Viral Photo: ನಿಮ್ಮ ಫೇವರೇಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಈ ಚಿತ್ರದಲ್ಲಿ ಎಲ್ಲಿ ನಿಂತಿದ್ದಾರೆಂದು ಗುರುತಿಸಬಲ್ಲಿರಾ?
MS Dhoni: ಹುಟ್ಟು ಹಬ್ಬದ ವಿಶೇಷ ದಿನದಂದು ಧೋನಿ ಅವರು ಶಾಲಾ ವಿದ್ಯಾರ್ಥಿಗಳೊಟ್ಟಿಗೆ ನಿಂತಿರುವ ಫೋಟೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಮಾಜಿ ನಾಯಕ ಎಲ್ಲಿದ್ದಾರೆಂದು ಗುರುತಿಸಬಲ್ಲಿರಾ? ಎಂಬ ಶೀರ್ಷಿಕೆಯೊಂದಿಗೆ ಫೋಟೋ ಹರಿದಾಡುತ್ತಿದೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ನಿನ್ನೆ (ಬುಧವಾರ) ತಮ್ಮ 40ನೇ ವರ್ಷಕ್ಕೆ ಹೆಜ್ಜೆಯಿಟ್ಟರು. ಧೋನಿ ಯಶಸ್ವಿ ನಾಯಕ ಮಾತ್ರವಲ್ಲದೇ ಅತ್ಯುತ್ತಮ ವಿಕೆಟ್ ಕೀಪರ್ ಮತ್ತು ಬೆರಗುಗೊಳಿಸುವ ಫಿನಿಶರ್ ಕೂಡಾ ಆಗಿದ್ದವರು. ಅವರ ನಾಯಕತ್ವದಲ್ಲಿ ಭಾರತವು 2007ರ ವಿಶ್ವ ಟಿ20, 2011ರ ಏಕದಿನ ವಿಶ್ವಕಪ್, 2013 ಚಾಂಪಿಯನ್ಸ್ ಟ್ರೋಫಿ ಗೆದ್ದರು. ತಮ್ಮ ಕಠಿಣ ಪರಿಶ್ರಮದಿಂದ ನಾಯಕ ಸ್ಥಾನ ಗಿಟ್ಟಿಸಿಕೊಂಡು ತಮ್ಮ ಪ್ರತಿಭೆಯ ಮೂಲಕ ಜನ-ಮನಗೆದ್ದ ಮಹೇಂದ್ರ ಸಿಂಗ್ ಧೋನಿ ಅವರ ಚಿಕ್ಕ ವಯಸ್ಸಿನ ಫೋಟೋ ವೈರಲ್ ಆಗಿದೆ. ಆದರೆ ಕುತೂಹಲ ಕೆರಳಿಸುವ ವಿಷಯವೆಂದರೆ ಆ ಫೋಟೋದಲ್ಲಿ ಮಹೀ ಎಲ್ಲಿ ನಿಂತಿದ್ದಾರೆಂದು ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತಿದೆ. ಈ ಚಿತ್ರದಲ್ಲಿ ನೀವು ಮಹೀ ಅವರನ್ನು ಗುರುತಿಸಬಲ್ಲಿರಾ?
ಅಭಿಮಾನಿಗಳು ಸೆಲಿಬ್ರಿಟಿಗಳ ಫೋಟೋವನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ತಾವಿಷ್ಟ ಪಡುವ ಆಟಗಾರ ಕೆಲವು ಭಾವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಧೋನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಅವರ ಚಿಕ್ಕ ವಯಸ್ಸಿನ ಶಾಲಾ ದಿನದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಧೋನಿ ಅವರನ್ನು ಗುರುತಿಸಿ.. ಎಂದು ಸವಾಲ್ ಹಾಕಿದ್ದಾರೆ.
ಧೋನಿ ಅವರ ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳು ಅವರ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಮೂಲಕ ಶುಭಾಶಯ ತಿಳಿಸಿದ್ದರು. ಏತನ್ಮಧ್ಯೆ ಧೋನಿ ಅವರು ಶಾಲಾ ವಿದ್ಯಾರ್ಥಿಗಳೊಟ್ಟಿಗೆ ನಿಂತಿರುವ ಫೋಟೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಮಾಜಿ ನಾಯಕ ಎಲ್ಲಿದ್ದಾರೆಂದು ಗುರುತಿಸುತ್ತೀರಾ? ಎಂಬ ಶೀರ್ಷಿಕೆಯೊಂದಿಗೆ ಫೋಟೋ ಹರಿದಾಡುತ್ತಿದೆ.
Spot @msdhoni in this picture. #HappyBirthdayDhoni #Dhoni #Mahi pic.twitter.com/zVOIhcIZcu
— MS Dhoni Fans Official (@msdfansofficial) July 7, 2021
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಡಲಾಗುತ್ತಿದ್ದಂತೆಯೇ ನೆಟ್ಟಿಗರು ಅತ್ಯಂತ ಕುತೂಹಲದಿಂದ ತಮ್ಮ ಫೇವರೇಟ್ ಆಟಗಾರ ಧೋನಿ ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಕೆಲವರು ಹುಡುಕಲು ಯಶಸ್ವಿಯಾಗಿದ್ದಾರೆ. ಜತೆಗೆ ಅವರ ಖುಷಿಯನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಧೋನಿ ಅವರು ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ದಿನವನ್ನು ಆಚರಿಸಿದರು. ಈ ವಿಡಿಯೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
1st row 7th person
— Santhosh (@Santhosh054321) July 7, 2021
ಇದನ್ನೂ ಓದಿ:
ಧೋನಿಯ 40 ನೇ ಹುಟ್ಟುಹಬ್ಬದಂದು ಅವರೊಂದಿನ ಭಾವನಾತ್ಮಕ ಸಂಬಂಧವನ್ನು ಟ್ವೀಟ್ ಮೂಲಕ ಹಂಚಿಕೊಂಡ ಸುರೇಶ್ ರೈನಾ
Published On - 10:46 am, Thu, 8 July 21