CWG 2022: ಕಾಮನ್​ವೆಲ್ತ್​ನಲ್ಲಿ ಭಾರತಕ್ಕೆ 13ನೇ ಚಿನ್ನ: ಬಂಗಾರಕ್ಕೆ ಕೊರಳೊಡ್ಡಿದ ಭವಿನಾ ಪಟೇಲ್

| Updated By: Vinay Bhat

Updated on: Aug 07, 2022 | 8:35 AM

Bhavina Patel: ಭಾರತೀಯ ಕಾಲಮಾನದ ಪ್ರಕಾರ ಶನಿವಾರ ತಡರಾತ್ರಿ ನಡೆದ ಪ್ಯಾರಾ ಟೇಬಲ್ ಟೆನ್ನಿಸ್ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಆಟಗಾರ್ತಿ ಭವಿನಾ ಪಟೇಲ್ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.

CWG 2022: ಕಾಮನ್​ವೆಲ್ತ್​ನಲ್ಲಿ ಭಾರತಕ್ಕೆ 13ನೇ ಚಿನ್ನ: ಬಂಗಾರಕ್ಕೆ ಕೊರಳೊಡ್ಡಿದ ಭವಿನಾ ಪಟೇಲ್
Bhavina Patel
Follow us on

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್‌ ಕ್ರೀಡಾ (Commonwealth Games 2022) ಕೂಟದಲ್ಲಿ ಭಾರತದ ಪದಕದ ಭೇಟೆ ಮುಂದುವರೆದಿದೆ. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ತಡರಾತ್ರಿ ನಡೆದ ಪ್ಯಾರಾ ಟೇಬಲ್ ಟೆನ್ನಿಸ್ (Table Tennis) ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಆಟಗಾರ್ತಿ ಭವಿನಾ ಪಟೇಲ್ (Bhavina Patel) ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ಇಕ್ಪಿಯೋಯಿ ಅವರನ್ನು ಮಣಿಸಿ ಬಂಗಾರದ ಪದಕ ಬಾಜಿಕೊಂಡಿದ್ದಾರೆ. ಅತ್ಯುತ್ತಮ ಆಟ ಪ್ರದರ್ಶಿಸಿದ ಪಟೇಲ್, 12-10, 11-2, 11-9 ರಲ್ಲಿ ಇಕ್ಪಿಯೊಯಿ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಆಡಿದ ಮೂರು ಸುತ್ತುಗಳಲ್ಲಿಯೂ ಪರಾಕ್ರಮ ಮೆರೆದ ಪಟೇಲ್, ಅಂತಿಮವಾಗಿ ಐತಿಹಾಸಿಕ ಸಾಧನೆ ತೋರಿದ್ದಾರೆ.

 

ಇದನ್ನೂ ಓದಿ
CWG 2022: ಫೈನಲ್​ನಲ್ಲಿ ಪಾಕಿಸ್ತಾನದ ಕುಸ್ತಿಪಟುವನ್ನು ಉಸಿರುಗಟ್ಟಿಸಿ ಭಾರತಕ್ಕೆ ಚಿನ್ನ ಗೆದ್ದ ನವೀನ್..!
CWG 2022: ಕುಸ್ತಿಯಲ್ಲಿ ಭಾರತಕ್ಕೆ 5ನೇ ಚಿನ್ನ; 53 ಕೆಜಿ ವಿಭಾಗದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ವಿನೇಶ್ ಫೋಗಟ್
CWG 2022: ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ; 57 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ರವಿ ದಹಿಯಾ
CWG 2022: ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಪದಕ; 50 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ಪೂಜಾ ಗೆಹ್ಲೋಟ್

ಇದಕ್ಕೂ ಮೊದಲು, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಮತ್ತೋರ್ವ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಸೋನಾಲ್ಬೆನ್ ಮನುಭಾಯ್ ಪಟೇಲ್ ಅವರು ಇಂಗ್ಲೆಂಡ್‌ನ ಸ್ಯೂ ಬೈಲಿಯನ್ನು ಸೋಲಿಸಿ ಕಂಚಿನ ಪದಕ ಸಂಪಾದಿಸಿದರು. ಇವರು ಸ್ಯೂ ಬೈಲಿ ಅವರನ್ನು 11-5, 11-2, 11-3 ಅಂಕಗಳಿಂದ ಸೋಲಿಸಿದರು. ಇದೀಗ ಭಾರತ ಒಟ್ಟು 40 ಪದಕವನ್ನು ಬಾಜಿಕೊಂಡಿದ್ದು 13 ಚಿನ್ನ, 11 ಬೆಳ್ಳಿ ಮತ್ತು 16 ಕಂಚಿನ ಪದಕ ಗೆದ್ದುಕೊಂಡಿದೆ.

ಇನ್ನು ಭಾರತ ಪುರುಷರ ಹಾಕಿ ತಂಡ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ರೋಚಕ ಜಯ ಸಾಧಿಸಿತು. ಆರಂಭದಿಂದಲೂ ಸಾಕಷ್ಟು ರೋಚಕತೆ ಸೃಷ್ಟಿಸಿದ ಪಂದ್ಯದ ಮೊದಲ ಕ್ವಾರ್ಟರ್​ನಲ್ಲಿ ಉಭಯ ತಂಡಗಳಿಗೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಎರಡನೇ ಕ್ವಾರ್ಟರ್‌ ನಲ್ಲಿ ಭಾರತ ಎರಡು ಗೋಲು ಗಳಿಸಿತು. ಅಭಿಷೇಕ್ ಅವರು ಭಾರತದ ಖಾತೆ ತೆರೆದರೆ, ಮನದೀಪ್ ಸಿಂಗ್ ಏಕಾಂಗಿ ಸಾಹಸದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತ ಮುನ್ನಡೆ ಕಾಯ್ದುಕೊಂಡಿತು. ಪಂದ್ಯದ ಕೊನೆಯ ವೇಳೆಗೆ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದವು. ಕೊನೆ ಹಂತದಲ್ಲಿ ಆಫ್ರಿಕಾವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಭಾರತ ಜಯ ಸಾಧಿಸಿ ಫೈನಲ್​ಗೆ ಪ್ರವೇಸಿಸಿದೆ.

Published On - 8:00 am, Sun, 7 August 22