2021ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಮೊರಿಸ್ 16.25 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಮೊರಿಸ್ ಮೂಲ ಬೆಲೆ 75 ಲಕ್ಷ ರೂಪಾಯಿ ಇತ್ತು. ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ 2020ರಲ್ಲಿ ಆರ್ಸಿಬಿ ಪರ ಆಡಿದ್ದರು. ಗಾಯದ ಸಮಸ್ಯೆಯಿಂದ ಕೆಲ ಮ್ಯಾಚ್ಗಳಿಗೆ ಅವರು ಅಲಭ್ಯರಾಗಿದ್ದರು. ಆದರೆ, ಆಡಿದ ಕೆಲವೇ ಮ್ಯಾಚ್ಗಳಲ್ಲಿ ಅವರು ಮಿಂಚಿದ್ದರು. ಆದಾಗ್ಯೂ, ಆರ್ಸಿಬಿ ಅವರನ್ನು ತಂಡದಿಂದ ಕೈಬಿಟ್ಟಿತ್ತು.
ಕ್ರಿಸ್ ಮೊರಿಸ್ಗೆ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಬಿಡ್ ಮಾಡಿತ್ತು. ಆರ್ಸಿಬಿ ಕೂಡ ಇಂದಿನ ಪಂದ್ಯದಲ್ಲಿ ಬಿಡ್ ಮಾಡಿತ್ತು. ಆರ್ಸಿಬಿ ಕ್ರಿಸ್ ಮಾರಿಸ್ಗೆ 12.75 ಕೋಟಿ ರೂಪಾಯಿವರೆಗೆ ಬಿಡ್ ಮಾಡಿತ್ತು. ಮೊರಿಸ್ ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಭಾರೀ ಪೈಪೋಟಿ ನಡೆದಿತ್ತು. ಈ ಮಧ್ಯೆ ಪಂಜಾಬ್ ಕೂಡ ಹರಾಜಿನಲ್ಲಿ ಸೇರಿಕೊಂಡು 16 ಕೋಟಿ ರೂಪಾಯಿ ಕೂಗಿತ್ತು. ಕೊನೆಗೆ ರಾಜಸ್ಥಾನ್ ರಾಯಲ್ಸ್ 16.25 ಕೋಟಿ ರೂಪಾಯಿಗೆ ಖರೀದಿಸಿತು.
Base price – INR 75 Lac
Sold for – INR 16.25 Cr@rajasthanroyals win the bidding war to bring @Tipo_Morris on board. ??@Vivo_India #IPLAuction pic.twitter.com/m5AMqKE1Dy— IndianPremierLeague (@IPL) February 18, 2021
ವಿದೇಶಿ ಆಟಗಾರಾನೊಬ್ಬ ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗಿದ್ದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಕಳೆದ ಬಾರಿ ಪ್ಯಾಟ್ ಕುಮ್ಮಿನ್ಸ್ 15.5 ಕೋಟಿ ರೂಪಾಯಿಗೆ ಮಾರಾಟವಾಗಿದ್ದರು. ಈವರೆಗೆ ಅತಿ ಹೆಚ್ಚು ಬೆಲೆಗೆ ಮಾರಾಟವಾದ ವಿದೇಶಿ ಆಟಗಾರ ಇವರಾಗಿದ್ದರು.
ಇದನ್ನೂ ಓದಿ: IPL Auction 2021 Sold Players List: ಐಪಿಎಲ್ 2021 ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ ಹೀಗಿದೆ
ಇದನ್ನೂ ಓದಿ: IPL 2021 Auction; List of Unsold Players: ಐಪಿಎಲ್ನಲ್ಲಿ ಮಾರಾಟವಾಗದೆ ಉಳಿದ ಸ್ಟಾರ್ ಆಟಗಾರರ ಪಟ್ಟಿ ಇಲ್ಲಿದೆ
Published On - 4:39 pm, Thu, 18 February 21