ಟೇಬಲ್ ಟೆನಿಸ್‌ನಲ್ಲಿ (table tennis) ಭಾರತಕ್ಕೆ ಮತ್ತೊಂದು ಪದಕ ಲಭಿಸಿದ್ದು, ಈ ಪದಕವನ್ನು ಅಚಂತ ಶರತ್ ಕಮಲ್ ಮತ್ತು ಜಿ ಸತ್ಯನ್ ನೀಡಿದ್ದಾರೆ. ಭಾನುವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ (Commonwealth Games) ಪುರುಷರ ಡಬಲ್ಸ್‌ನಲ್ಲಿ ಈ ಜೋಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಈ ಜೋಡಿಯನ್ನು ಇಂಗ್ಲೆಂಡ್‌ನ ಪಾಲ್ ಡ್ರಿಕ್‌ಹಾಲ್ ಮತ್ತು ಲಿಯಾಮ್ ಪಿಚ್‌ಫೋರ್ಡ್ ಜೋಡಿ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅತ್ಯಂತ ರೋಚಕ ಪಂದ್ಯದಲ್ಲಿ ಶರತ್ ಕಮಲ್ ಮತ್ತು ಸತ್ಯನ್ ಅವರನ್ನು ಇಂಗ್ಲೆಂಡ್‌ನ ಪಾಲ್ ಡ್ರಿಂಕ್‌ಹಾಲ್ ಮತ್ತು ಲಿಯಾಮ್ ಪಿಚ್‌ಫೋರ್ಡ್ ಸೋಲಿಸಿ ಚಿನ್ನದ ಪದಕ ಗೆದ್ದರು.
ಉತ್ತಮ ಆರಂಭ
ಮೊದಲ ಗೇಮ್ ಅನ್ನು 11-8 ರಿಂದ ಗೆಲ್ಲುವ ಮೂಲಕ ಭಾರತದ ಜೋಡಿಯು ಉತ್ತಮ ಆರಂಭವನ್ನು ಮಾಡಿತು. ಆದರೆ ಆತಿಥೇಯರು 2ನೇ ಗೇಮ್ ಗೆದ್ದು ಸ್ಕೋರ್ ಅನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾದರು. ಬಳಿಕ ಮೂರನೇ ಗೇಮ್ ಗೆದ್ದ ನಂತರ ಇಂಗ್ಲೆಂಡ್ ಆಟಗಾರರು ಪಂದ್ಯದಲ್ಲಿ ಮುನ್ನಡೆ ಸಾಧಿಸಿದರು. ಆದರೆ ಭಾರತದ ಜೋಡಿ ಮತ್ತೆ 2- 2 ರಿಂದ ಪಂದ್ಯದಲ್ಲಿ ಸಮಬಲ ಸಾಧಿಸಿತು. ನಿರ್ಣಾಯಕ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಜೋಡಿಯು ಭಾರತೀಯರ ಆಟಗಾರರ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸಿ ಪಂದ್ಯ ಗೆದ್ದುಕೊಂಡಿತು.
Team ??'s @sharathkamal1 and @sathiyantt settle for ? in the Mens Doubles ? going down to ??????? duo Liam Pitchford & Paul Drinkhall in a tightly contested match that went to the wire at @birminghamcg22 #EkIndiaTeamIndia #WeAreTeamIndia pic.twitter.com/fM35GWgf1k
— Team India (@WeAreTeamIndia) August 7, 2022
ಶ್ರೀಜಾ ಅಕುಲಾಗೆ ಸೋಲು
ಇದಕ್ಕೂ ಮುನ್ನ ಮಹಿಳೆಯರ ಸಿಂಗಲ್ಸ್ ಕಂಚಿನ ಪದಕದ ಪ್ಲೇಆಫ್‌ನಲ್ಲಿ ಶ್ರೀಜಾ ಅಕುಲಾ 3-4 ರಿಂದ ಆಸ್ಟ್ರೇಲಿಯಾದ ಯಾಂಗ್ಜಿ ಲಿಯು ವಿರುದ್ಧ ಸೋತಿದ್ದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಪುನರಾಗಮನ ಮಾಡಿದರೂ ಶ್ರೀಜಾ 11-3 6-11 2-11 11-7 13-15 11-9 7-11 ಅಂತರದಲ್ಲಿ ಸೋತರು. ಹೈದರಾಬಾದ್ ಆಟಗಾರ್ತಿ ನರ್ವಸ್ ಲಿಯು ವಿರುದ್ಧ ಉತ್ತಮ ಆರಂಭ ನೀಡಿ ಮೊದಲ ಗೇಮ್ ಅನ್ನು 11-3 ರಿಂದ ಗೆದ್ದುಕೊಂಡರು. ಆದರೆ ಆಕ್ರಮಣಕಾರಿ ಆಟದೊಂದಿಗೆ ಮರಳಿದ ಆಸೀಸ್ ಎರಡನೇ ಗೇಮ್ ಅನ್ನು 11-6 ರಿಂದ ಗೆದ್ದು ಸಮಬಲ ಸಾಧಿಸಿ ಮೂರನೇ ಗೇಮ್ ಅನ್ನು 11-2 ಅಂತರದಿಂದ ಗೆದ್ದು ಮುನ್ನಡೆ ಸಾಧಿಸಿದರು.
ಆದರೆ ಛಲ ಬಿಡದ ಉತ್ಸಾಹ ತೋರಿದ ಶ್ರೀಜಾ ನಾಲ್ಕನೇ ಗೇಮ್ ಅನ್ನು 11-7ರಲ್ಲಿ ಗೆದ್ದುಕೊಂಡರು. ಆದರೆ ಐದನೇ ಗೇಮ್‌ನಲ್ಲಿ ಲಿಯು 15-13 ರಲ್ಲಿ ಜಯಗಳಿಸುವ ಮೂಲಕ ಮುನ್ನಡೆ ಸಾಧಿಸಿದರು. ಆದರೆ ಆರನೇ ಗೇಮ್‌ನಲ್ಲಿ ಶ್ರೀಜಾ 11-9 ಅಂತರದಲ್ಲಿ ಗೆಲುವು ಸಾಧಿಸಿ ತಮ್ಮ ಕ್ಲಾಸ್ ಪ್ರದರ್ಶಿಸಿದರು. ಆದರೆ ನಿರ್ಣಾಯಕ ಆಟದಲ್ಲಿ ಪುನರಾಗಮನದ ಹೊರತಾಗಿಯೂ ಶ್ರೀಜಾ ಸೋತರು.
ಪುರುಷರ ಸಿಂಗಲ್ಸ್ ಮೇಲೆ ಕಣ್ಣು
ಈಗ ಶರತ್ ಕಮಲ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಡ್ರಿಂಕ್‌ಹಾಲ್ ಮತ್ತು ಸತ್ಯನ್ ಪಿಚ್‌ಫೋರ್ಡ್ ವಿರುದ್ಧ ಆಡಲಿದ್ದಾರೆ. ಶರತ್ ಕಮಲ್ ಮತ್ತು ಶ್ರೀಜಾ ಜೋಡಿಯು ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಮಲೇಷ್ಯಾದ ಜೀವನ್ ಚುಂಗ್ ಮತ್ತು ಕರೆನ್ ಲೈನ್ ಅವರನ್ನು ಎದುರಿಸಲಿದೆ. ಭಾರತದ ಪುರುಷರ ಟೇಬಲ್ ಟೆನಿಸ್ ತಂಡ ಚಿನ್ನದ ಪದಕ ಗೆದ್ದಿದೆ.
Published On - 8:10 pm, Sun, 7 August 22