French Open final: ಫ್ರೆಂಚ್ ಓಪನ್ ಫೈನಲ್​: ಗುರುವಿಗೆ ಶಿಷ್ಯನೇ ಎದುರಾಳಿ..!

| Updated By: ಝಾಹಿರ್ ಯೂಸುಫ್

Updated on: Jun 04, 2022 | 1:51 PM

French Open 2022: ಕ್ಯಾಸ್ಪರ್ ರೂಡ್ ಮತ್ತು ಮರಿನ್ ಸಿಲಿಕ್ ನಡುವಿನ ಫ್ರೆಂಚ್ ಓಪನ್ ಸೆಮಿಫೈನಲ್ ಪಂದ್ಯದ ವೇಳೆ, ಪರಿಸರ ಕಾರ್ಯಕರ್ತೆಯೊಬ್ಬರು ಕೋರ್ಟ್‌ಗೆ ಪ್ರವೇಶಿಸಿದ್ದರು.

French Open final: ಫ್ರೆಂಚ್ ಓಪನ್ ಫೈನಲ್​: ಗುರುವಿಗೆ ಶಿಷ್ಯನೇ ಎದುರಾಳಿ..!
Casper Ruud-Rafael Nadal
Follow us on

French Open final 2022: ಟೆನಿಸ್ ಅಂಗಳದ ಯುವ ತಾರೆ ಕ್ಯಾಸ್ಪರ್ ರೂಡ್ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಮೊದಲ ನಾರ್ವೆಯ ಆಟಗಾರ ಎನಿಸಿಕೊಂಡಿದ್ದಾರೆ. ಫ್ರೆಂಚ್ ಓಪನ್‌ನ ಸೆಮಿಫೈನಲ್‌ನಲ್ಲಿ 2014 ರ ಯುಎಸ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್ ಅವರನ್ನು 3-6, 6-4, 6-2, 6-2 ಸೆಟ್‌ಗಳಿಂದ ಸೋಲಿಸಿ ರೂಡ್ ಅಂತಿಮಘಟ್ಟಕ್ಕೆ ತಲುಪಿದರು. 8ನೇ ಶ್ರೇಯಾಂಕದಲ್ಲಿರುವ 23 ವರ್ಷದ ರೂಡ್ 2020 ರ ಆರಂಭದಿಂದ ಕ್ಲೇ ಕೋರ್ಟ್‌ಗಳಲ್ಲಿ 66 ಪಂದ್ಯಗಳು ಮತ್ತು 7 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈಗ ಅವರ ಮುಂದಿರುವುದು ವೃತ್ತಿ ಜೀವನದ ಅತ್ಯಂತ ಕಠಿಣ ಸವಾಲು. ಏಕೆಂದರೆ ಭಾನುವಾರದ ಫೈನಲ್‌ನಲ್ಲಿ 13 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ ಅವರನ್ನು ಎದುರಿಸಲಿದ್ದಾರೆ. ವಿಶೇಷ ಎಂದರೆ ಸ್ಪೇನ್‌ನಲ್ಲಿರುವ ನಡಾಲ್‌ನ ಟೆನಿಸ್ ಅಕಾಡೆಮಿಯಲ್ಲೇ ಕ್ಯಾಸ್ಪರ್ ರೂಡ್ ಅಭ್ಯಾಸ ಮಾಡುತ್ತಾರೆ. ಅಲ್ಲದೆ ಇದೀಗ ತನ್ನ ರೋಲ್ ಮಾಡೆಲ್ ರಾಫೆಲ್ ನಡಾಲ್ ವಿರುದ್ದವೇ ಫೈನಲ್ ಆಡುವ ಅವಕಾಶ ದೊರೆತಿದೆ. ಇತ್ತ ತನ್ನದೇ ಅಕಾಡೆಮಿಯ ಶಿಷ್ಯನೊಂದಿಗೆ ಆಡುವ ಅವಕಾಶವೊಂದು ರಾಫೆಲ್ ನಡಾಲ್​ ಅವರಿಗೂ ಒದಗಿ ಬಂದಿದ್ದು, ಹೀಗಾಗಿ ಅಂತಿಮ ಹಣಾಹಣಿಯನ್ನು ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿದೆ.

ಇದಕ್ಕೂ ಮುನ್ನ ಅಲೆಕ್ಸಾಂಡರ್ ಜ್ವೆರೆವ್ ಗಾಯಗೊಂಡಿದ್ದರಿಂದ ರಾಫೆಲ್ ನಡಾಲ್ ಫೈನಲ್‌ಗೆ ಪ್ರವೇಶಿಸಿದ್ದರು. ಎಡಗಾಲಿನ ಗಾಯದಿಂದಾಗಿ ಜ್ವೆರೆವ್ ಎರಡನೇ ಸೆಟ್‌ನ ನಂತರ ಪಂದ್ಯವನ್ನು ತೊರೆದರು. ನಡಾಲ್ ಮೊದಲ ಸೆಟ್ ಅನ್ನು 7-6 ರಿಂದ ಗೆದ್ದರು. ನಡಾಲ್ ತನ್ನ 19ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದಿದ್ದರು. ಈ ಬಾರಿ ಕ್ವಾರ್ಟರ್​ಫೈನಲ್​ನಲ್ಲಿ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ಮಿಂಚಿದ್ದರು. ಇದೀಗ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ನಡಾಲ್​​ಗೆ ಶಿಷ್ಯನೇ ಎದುರಾಳಿ ಆಗಿರುವುದು ವಿಶೇಷ.

13 ನಿಮಿಷಗಳ ಕಾಲ ಆಟ ಸ್ಥಗಿತ:
ಕ್ಯಾಸ್ಪರ್ ರೂಡ್ ಮತ್ತು ಮರಿನ್ ಸಿಲಿಕ್ ನಡುವಿನ ಫ್ರೆಂಚ್ ಓಪನ್ ಸೆಮಿಫೈನಲ್ ಪಂದ್ಯದ ವೇಳೆ, ಪರಿಸರ ಕಾರ್ಯಕರ್ತೆಯೊಬ್ಬರು ಕೋರ್ಟ್‌ಗೆ ಪ್ರವೇಶಿಸಿದ್ದರು. ಅವರ ಟೀ ಶರ್ಟ್ ಮೇಲೆ ‘ನಮಗೆ 1028 ದಿನಗಳು ಉಳಿದಿವೆ’ ಎಂದು ಬರೆಯಲಾಗಿತ್ತು. ಪ್ರತಿಭಟನೆಯ ಭಾಗವಾಗಿ ಮೈದಾನಕ್ಕೆ ಇಳಿದ ಪರಿಸರ ಕಾರ್ಯಕರ್ತೆಯನ್ನು ಭದ್ರತಾ ಸಿಬ್ಬಂದಿಗಳು ಕೂಡಲೇ ವಶಕ್ಕೆ ಪಡೆಯಿತು. ಇದಾಗ್ಯೂ ಸುಮಾರು 13 ನಿಮಿಷಗಳ ಕಾಲ ಆಟಕ್ಕೆ ಅಡ್ಡಿಯಾಯಿತು. ಫ್ರೆಂಚ್ ಟೆನಿಸ್ ಫೆಡರೇಶನ್ ಪ್ರಕಟಣೆಯಲ್ಲಿ, ಮೈದಾನದಕ್ಕೆ ಪ್ರವೇಶಿಸಿದ್ದ ಹುಡುಗಿ ಪಂದ್ಯದ ಟಿಕೆಟ್‌ ಹೊಂದಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಆಟಗಾರರ ಸುರಕ್ಷತೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಫ್ರೆಂಚ್ ಟೆನಿಸ್ ಫೆಡರೇಶನ್ ತಿಳಿಸಿದೆ.

ಇದನ್ನೂ ಓದಿ
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.