ಮಾಲ್ಡೀವ್ಸ್​ನಲ್ಲಿ ಸಮುದ್ರದಾಳಕ್ಕೆ ಇಳಿದು ಪುಶ್​ ಅಪ್ಸ್​ ಮಾಡಿದ ಯೂನಿರ್ವಸಲ್​ ಬಾಸ್​ ಕ್ರಿಸ್​ ಗೇಲ್! ವಿಡಿಯೋ ನೋಡಿ

| Updated By: guruganesh bhat

Updated on: May 18, 2021 | 5:30 PM

Chris Gayle: ಸಮುದ್ರ ತಳದಲ್ಲಿ ದಂಡಗಳನ್ನು ಹೊಡೆದ ದೈತ್ಯ ಕ್ರಿಸ್​ ಗೇಲ್, ಒಂದಷ್ಟು ಮರಳನ್ನು ಜೇಬಿಗೆ ಹಾಕಿಕೊಂಡು ಸಾಹಸ ಮಾಡಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ ಅವರು ತಮ್ಮ ಎರಡು ಆಲ್ಬಂ ಹಾಡುಗಳನ್ನೂ (Oh Mama and Choco Loco Remix) ಪ್ರಮೋಟ್​ ಮಾಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಸಮುದ್ರದಾಳಕ್ಕೆ ಇಳಿದು ಪುಶ್​ ಅಪ್ಸ್​ ಮಾಡಿದ ಯೂನಿರ್ವಸಲ್​ ಬಾಸ್​ ಕ್ರಿಸ್​ ಗೇಲ್! ವಿಡಿಯೋ ನೋಡಿ
ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್​ ಕೆಲ ದಿನಗಳ ಹಿಂದೆಯಷ್ಟೇ ಎಲ್ಲಾ ಮಾದರಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದರೊಂದಿಗೆ ಎಬಿಡಿ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. 37 ವರ್ಷದ ಎಬಿಡಿ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಬೆನ್ನಲ್ಲೇ ಟಿ20 ಕ್ರಿಕೆಟ್​ನ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ನಿವೃತ್ತಿ ಬಗ್ಗೆ ಕೂಡ ಚರ್ಚೆಗಳು ಶುರುವಾಗಿದ್ದವು.
Follow us on

ಯೂನಿರ್ವಸಲ್​ ಬಾಸ್​ ಎಂದು ಜನಜನಿತರಾದ ವೆಸ್ಟ್​ ಇಂಡೀಸ್​ ದೈತ್ಯ ಬ್ಯಾಟ್ಸ್​ಮನ್​ ಕ್ರಿಸ್​ ಗೇಲ್ ಆಗಾಗ ಮೈದಾನದಲ್ಲಿ ಮತ್ತು ಮೈದಾನದಾಚೆಗೂ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಈ ಬಾರಿ ಸೀದಾ ಸಮುದ್ರದಾಳಕ್ಕೆ ನೆಗೆದು ಅಲ್ಲಿಯೂ ಒಂದಷ್ಟು ಸಾಹಸಗಳನ್ನು ಮಾಡಿ, ಅಭಿಮಾನಿಗಳ ಹುಬ್ಬೇರಿಸಿದ್ದಾರೆ!

ಹೌದು ಕೊರೊನಾ ಕ್ರಿಮಿಯಿಂದಾಗಿ IPL 2021 ಮುಂದೂಡಲ್ಪಡುತ್ತಿದ್ದಂತೆ ಬಹುತೇಕ ಆಟಗಾರರು ತಮ್ಮ ತಮ್ಮ ಸುರಕ್ಷಿತ ಗೂಡುಗಳನ್ನು ಸೇರಿಕೊಂಡಿದ್ದಾರೆ. ಆದರೆ ಈ ದೈತ್ಯಜೀವಿ​ ಕ್ರಿಸ್​ ಗೇಲ್ ಮಾತ್ರ ಕೊರೊನಾಗೆ ಡೋಂಟ್​ ಕೇರ್​ ಅನ್ನುತ್ತಾ ಮಾಲ್ಡೀವ್ಸ್​ಗೆ ಹಾರಿದ್ದಾರೆ. ಅಲ್ಲಿ ನೀರಿನಲ್ಲಿ ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮತ್ತು ಅದನ್ನು ವಿಡಿಯೋ ರೆಕಾರ್ಡ್​ ಮಾಡಿ, ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಡಿದ್ದಾರೆ.

IPL 2021 ಭಾಗವಹಿಸಿದ್ದ ಅನೇಕ ಆಟಗಾರರು ಕೊರೊನಾ ಕೊರೊನಾ ಅನ್ನುತ್ತಿದ್ದಂತೆ ಐಸಿಸಿ ಆಡಳಿತ ಸಮಿತಿ ಮತ್ತು ಬಿಸಿಸಿಐ ಆಟವನ್ನು ಅರ್ಧಕ್ಕೇ ನಿಲ್ಲಿಸಿ, ಆಟಗಾರರನ್ನು ಸುರಕ್ಷಿತವಾಗಿ ಅವರವರ ಊರುಗಳಿಗೆ ಬಿಟ್ಟುಬಂದಿದೆ. ಆದರೆ ಒಬ್ಬ Universe Boss ಕ್ರಿಸ್​ ಗೇಲ್ ಮಾತ್ರ ಸೀದಾ ಸಮುದ್ರಕ್ಕೆ ಜಿಗಿದಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ತಂಡದ ಒಂದಷ್ಟು ಆಟಗಾರರೂ ಅನಿವಾರ್ಯವಾಗಿ ಮಾಲ್ಡೀವ್ಸ್​ನಲ್ಲಿ ಸಮಯ ಕಳೆಯುತ್ತಿದ್ದಾರೆ.

ತಮ್ಮ ದೇಶದ ಉಳಿದ ಐಪಿಎಲ್ ಆಟಗಾರರ ಜೊತೆ ಹುಟ್ಟೂರಿಗೆ ವಾಪಸಾಗದೆ ಮಾಲ್ಡಿವೀಸ್​ಗೆ ತೆರಳಿ ದಿನಕ್ಕೊಂದರಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್​ಗಳನ್ನು ಹಾಕುತ್ತಾ ಅಭಿಮಾನಿಗಳಿಗೆ ತಮ್ಮ ಇರುವನ್ನು ಪ್ರಚುರಪಡಿಸಿದ್ದಾರೆ. ಮಾಲ್ಡಿವೀಸ್​ನಲ್ಲಿ ಸಮುದ್ರದಲ್ಲಿ ಸ್ಕೂಬಾ ಡೈವ್​ ಮಾಡಿದ ಹಿರಿಯಣ್ಣ ಕ್ರಿಸ್​ ಗೇಲ್ ಅಲ್ಲಿ ಜಲಚರಗಳನ್ನು ಬೆರಗುಗಣ್ಣಿಂದ ನೋಡಿ, ಆನಂದಿಸಿದ್ದಾರೆ.

ಸಮುದ್ರ ತಳದಲ್ಲಿ ದಂಡಗಳನ್ನು ಹೊಡೆದ (push ups) ದೈತ್ಯ ಕ್ರಿಸ್​ ಗೇಲ್, ಒಂದಷ್ಟು ಮರಳನ್ನು ಜೇಬಿಗೆ ಹಾಕಿಕೊಂಡು ಸಾಹಸ ಮಾಡಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ ಅವರು ತಮ್ಮ ಎರಡು ಆಲ್ಬಂ ಹಾಡುಗಳನ್ನೂ (Oh Mama and Choco Loco Remix) ಪ್ರಮೋಟ್​ ಮಾಡಿದ್ದಾರೆ.

(Chris Gayle does Underwater Workout In Maldives posts a video on Instagram account Fans Stunned)