಇದಕ್ಕೆ ತಿರುಗೇಟು ನೀಡಿದ್ದ ಭುವಿ ಊಹಾಪೋಹ ವಿಚಾರಗಳನ್ನು ಬರೆಯಬೇಡಿ ಎಂದು ಪ್ರತಿಕ್ರಿಯಿಸಿದ್ದರು. ನಾನು ಎಲ್ಲಾ ಮಾದರಿಯ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ. ಅದಕ್ಕಾಗಿ ಯಾವಾಗಲೂ ನನ್ನನ್ನು ನಾನು ತಯಾರಿ ಮಾಡಿಕೊಂಡಿರುತ್ತೇನೆ. ತಂಡಕ್ಕೆ ಆಯ್ಕೆ ಆಗಲಿ, ಬಿಡಲಿ ನಾನು ನನ್ನ ಸಿದ್ಧತೆಗಳನ್ನು ಕೈ ಬಿಡುವುದಿಲ್ಲ. ಹೀಗಾಗಿ ಊಹಾಪೋಹ ವಿಚಾರಗಳನ್ನು ಬರೆದು ಮೂಲಗಳು ತಿಳಿಸಿವೆ ಎಂದು ಜಾರಿಕೊಳ್ಳಬೇಡಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಕ್ರಿಕೆಟಿಗ ಭುವನೇಶ್ವರ್ ಕುಮಾರ್​ ತಂದೆ ನಿಧನ; ಭುವಿ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯಲು ತಂದೆ ಅನಾರೋಗ್ಯವೇ ಕಾರಣವಾಗಿತ್ತಾ? 

ಸುಖಾಸುಮ್ಮನೆ ವದಂತಿ ಹರಡಬೇಡಿ; ಟೆಸ್ಟ್‌ ವೃತ್ತಿ ಬದುಕಿನ ಗಾಳಿಸುದ್ದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಭುವನೇಶ್ವರ್

Follow us on

Related Stories

Most Read Stories

Click on your DTH Provider to Add TV9 Kannada