CWG 2022: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಬೆಳ್ಳಿ ಗೆದ್ದ ಗುರ್ದೀಪ್ ಸಿಂಗ್
Gurdeep Singh: ವೇಟ್‌ಲಿಫ್ಟರ್ ಗುರ್ದೀಪ್ ಸಿಂಗ್ ಅವರು ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಪುರುಷರ 109kg ವಿಭಾಗದಲ್ಲಿ ಒಟ್ಟು 390 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ ಗುರ್ದೀಪ್ ಬೆಳ್ಳಿಗೆ (Silver) ಕೊರಳೊಡ್ಡಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್ ಕ್ರೀಡಾ (Commonwealth Games 2022) ಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಶಕ್ತಿ ಪ್ರದರ್ಶನ ಮುಂದುವರಿದಿದೆ. ವೇಟ್‌ಲಿಫ್ಟರ್ ಗುರ್ದೀಪ್ ಸಿಂಗ್ (Gurdeep Singh) ಅವರು ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಪುರುಷರ 109kg ವಿಭಾಗದಲ್ಲಿ ಒಟ್ಟು 390 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ ಗುರ್ದೀಪ್ ಬೆಳ್ಳಿಗೆ (Silver) ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 18 ಕ್ಕೇರಿದೆ. ವಿಶೇಷ ಎಂದರೆ ಇದುವರೆಗೆ ಬಂದಿರುವ 18 ಪದಕಗಳ ಪೈಕಿ 10 ಪದಕ ವೇಟ್ಲಿಫ್ಟಿಂಗ್ನಿಂದಲೇ ಆಗಿದೆ. ಸ್ನಾಚ್ ರೌಂಡ್ನ 167kg ಯಲ್ಲಿ ಯಶಸ್ಸು ಸಾಧಿಸಲು ಆಗಲಿಲ್ಲ. ಒಟ್ಟಾರೆ ಸ್ನಾಚ್ ರೌಂಡ್ ಅನ್ನು ಮೂರನೇ ಸ್ಥಾನದ ಮೂಲಕ ಅಂತ್ಯಗೊಳಿಸಿದರು. ಆದರೆ, ಜೆರ್ಕ್ ರೌಂಡ್ನ ಮೊದಲ ಪ್ರಯತ್ನದಲ್ಲೇ 207 ಕೆಜಿ ಎತ್ತಿದರು. 215Kgಯ ಎರಡನೇ ಪ್ರಯತ್ನದಲ್ಲಿ ವಿಫಲರಾದರು. ಕೊನೆಯ ಪ್ರಯತ್ನದಲ್ಲಿ 223kg ಭಾರತ ಎತ್ತುವ ಮೂಲಕ ಕಂಚನ್ನು ಬಾಜಿಕೊಂಡಿದ್ದಾರೆ. ಸದ್ಯ ಭಾರತ 18 ಪದಕವನ್ನು ಬಾಜಿಕೊಂಡಿದ್ದು ಐದು ಚಿನ್ನ, 6 ಬೆಳ್ಳಿ ಮತ್ತು 7 ಕಂಚಿನ ಪದಕ ಗೆದ್ದುಕೊಂಡಿದೆ.
ತೇಜಸ್ವಿನ್ ಶಂಕರ್ಗೆ ಕಂಚು:
ಪುರುಷರ ಹೈ ಜಂಪ್ನಲ್ಲಿ ಭಾರತದ ತೇಜಸ್ವಿನ್ ಶಂಕರ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಶಂಕರ್ 2.22 ಮೀಟರ್ ಜಿಗಿದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ವಿಶೇಷ ಎಂದರೆ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಪುರುಷರ ಹೈ ಜಂಪ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಇದಾಗಿದೆ. ತನ್ನ ಮೊದಲ ಪ್ರಯತ್ನದಲ್ಲಿ 2.10 ಮೀಟರ್ ಜಿಗಿದ ಶಂಕರ್ ಉತ್ತಮ ಆರಂಭ ಕಂಡರರು. ಬಹಮಾಸ್ನ ಡೊನಾಲ್ಡ್ ಥೋಮಸ್ ಕೂಡ 2.22 ಮೀ. ಜಿಗಿದು ಶಂಕರ್ ಜೊತೆ ಸಮಬಲ ಸಾಧಿಸಿದರು. ಆದರೆ, ಭಾರತದ ಅಥ್ಲೀಟ್ ಕೆಲ ಫೌಲ್ಗಳನ್ನು ಮಾಡಿದ ಕಾರಣ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು.
ಇನ್ನು ವೇಟ್‌ಲಿಫ್ಟಿಂಗ್‌ನಲ್ಲಿ ಲವಪ್ರೀತ್ ಸಿಂಗ್ ಅವರು ಪುರುಷರ 109 ಕೆ.ಜಿ ವಿಭಾಗದಲ್ಲಿ ಕಂಚು ಗೆದ್ದರು. ಒಟ್ಟು 355 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 163 ಕೆ.ಜಿ ಹಾಗೂ ಕ್ಲೀನ್– ಜರ್ಕ್‌ನಲ್ಲಿ 192 ಕೆ.ಜಿ ಸಾಧನೆ ಮಾಡಿದರು. ಸ್ನ್ಯಾಚ್‌ನಲ್ಲಿ 157 ಕೆ.ಜಿ.ಯೊಂದಿಗೆ ಸ್ಪರ್ಧೆ ಆರಂಭಿಸಿದ ಅವರು ಕೊನೆಯ ಪ್ರಯತ್ನದಲ್ಲಿ 163 ಕೆ.ಜಿ. ಭಾರ ಎತ್ತಿದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೂರು ಅವಕಾಶಗಳಲ್ಲಿ ಕ್ರಮವಾಗಿ 185 ಕೆ.ಜಿ, 189 ಕೆ.ಜಿ ಮತ್ತು 192 ಕೆ.ಜಿ. ಭಾರ ಎತ್ತಿದರು.
ಇತ್ತ ಸೌರವ್ ಘೋಷಾಲ್ ಅವರು ಸ್ಕ್ವಾಷ್ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕೂಟದ ಇತಿಹಾಸದಲ್ಲಿ ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದು. ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಸೌರವ್, ಬುಧವಾರ ನಡೆದ ಕಂಚಿನ ಪದಕದ ಸುತ್ತಿನ ಪ್ಲೇ ಆಫ್‌ನಲ್ಲಿ 11-6, 11-1, 11-4ರಿಂದ ಇಂಗ್ಲೆಂಡ್‌ನ ಜೇಮ್ಸ್ ವಿಲ್‌ಸ್ಟ್ರಾಪ್ ಅವರನ್ನು ಸೋಲಿಸಿದರು. ಸೌರವ್ ಅವರಿಗೆ ಕಾಮನ್‌ವೆಲ್ತ್ ಕೂಟದಲ್ಲಿ ಇದು ಎರಡನೇ ಪದಕ. 2018ರ ಗೋಲ್ಡ್‌ಕೋಸ್ಟ್ ಆವೃತ್ತಿಯಲ್ಲಿ ದೀಪಿಕಾ ಪಳ್ಳಿಕಲ್ ಜೊತೆಗೂಡಿ ಬೆಳ್ಳಿ ಪದಕ ಜಯಿಸಿದ್ದರು.
ತೂಲಿಕಾ ಮಾನ್ ಅವರು ಮಹಿಳಾ ಜೂಡೊ ಸ್ಪರ್ಧೆಯ 78 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಫೈನಲ್‌ನಲ್ಲಿ ತೂಲಿಕಾ ಅವರು ಸ್ಕಾಟ್ಲೆಂಡ್‌ನ ಸಾರಾ ಅಡ್ಲಿಂಗ್ಟನ್ ಎದುರು 1-10 ರಲ್ಲಿ ಸೋತ ಪರಿಣಾಮ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ಎದುರಾಳಿಯನ್ನು ಕೆಳಕ್ಕೆ ಬೀಳಿಸಿ ಒಂದು ಪಾಯಿಂಟ್ ಗಿಟ್ಟಿಸಿಕೊಂಡಿದ್ದ ತೂಲಿಕಾ ಅವರು ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಪಂದ್ಯ ಕೊನೆಗೊಳ್ಳಲೇ ಸೆಕೆಂಡುಗಳು ಇರುವಾಗ ಸಾರಾ ಅವರು, ತೂಲಿಕಾ ಅವರನ್ನು ನೆಲಕ್ಕುರುಳಿಸಿ ಇಪೊ ಪಾಯಿಂಟ್ ಗಿಟ್ಟಿಸಿಕೊಂಡು ಗೆಲುವಿನ ನಗೆ ಬೀರಿದರು.
Published On - 7:33 am, Thu, 4 August 22