CWG 2022: ಇಂಗ್ಲೆಂಡ್ ಎದುರು ಸುಲಭವಾಗಿ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ ಹಾಕಿ ತಂಡ

| Updated By: ಪೃಥ್ವಿಶಂಕರ

Updated on: Aug 01, 2022 | 11:19 PM

CWG 2022:

CWG 2022: ಇಂಗ್ಲೆಂಡ್ ಎದುರು ಸುಲಭವಾಗಿ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ ಹಾಕಿ ತಂಡ
India Vs England Cwg 2022 Hockey
Follow us on

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ(Commonwealth Games 2022), ಭಾರತ ಹಾಕಿ ತಂಡ (Indian men’s team) ನಿರಾಶೆ ಅನುಭವಿಸಿದೆ. ಭಾರತ ಪುರುಷರ ತಂಡ ತನ್ನ ಪೂಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವಿನ ಉತ್ತಮ ಅವಕಾಶವನ್ನು ಕಳೆದುಕೊಂಡು ಪಂದ್ಯವನ್ನು 4-4 ರಲ್ಲಿ ಡ್ರಾ ಮಾಡಿಕೊಂಡಿತು. ಪೂಲ್ ಬಿನಲ್ಲಿ ಆಗಸ್ಟ್ 1 ಸೋಮವಾರ ನಡೆದ ಈ ಪಂದ್ಯದಲ್ಲಿ, ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ತಂಡವು ಒಂದರ ನಂತರ ಒಂದರಂತೆ ಹಲವಾರು ತಪ್ಪುಗಳನ್ನು ಮಾಡಿತು, ಇದರಿಂದಾಗಿ ಅದು 9 ಆಟಗಾರರೊಂದಿಗೆ ದೀರ್ಘಕಾಲ ಆಡಬೇಕಾಯಿತು. ಇಂಗ್ಲೆಂಡ್ ಮೂರು ಗೋಲು ಗಳಿಸುವ ಮೂಲಕ ಇದರ ಲಾಭವನ್ನು ಪಡೆದುಕೊಂಡಿತು. ಈ ಮೂಲಕ ಇಂಗ್ಲೆಂಡ್ ತಂಡ ಪಂದ್ಯವನ್ನು ಡ್ರಾ ಮಾಡುವುದರಲ್ಲಿ ಯಶಸ್ವಿಯಾಯಿತು. ಈ ಫಲಿತಾಂಶದ ನಂತರ, ಭಾರತ ತಂಡವು ಪೂಲ್‌ನ ಅಗ್ರಸ್ಥಾನಕ್ಕೆ ಹೋಗುವ ಅವಕಾಶವನ್ನು ಕಳೆದುಕೊಂಡಿತು.

ಪಂದ್ಯದಲ್ಲಿ, ಭಾರತ ತಂಡವು ಮೊದಲ ಕ್ವಾರ್ಟರ್‌ನಲ್ಲಿಯೇ 2-0 ಮುನ್ನಡೆ ಸಾಧಿಸಿತ್ತು, ಇದು ಎರಡನೇ ಕ್ವಾರ್ಟರ್‌ನ ಅಂತ್ಯದಲ್ಲಿ 3-0 ಸಾಧಿಸುವ ಮೂಲಕ ಇಂಗ್ಲೆಂಡ್ ಅನ್ನು ಹಿನ್ನಡೆಗೆ ತಳ್ಳಿತು. ಆದಾಗ್ಯೂ, ಇಂಗ್ಲೆಂಡ್ ಮೂರನೇ ಕ್ವಾರ್ಟರ್‌ನಲ್ಲಿ ಪುನರಾಗಮನದ ಕಡೆಗೆ ಮೊದಲ ಹೆಜ್ಜೆ ಇಟ್ಟಿತು ಮತ್ತು ಸ್ಕೋರ್ 3-1 ಮಾಡಿತು. ನಂತರ ನಾಲ್ಕನೇ ಕ್ವಾರ್ಟರ್‌ನಲ್ಲಿ, ಭಾರತ ತಕ್ಷಣವೇ ಸ್ಕೋರ್ ಅನ್ನು 4-1 ಗೆ ಇಳಿಸಿತು, ಆದರೆ ಕೊನೆಯ 10 ನಿಮಿಷಗಳಲ್ಲಿ ಭಾರತೀಯ ಆಟಗಾರರು ಫೌಲ್ ಮಾಡುತ್ತಲೇ ಇದ್ದರು, ಇದರಿಂದಾಗಿ ಇಬ್ಬರು ಆಟಗಾರರು ಎಲ್ಲೋ ಕಾರ್ಡ್​ ಪಡೆದು ಹೊರಹೋಗಬೇಕಾಯಿತು. ಕಡಿಮೆ ಆಟಗಾರರಿಂದಾಗಿ ಗೇಲನ್ನು ಸರಿಯಾಗಿ ರಕ್ಷಿಸಲು ಸಾಧ್ಯವಾಗದ ಭಾರತ ತಂಡ ಸಂಪೂರ್ಣ ಹಿನ್ನಡೆ ಅನುಭವಿಸಿತು

ಪಂದ್ಯವನ್ನು ಅತ್ಯಂತ ವೇಗವಾಗಿ ಆರಂಭಿಸಿದ ಭಾರತ ಮೂರು ನಿಮಿಷಗಳಲ್ಲಿ ಮುನ್ನಡೆ ಸಾಧಿಸಿತು. ಸ್ಟಾರ್ ಫಾರ್ವರ್ಡ್ ಆಟಗಾರ ಲಲಿತ್ ಉಪಾಧ್ಯಾಯ ರಿಬೌಂಡ್‌ನಲ್ಲಿ ಗೋಲು ಗಳಿಸುವ ಮೂಲಕ ತಂಡಕ್ಕೆ ಬಲವಾದ ಆರಂಭ ನೀಡಿದರು. ಇದೇ ಕ್ವಾರ್ಟರ್‌ನ 11ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಕೂಡ ಅತ್ಯುತ್ತಮ ಗ್ರೌಂಡ್ ಮೂವ್‌ನ ಆಧಾರದ ಮೇಲೆ ಚೆಂಡನ್ನು ಗೋಲಿನೊಳಗೆ ಸೇರಿಸುವ ಮೂಲಕ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಹೀಗಾಗಿ ಮೊದಲ ಕ್ವಾರ್ಟರ್ 2-0 ಯಲ್ಲಿ ಕೊನೆಗೊಂಡಿತು.

ಎರಡನೇ ಕ್ವಾರ್ಟರ್‌ನಲ್ಲೂ ಮಂದೀಪ್ ಭಾರತದ ಪರ ಮತ್ತೊಂದು ಗೋಲು ದಾಖಲಿಸಿದರು. ಪಂದ್ಯದ 22ನೇ ನಿಮಿಷದಲ್ಲಿ ಮಂದೀಪ್ ಮತ್ತೊಂದು ಓಪನ್ ಪ್ಲೇ ಮೂವ್ ಮೂಲಕ ಭಾರತದ ಮುನ್ನಡೆಯನ್ನು 3-0 ಮಾಡಿದರು. ಟೀಂ ಇಂಡಿಯಾದ ಪ್ರಾಬಲ್ಯ ಮುಂದುವರಿಯುತ್ತದೆ ಎಂದು ತೋರುತ್ತಿತ್ತು, ಆದರೆ ಮೂರನೇ ಕ್ವಾರ್ಟರ್‌ನಿಂದ ಪರಿಸ್ಥಿತಿ ಬದಲಾಗಲಾರಂಭಿಸಿತು. ಈ ವೇಳೆ ಉಭಯ ತಂಡಗಳು ಕೆಲವು ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಅವುಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮೂರನೇ ಕ್ವಾರ್ಟರ್​ನ ಕೊನೆಯ ಕ್ಷಣಗಳಲ್ಲಿ ಇಂಗ್ಲೆಂಡ್ ಪರ ಲಿಯಾಮ್ ಅನ್ಸೆಲ್ ಮೊದಲ ಗೋಲು ಬಾರಿಸಿ ಪಂದ್ಯವನ್ನು 1-3ರ ಸಮಬಲಕ್ಕೆ ತಂದರು.

ನಿಜವಾದ ಆಟ ಕೊನೆಯ ಕ್ವಾರ್ಟರ್‌ನಲ್ಲಿ ನಡೆಯಿತು, ಅಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್‌ನಿಂದ ಗೋಲು ಗಳಿಸಿ ಭಾರತ 4-1 ಮುನ್ನಡೆ ಸಾಧಿಸಿತು, ಆದರೆ ವರುಣ್ ಕುಮಾರ್ ಮತ್ತು ನಂತರ ಗುರ್ಜಂತ್ ಸಿಂಗ್‌ಗೆ ತೋರಿಸಲಾದ ಹಳದಿ ಕಾರ್ಡ್‌ನಿಂದಾಗಿ ಭಾರತವು 9 ಆಟಗಾರರ ಜೊತೆ ಆಟ ಮುಂದುವರೆಸಬೇಕಾಯಿತು. ಇದರ ಲಾಭ ಪಡೆದ ಇಂಗ್ಲೆಂಡ್ 7 ನಿಮಿಷಗಳಲ್ಲಿ 3 ಗೋಲು ಗಳಿಸಿ ಪಂದ್ಯವನ್ನು 4-4ರಿಂದ ಸಮಬಲಗೊಳಿಸಿತು.

Published On - 10:22 pm, Mon, 1 August 22