IND vs PAK: ಈ ವರ್ಷ ಭಾರತ-ಪಾಕಿಸ್ತಾನ್ 5 ಬಾರಿ ಮುಖಾಮುಖಿಯಾಗುವ ಸಾಧ್ಯತೆ..!

IND vs PAK Schedule: ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲೂ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಅಕ್ಟೋಬರ್ 23 ರಂದು ನಡೆಯಲಿರುವ ಸೂಪರ್-12 ಪಂದ್ಯದ ಮೂಲಕ ಉಭಯ ತಂಡಗಳು ಟಿ20 ವಿಶ್ವಕಪ್​ ಅಭಿಯಾನ ಆರಂಭಿಸಲಿರುವುದು ವಿಶೇಷ.

IND vs PAK: ಈ ವರ್ಷ ಭಾರತ-ಪಾಕಿಸ್ತಾನ್ 5 ಬಾರಿ ಮುಖಾಮುಖಿಯಾಗುವ ಸಾಧ್ಯತೆ..!
India vs Pakistan
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 04, 2022 | 12:46 PM

ಟಿ20 ವಿಶ್ವಕಪ್​ 2021 ರ ಹೀನಾಯ ಸೋಲಿನ ಬಳಿಕ ಭಾರತ ತಂಡವು ಪಾಕಿಸ್ತಾನ್ ವಿರುದ್ದ ಯಾವುದೇ ಪಂದ್ಯವಾಡಿಲ್ಲ. ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯದ ಕಾರಣ, ಮತ್ತೊಮ್ಮೆ ಮುಖಾಮುಖಿಗೆ ಐಸಿಸಿ ಟಿ20 ವಿಶ್ವಕಪ್​ ತನಕ ಕಾಯಲೇಬೇಕು. ಆದರೆ ಇದರ ನಡುವೆ ಏಷ್ಯಾ ಕಪ್ ನಡೆಸಲು ಏಷ್ಯನ್ ಕ್ರಿಕೆಟ್ ಅಸೋಷಿಯೇಷನ್ ಮುಂದಾಗಿದೆ. ಅದರಂತೆ ಟಿ20 ವಿಶ್ವಕಪ್​ಗೂ ಮುನ್ನವೇ ಈ ಬಾರಿ ಏಷ್ಯಾಕಪ್ ನಡೆಯಲಿದೆ. ಈ ಬಾರಿ ಏಷ್ಯಾಕಪ್​ ಟಿ20 ಮಾದರಿಯಲ್ಲಿ ನಡೆಯಲಿದ್ದು, ಹೀಗಾಗಿ ಪಾಕಿಸ್ತಾನ್​ ವಿರುದ್ದ ಟಿ20 ವಿಶ್ವಕಪ್​ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.

ವಿಶೇಷ ಎಂದರೆ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ್ ಗ್ರೂಪ್ ಹಂತದಲ್ಲಿ ಮೊದಲು ಮುಖಾಮುಖಿಯಾಗಲಿದೆ. ಇದಾದ ಬಳಿಕ ಸೂಪರ್ ಫೋರ್ ಹಂತ ನಡೆಯಲಿದೆ. ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ಸೂಪರ್-4 ಆಡುವುದು ಬಹುತೇಕ ಖಚಿತ ಎನ್ನಬಹುದು. ಹೀಗಾಗಿ ಗ್ರೂಪ್​ ಹಂತದಲ್ಲಿ ಹಾಗೂ ಸೂಪರ್-4 ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ. ಹಾಗೆಯೇ ಎರಡೂ ತಂಡಗಳು ಫೈನಲ್​ಗೆ ಪ್ರವೇಶಿಸಿದರೆ ಮೂರನೇ ಬಾರಿ ಮುಖಾಮುಖಿಯಾಗಬಹುದು.

ಇದನ್ನೂ ಓದಿ: ಸೌತ್ ಆಫ್ರಿಕಾ ವಿರುದ್ದ ಕೆಎಲ್ ರಾಹುಲ್​ಗೆ ಅಗ್ನಿಪರೀಕ್ಷೆ

ಇದನ್ನೂ ಓದಿ
Image
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Image
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಇನ್ನು ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲೂ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಅಕ್ಟೋಬರ್ 23 ರಂದು ನಡೆಯಲಿರುವ ಸೂಪರ್-12 ಪಂದ್ಯದ ಮೂಲಕ ಉಭಯ ತಂಡಗಳು ಟಿ20 ವಿಶ್ವಕಪ್​ ಅಭಿಯಾನ ಆರಂಭಿಸಲಿರುವುದು ವಿಶೇಷ. ಇದಾಗಿ ಎರಡೂ ತಂಡಗಳು ಫೈನಲ್​ ಪ್ರವೇಶಿಸಿದರೆ ಮತ್ತೊಮ್ಮೆ ಮುಖಾಮುಖಿಯಾಗಬಹುದು. ಅಂದರೆ ಏಷ್ಯಾಕಪ್​ನಲ್ಲಿ 3 ಬಾರಿ ಹಾಗೂ ಟಿ20 ವಿಶ್ವಕಪ್​ನಲ್ಲಿ 2 ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಈ ಮೂಲಕ 2022 ರಲ್ಲಿ ಭಾರತ-ಪಾಕಿಸ್ತಾನ್ ನಡುವಣ 5 ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಒದಗಿ ಬಂದರೂ ಅಚ್ಚರಿಪಡಬೇಕಿಲ್ಲ.

ಇದಾಗ್ಯೂ ಏಷ್ಯಾಕಪ್​ನಲ್ಲಿಹಾಗೂ ಟಿ20 ವಿಶ್ವಕಪ್​ನಲ್ಲಿ ಒಂದು ಬಾರಿ ಭಾರತ-ಪಾಕಿಸ್ತಾನ್ ಮುಖಾಮುಖಿ ಖಚಿತವಾಗಿದ್ದು, ಹೀಗಾಗಿ ಈ ಎರಡೂ ಪಂದ್ಯಗಳಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಈ ಭಾರತ-ಪಾಕಿಸ್ತಾನ್ ನಡುವಣ ಈ ಎರಡು ಪಂದ್ಯಗಳಿಂದ ಹೆಚ್ಚುವರಿ 3 ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್​ ಪ್ರೇಮಿಗಳಿಗೆ ಒದಗಿ ಬರಲಿದೆಯಾ ಕಾದು ನೋಡಬೇಕಿದೆ.

ಅಂದಹಾಗೆ ಏಷ್ಯಾಕಪ್​ ವೇಳಾಪಟ್ಟಿ ಇನ್ನೂ ಕೂಡ ಪ್ರಕಟವಾಗಿಲ್ಲ. ಹಾಗೆಯೇ 2022ರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ವೇಳಾಪಟ್ಟಿ ಈ ಕೆಳಗಿನಂತಿದೆ.

ಟಿ20 ವಿಶ್ವಕಪ್ 2022ರ ಗ್ರೂಪ್ ಮತ್ತು ಭಾರತ ತಂಡದ ವೇಳಾಪಟ್ಟಿ:

  1. ಗ್ರೂಪ್ ಎ: ಶ್ರೀಲಂಕಾ, ನಮೀಬಿಯಾ, ಎರಡು ಕ್ವಾಲಿಫೈಯರ್ ತಂಡಗಳು
  2. ಗ್ರೂಪ್ ಬಿ: ವೆಸ್ಟ್​ ಇಂಡೀಸ್, ಸ್ಕಾಟ್ಲೆಂಡ್, ಎರಡು ಕ್ವಾಲಿಫೈಯರ್ ತಂಡಗಳು

ಸೂಪರ್ 12 ಗ್ರೂಪ್​:

  1. ಗ್ರೂಪ್ 1: ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್, A1, A2
  2. ಗ್ರೂಪ್ 2: ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್, B1, B2

ಟೀಮ್ ಇಂಡಿಯಾದ ಪಂದ್ಯಗಳ ವೇಳಾಪಟ್ಟಿ:

  1. ಭಾರತ vs ಪಾಕಿಸ್ತಾನ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 23
  2. ಭಾರತ vs ಗ್ರೂಪ್ A ರನ್ನರ್ ಅಪ್, ಸಿಡ್ನಿ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 27
  3. ಭಾರತ vs ದಕ್ಷಿಣ ಆಫ್ರಿಕಾ, ಪರ್ತ್ ಸ್ಟೇಡಿಯಂ, ಅಕ್ಟೋಬರ್ 30
  4. ಭಾರತ vs ಬಾಂಗ್ಲಾದೇಶ, ಅಡಿಲೇಡ್ ಓವಲ್, ನವೆಂಬರ್ 2

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.