CWG 2022: ಮಿಶ್ರ ಡಬಲ್ಸ್ ಸ್ಕ್ವಾಷ್‌ನಲ್ಲಿ ಕಂಚಿನ ಪದಕ ಗೆದ್ದ ಸೌರವ್ ಮತ್ತು ದೀಪಿಕಾ ಪಲ್ಲಿಕಲ್

CWG 2022: ಭಾರತದ ಅಗ್ರ ಸ್ಕ್ವಾಷ್ ಜೋಡಿ ಸೌರವ್ ಘೋಷಾಲ್ ಮತ್ತು ದೀಪಿಕಾ ಪಲ್ಲಿಕಲ್ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಘೋಷಾಲ್ ಮತ್ತು ಪಳ್ಳಿಕಲ್ ಕಾಮನ್‌ವೆಲ್ತ್ ಗೇಮ್ಸ್ 2022 ರ ಸ್ಕ್ವಾಷ್ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

CWG 2022: ಮಿಶ್ರ ಡಬಲ್ಸ್ ಸ್ಕ್ವಾಷ್‌ನಲ್ಲಿ ಕಂಚಿನ ಪದಕ ಗೆದ್ದ ಸೌರವ್ ಮತ್ತು ದೀಪಿಕಾ ಪಲ್ಲಿಕಲ್
Follow us
TV9 Web
| Updated By: ಪೃಥ್ವಿಶಂಕರ

Updated on:Aug 08, 2022 | 7:57 AM

ಭಾರತದ ಅಗ್ರ ಸ್ಕ್ವಾಷ್ ಜೋಡಿ ಸೌರವ್ ಘೋಷಾಲ್ ಮತ್ತು ದೀಪಿಕಾ ಪಲ್ಲಿಕಲ್ (Saurav Ghoshal and Dipika Pallikal) ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಘೋಷಾಲ್ ಮತ್ತು ಪಳ್ಳಿಕಲ್ ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರ ಸ್ಕ್ವಾಷ್ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅನುಭವಿ ಭಾರತದ ಜೋಡಿ ಕಂಚಿನ ಪದಕದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 2-0 ಅಂತರದಿಂದ ಸೋಲಿಸಿತು. ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಇಬ್ಬರಿಗೂ ಇದು ಸತತ ಎರಡನೇ ಪದಕವಾಗಿದೆ. ಇಷ್ಟೇ ಅಲ್ಲ, ಸ್ಕ್ವಾಷ್‌ನಲ್ಲಿ ಭಾರತಕ್ಕೆ ಪ್ರಸಕ್ತ ಪಂದ್ಯಗಳಲ್ಲಿ ಇದು ಎರಡನೇ ಪದಕವಾಗಿದೆ. ಇದಕ್ಕೂ ಮುನ್ನ ಸೌರವ್ ಪುರುಷರ ಸಿಂಗಲ್ಸ್‌ನಲ್ಲಿ ಐತಿಹಾಸಿಕ ಕಂಚು ಜಯಿಸಿದ್ದರು.

ಸುಲಭವಾಗಿ ಆಸ್ಟ್ರೇಲಿಯಾವನ್ನು ಸೋಲಿಸಿದರು

ಆಗಸ್ಟ್ 7 ರ ಭಾನುವಾರ ನಡೆದ ಈ ಕಂಚಿನ ಪದಕದ ಪಂದ್ಯದಲ್ಲಿ, ಭಾರತದ ಜೋಡಿ ಹೆಚ್ಚು ತೊಂದರೆಯಿಲ್ಲದೆ ಏಕಪಕ್ಷೀಯ ಶೈಲಿಯಲ್ಲಿ ಗೆದ್ದಿತು. ಬಹುಕಾಲ ಜೊತೆಯಾಗಿ ಆಡುತ್ತಿದ್ದ ಈ ಜೋಡಿ ಆಸ್ಟ್ರೇಲಿಯದ ಲೋಬನ್ ಡೊನ್ನಾ ಮತ್ತು ಕ್ಯಾಮರೂನ್ ಪೀಲೆ ಅವರಿಗೆ ಈ ಪಂದ್ಯದಲ್ಲಿ ತಿರುಗೇಟು ನೀಡುವ ಅವಕಾಶವನ್ನು ನೀಡದೆ ಹಿಡಿತವನ್ನು ಬಲವಾಗಿಟ್ಟುಕೊಂಡು 11-8, 11-4 ನೇರ ಗೇಮ್‌ಗಳಿಂದ ಸೋಲಿಸಿದರು.

ರಾಷ್ಟ್ರಪತಿ ಶುಭಹಾರೈಕೆ

ಅಧ್ಯಕ್ಷೆ ದ್ರೌಪದಿ ಮುರ್ಮು ಕೂಡ ಈ ಅದ್ಭುತ ಯಶಸ್ಸಿಗೆ ಭಾರತೀಯ ಜೋಡಿಯನ್ನು ಅಭಿನಂದಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಕ್ವಾಷ್ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ದೀಪಿಕಾ ಪಳ್ಳಿಕಲ್ ಮತ್ತು ಸೌರವ್ ಘೋಷಾಲ್ ಅವರಿಗೆ ಅಭಿನಂದನೆಗಳು ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ. ನಿಮ್ಮ ಪೋಡಿಯಂ ಫಿನಿಶ್ ಭಾರತದಲ್ಲಿನ ಸ್ಕ್ವಾಷ್ ಪ್ರೇಮಿಗಳಿಗೆ ಸ್ಫೂರ್ತಿಯಾಗಿದೆ. ಇಂತಹ ವಿಜಯಗಳು ನಮ್ಮ ದೇಶದಲ್ಲಿ ಕ್ರೀಡೆಯ ಜನಪ್ರಿಯತೆಯನ್ನು ಹೆಚ್ಚಿಸುತ್ತವೆ ಎಂದು ಬರೆದುಕೊಂಡಿದ್ದಾರೆ.

ದೀಪಿಕಾ-ಸೌರವ್‌ಗೆ ಗೆಲುವು ವಿಶೇಷವಾಗಿದೆ

ದೀಪಿಕಾ ಮತ್ತು ಸೌರವ್ ಅವರ ಈ ಗೆಲುವು ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಇಬ್ಬರೂ ಸತತ ಎರಡನೇ ಗೇಮ್‌ಗಳಲ್ಲಿ ಈ ಸ್ಪರ್ಧೆಯ ಪದಕ ಗೆದ್ದರು. ಇದಕ್ಕೂ ಮುನ್ನ ಸೌರವ್ ಮತ್ತು ದೀಪಿಕಾ 2018ರ ಗೋಲ್ಡ್ ಕೋಸ್ಟ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಗೆಲುವಿನೊಂದಿಗೆ ಇಬ್ಬರೂ ಆಸ್ಟ್ರೇಲಿಯಾ ಜೋಡಿಯ ನಾಲ್ಕು ವರ್ಷಗಳ ಹಳೆಯ ಖಾತೆಯನ್ನು ಸಮಗೊಳಿಸಿದರು. ವಾಸ್ತವವಾಗಿ, ಸೌರವ್-ದೀಪಿಕಾ ಹಿಂದಿನ ಪಂದ್ಯಗಳ ಫೈನಲ್‌ನಲ್ಲಿ ಅದೇ ಆಸ್ಟ್ರೇಲಿಯನ್ ಜೋಡಿಗೆ ಸೋತು ಚಿನ್ನದ ಪದಕವನ್ನು ಕಳೆದುಕೊಂಡಿದ್ದರು. ಅದೇ ಸಮಯದಲ್ಲಿ, ಸತತ ಎರಡನೇ ಕಾಮನ್​ವೆಲ್ತ್​ ಗೇಮ್ದ್​ನಲ್ಲಿ ಭಾರತ ಸ್ಕ್ವಾಷ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದೆ.

Published On - 11:10 pm, Sun, 7 August 22

ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ