Harjinder Kaur: ಭಾರತಕ್ಕೆ ಒಂಬತ್ತನೇ ಪದಕ: ವೇಟ್​​ಲಿಫ್ಟಿಂಗ್​ನಲ್ಲಿ ಕಂಚು ಗೆದ್ದ ಹರ್ಜಿಂದರ್ ಕೌರ್

CWG 2022: ವೇಟ್‌ಲಿಫ್ಟರ್‌ ಹರ್ಜಿಂದರ್ ಕೌರ್ (Harjinder Kaur) ಅವರು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಮಹಿಳೆಯರ 71kg ವಿಭಾಗದಲ್ಲಿ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ ಕೌರ್ ಕಂಚಿಗೆ (Bronze ) ಕೊರಳೊಡ್ಡಿದ್ದಾರೆ.

Harjinder Kaur: ಭಾರತಕ್ಕೆ ಒಂಬತ್ತನೇ ಪದಕ: ವೇಟ್​​ಲಿಫ್ಟಿಂಗ್​ನಲ್ಲಿ ಕಂಚು ಗೆದ್ದ ಹರ್ಜಿಂದರ್ ಕೌರ್
Harjinder Kaur
Follow us
TV9 Web
| Updated By: Vinay Bhat

Updated on:Aug 02, 2022 | 7:34 AM

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ 2022ಕಾಮನ್‌ವೆಲ್ತ್‌ ಕ್ರೀಡಾ (Commonwealth Games 2022) ಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಶಕ್ತಿ ಪ್ರದರ್ಶನ ಮುಂದುವರಿದಿದೆ. ವೇಟ್‌ಲಿಫ್ಟರ್‌ ಹರ್ಜಿಂದರ್ ಕೌರ್ (Harjinder Kaur) ಅವರು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಮಹಿಳೆಯರ 71kg ವಿಭಾಗದಲ್ಲಿ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ ಕೌರ್ ಕಂಚಿಗೆ (Bronze ) ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಒಂಬತ್ತಕೇರಿದೆ. ವಿಶೇಷ ಎಂದರೆ ಇದುವರೆಗೆ ಬಂದಿರುವ 9 ಪದಕಗಳ ಪೈಕಿ ಆರು ಪದಕ ವೇಟ್​ಲಿಫ್ಟಿಂಗ್​​ನಿಂದಲೇ ಆಗಿದೆ. ಸ್ನಾಚ್ ರೌಂಡ್​ನಲ್ಲಿ ದಾಖಲೆಯ 93kg ಮತ್ತು 119kg ಎತ್ತಿದರೆ ಜೆರ್ಜ್​ ರೌಂಡ್​ನಲ್ಲಿ 119kg ಬಾರ ಎತ್ತುವ ಮೂಲಕ ಕೌರ್ ಕಂಚನ್ನು ಬಾಜಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಹರ್ಜಿಂದರ್ ಅವರಿಗೆ 90kg ಎತ್ತಲು ಸಾಧ್ಯವಾಗಲಿಲ್ಲ. ನಂತರ ಎರಡನೇ ಪ್ರಯತ್ನದಲ್ಲಿ ಯಶಸ್ವಿ ಕಂಡರು. ಸದ್ಯ ಭಾರತ ಒಂಬತ್ತು ಪದಕವನ್ನು ಬಾಜಿಕೊಂಡಿದ್ದು ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚನ್ನು ಖಾತೆಗೆ ಸೇರಿಸಿಕೊಂಡಿದೆ.

ಜುಡೂ ಸ್ಪರ್ಧೆಯಲ್ಲಿ ಪದಕ:

ಭಾರತದ ಎಲ್‌.ಸುಶೀಲಾ ದೇವಿ ಮತ್ತು ವಿಜಯ್‌ ಕುಮಾರ್‌ ಯಾದವ್‌ ಅವರು ಜೂಡೊ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು. ಮಹಿಳೆಯರ 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸುಶೀಲಾ ಅವರು ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ಎದುರು ಸೋತರು. 4.25 ನಿಮಿಷ ನಡೆದ ಹಣಾಹಣಿಯಲ್ಲಿ ಸುಶೀಲಾ, ಸೋಲುವ ಮುನ್ನ ಎದುರಾಳಿಗೆ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು. ಯಾದವ್‌ ಅವರು ಪುರುಷರ 60 ಕೆ.ಜಿ. ವಿಭಾಗದಲ್ಲಿ ಕಂಚು ಜಯಿಸಿದರು. ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಅವರು ಸೈಪ್ರಸ್‌ನ ಪೆಟ್ರೋಸ್‌ ಕ್ರಿಸ್ಟೊಡೌಲಿಡೆಸ್‌ ಎದುರು ಗೆದ್ದರು. ಪ್ರಭಾವಿ ಪ್ರದರ್ಶನ ನೀಡಿದ ಅವರು ಕೇವಲ 58 ಸೆಕೆಂಡುಗಳಲ್ಲಿ ಗೆಲುವು ಒಲಿಸಿಕೊಂಡರು.

ಇದನ್ನೂ ಓದಿ
Image
CWG 2022 Day 5, Schedule: 5ನೇ ದಿನ ಭಾರತಕ್ಕೆ ಇನ್ನೂ ನಾಲ್ಕು ಚಿನ್ನ? ಹೀಗಿದೆ ವೇಳಾಪಟ್ಟಿ
Image
India vs West Indies 2nd T20 Playing 11: 3 ಗಂಟೆ ತಡವಾಗಿ ಆರಂಭವಾದ ಪಂದ್ಯ; ಉಭಯ ತಂಡಗಳು ಹೀಗಿವೆ
Image
CWG 2022: ಇಂಗ್ಲೆಂಡ್ ಎದುರು ಸುಲಭವಾಗಿ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ ಹಾಕಿ ತಂಡ
Image
CWG 2022: ಭಾರತಕ್ಕೆ 7ನೇ ಪದಕ; ಜೂಡೋದಲ್ಲಿ ಬೆಳ್ಳಿ ಗೆದ್ದ ಸುಶೀಲಾ ದೇವಿ

ಹಾಕಿಯಲ್ಲಿ ಸೋಲು:

ಭಾರತ ಪುರುಷರ ಹಾಕಿ ತಂಡ ತನ್ನ ಪೂಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವಿನ ಉತ್ತಮ ಅವಕಾಶವನ್ನು ಕಳೆದುಕೊಂಡು ಪಂದ್ಯವನ್ನು 4-4 ರಲ್ಲಿ ಡ್ರಾ ಮಾಡಿಕೊಂಡಿತು. ಈ ಪಂದ್ಯದ ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ತಂಡವು ಒಂದರ ನಂತರ ಒಂದರಂತೆ ಹಲವಾರು ತಪ್ಪುಗಳನ್ನು ಮಾಡಿತು. ಇದರಿಂದಾಗಿ 9 ಆಟಗಾರರೊಂದಿಗೆ ದೀರ್ಘಕಾಲ ಆಡಬೇಕಾಯಿತು. ಇಂಗ್ಲೆಂಡ್ ಮೂರು ಗೋಲು ಗಳಿಸುವ ಮೂಲಕ ಇದರ ಲಾಭವನ್ನು ಪಡೆದುಕೊಂಡಿದ್ದಲ್ಲದೆ ಪಂದ್ಯವನ್ನು ಡ್ರಾ ಮಾಡುವುದರಲ್ಲಿ ಯಶಸ್ವಿಯಾಯಿತು.

ಇತ್ತ ಪುರುಷರ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಅಮಿತ್‌ ಪಂಘಲ್‌ ಮತ್ತು ಮೊಹಮ್ಮದ್‌ ಹುಸ್ಸಮುದ್ದೀನ್‌ ಕ್ವಾರ್ಟರ್‌ ಫೈನಲ್‌ಗೆ ಓಟ ಬೆಳೆಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತ ಅಮಿತ್‌ ಪಂಘಲ್‌ 51 ಕೆಜಿ ಫ್ಲೈವೇಟ್‌ ವಿಭಾಗದಲ್ಲಿ ವನೌಟುವಿನ ನಮ್ರಿ ಬೆರ್ರಿ ಅವರನ್ನು ಮಣಿಸಿದರು. ಮೊಹಮ್ಮದ್‌ ಹುಸೇನ್‌ 57 ಕೆಜಿ ವಿಭಾಗದಲ್ಲಿ ಬಾಂಗ್ಲಾದೇಶದ ಸಲೀಂ ಹೊಸೇನ್‌ ಅವರನ್ನು 5-0 ಅಂತರದಿಂದ ಪರಾಭವಗೊಳಿಸಿದರು.

Published On - 7:21 am, Tue, 2 August 22

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್