CWG 2022: ನೀತು ಪಂಚ್‌ಗೆ ಬೆದರಿದ ಇಂಗ್ಲೆಂಡ್ ಬಾಕ್ಸರ್; ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಬಂಗಾರ

| Updated By: ಪೃಥ್ವಿಶಂಕರ

Updated on: Aug 07, 2022 | 4:42 PM

CWG 2022: ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್​ನ ಬಾಕ್ಸರ್​ನನ್ನು ಸೋಲಿಸುವ ಮೂಲಕ ನೀತು ಚಿನ್ನ ಗೆದ್ದರು. ಭಾರತದ ಬಾಕ್ಸರ್‌ನ ಪಂಚ್‌ಗಳಿಗೆ ಇಂಗ್ಲೆಂಡ್‌ನ ಬಾಕ್ಸರ್‌ನ ಬಳಿ ಉತ್ತರವಿಲ್ಲ.

CWG 2022: ನೀತು ಪಂಚ್‌ಗೆ ಬೆದರಿದ ಇಂಗ್ಲೆಂಡ್ ಬಾಕ್ಸರ್; ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಬಂಗಾರ
Follow us on

ಬಾಕ್ಸಿಂಗ್‌ನಲ್ಲಿ (boxing) ನಿರೀಕ್ಷೆಯಂತೆ ನೀತು ಗಂಗಾಸ್ (Neetu Ghanghas) ಚಿನ್ನದ ಪದಕವನ್ನು ಭಾರತದ ಚೀಲಕ್ಕೆ ಹಾಕಿದ್ದಾರೆ. ಕಾಮನ್​ವೆಲ್ತ್​ ಗೇಮ್ಸ್​ (Commonwealth Games 2022) ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್​ನ ಬಾಕ್ಸರ್​ನನ್ನು ಸೋಲಿಸುವ ಮೂಲಕ ನೀತು ಚಿನ್ನ ಗೆದ್ದರು. ಭಾರತದ ಬಾಕ್ಸರ್‌ನ ಪಂಚ್‌ಗಳಿಗೆ ಇಂಗ್ಲೆಂಡ್‌ ಬಾಕ್ಸರ್‌ನ ಬಳಿ ಉತ್ತರವಿರಲಿಲ್ಲ. ಮೂರು ಸುತ್ತುಗಳ ಕಾಲ ನಡೆದ ಬಾಕ್ಸಿಂಗ್‌ನಲ್ಲಿ ಮೊದಲಿನಿಂದ ಕೊನೆಯವರೆಗೂ ಭಾರತದ ಬಾಕ್ಸರ್ ಮೇಲುಗೈ ಸಾಧಿಸಿದರು. ಎಲ್ಲಾ ಮೂರು ಸುತ್ತುಗಳಲ್ಲಿ ಇಂಗ್ಲಿಷ್ ಬಾಕ್ಸರ್‌ಗಿಂತ ತೀರ್ಪುಗಾರರು ನೀತುಗೆ ಹೆಚ್ಚಿನ ಅಂಕಗಳನ್ನು ನೀಡಿದರು.

ಚಿನ್ನ ಗೆಲ್ಲುವ ಮೂಲಕ ನೀತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 14ನೇ ಚಿನ್ನ ಗೆದ್ದುಕೊಟ್ಟರು. ಆಂಗ್ಲ ಬಾಕ್ಸರ್ ಜೊತೆ ನೀತು ಅವರ ಹೋರಾಟ ಎಲ್ಲಾ ಮೂರು ಸುತ್ತುಗಳಲ್ಲಿ ಅದ್ಭುತವಾಗಿ ಸಾಗಿತು. ಇಬ್ಬರ ನಡುವಿನ ಹೋರಾಟ ಮುಗಿಲು ಮುಟ್ಟಿತ್ತು. ಆದರೆ ಆ ಆಕ್ರೊಶದೊಂದಿಗೆ ಗೆಲ್ಲಲು ಬೇಕಾದ ಸಂಯಮ ನೀತು ಆಟದಲ್ಲಿ ತೋರಿತು.

ಇದನ್ನೂ ಓದಿ
CWG 2022: ಭಾರತಕ್ಕೆ ಮತ್ತೊಂದು ಪದಕ ಫಿಕ್ಸ್; ಬ್ಯಾಡ್ಮಿಂಟನ್​ನಲ್ಲಿ ಫೈನಲ್ ಪ್ರವೇಶಿಸಿದ ಪಿವಿ ಸಿಂಧು..!
CWG 2022: ನೀತು ಪಂಚ್‌ಗೆ ಬೆದರಿದ ಇಂಗ್ಲೆಂಡ್ ಬಾಕ್ಸರ್; ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಬಂಗಾರ
CWG 2022: ಶೂಟೌಟ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದ ಭಾರತ ಮಹಿಳಾ ಹಾಕಿ ತಂಡ

ಮೂರು ಸುತ್ತುಗಳಲ್ಲೂ ನೀತು ಪ್ರಾಬಲ್ಯ

ಮೊದಲ ಸುತ್ತಿನಲ್ಲಿ 5 ಮಂದಿ ತೀರ್ಪುಗಾರರು ನೀತುಗೆ ತಲಾ 10 ಅಂಕ ನೀಡಿದರು. ಜೊತೆಗೆ ಎರಡನೇ ಮತ್ತು ಮೂರನೇ ಸುತ್ತಿನಲ್ಲಿಯೂ ಇದೇ ರೀತಿಯ ಲಾಭ ನೀತುಗೆ ದೊರಕಿತು. ಇದರ ಪರಿಣಾಮ ಅಂತಿಮವಾಗಿ ತೀರ್ಪುಗಾರರ ತೀರ್ಪು ಭಾರತದ ಬಾಕ್ಸರ್ ನೀತು ಗಂಗಾಸ್ ಪರವಾಗಿತ್ತು.

ನೀತು ಗಂಗಾಸ್ ಎತ್ತರವೆ ಪ್ಲಸ್​ ಪಾಯಿಂಟ್

ಇಂಗ್ಲೆಂಡಿನ ಬಾಕ್ಸರ್ ವಿರುದ್ಧ, ನೀತು ಗಂಗಾಸ್ ತನ್ನ ಎತ್ತರದ ದೊಡ್ಡ ಪ್ರಯೋಜನವನ್ನು ಪಡೆದರು. ಇದರಿಂದಾಗಿ ಎದುರಾಳಿಯ ಹೊಡೆತವನ್ನು ತಪ್ಪಿಸಿಕೊಳ್ಳಲು ನೀತುಗೆ ಸುಲಭವಾಯಿತು. ನೀತು ಅವರ ತಂತ್ರ, ಅವರ ವಿಧಾನ ಮತ್ತು ಅವರ ಪಂಚ್‌ಗಳ ವ್ಯಾಪ್ತಿಯು ಇಂಗ್ಲೆಂಡ್ ಬಾಕ್ಸರ್‌ನ ತಂತ್ರಗಳನ್ನು ವಿಫಲಗೊಳಿಸಲು ಸಾಧ್ಯವಾಯಿತು.

Published On - 3:22 pm, Sun, 7 August 22