CWG 2022: ಭಾರತಕ್ಕೆ 7ನೇ ಪದಕ; ಜೂಡೋದಲ್ಲಿ ಬೆಳ್ಳಿ ಗೆದ್ದ ಸುಶೀಲಾ ದೇವಿ
CWG 2022: 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸುಶೀಲಾ ದೇವಿ ಪದಕದ ಬಣ್ಣವನ್ನು ಬದಲಾಯಿಸುವ ಅವಕಾಶವನ್ನು ಕಳೆದುಕೊಂಡರು. ಸೋಮವಾರ ನಡೆದ ಜೂಡೋದಲ್ಲಿ 48 ಕೆಜಿ ವಿಭಾಗದಲ್ಲಿ ಸುಶೀಲಾ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾದರು.
2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games 2022) ಸುಶೀಲಾ ದೇವಿ (Sushila Devi) ಪದಕದ ಬಣ್ಣವನ್ನು ಬದಲಾಯಿಸುವ ಅವಕಾಶವನ್ನು ಕಳೆದುಕೊಂಡರು. ಸೋಮವಾರ ನಡೆದ ಜೂಡೋದಲ್ಲಿ 48 ಕೆಜಿ ವಿಭಾಗದಲ್ಲಿ ಸುಶೀಲಾ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾದರು. ಚಿನ್ನದ ಪದಕದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲಿನ ಎದುರು ಭಾರತದ ಆಟಗಾರ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪಂದ್ಯದುದ್ದಕ್ಕೂ ದಕ್ಷಿಣ ಆಫ್ರಿಕಾದ ಆಟಗಾರ್ತಿ ಸುಶೀಲಾ ಮೇಲೆ ಪ್ರಾಬಲ್ಯ ಮೆರೆದು ಅವರ ಕನಸಿಗೆ ಬ್ರೇಕ್ ಹಾಕಿದರು.
ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಸುಶೀಲಾಗೆ ಇದು ಎರಡನೇ ಬೆಳ್ಳಿ ಪದಕವಾಗಿದೆ. 2014ರಲ್ಲಿ ಬೆಳ್ಳಿ ಗೆದ್ದಿದ್ದ ಅವರು ಈ ಬಾರಿ ಆ ಬೆಳ್ಳಿಯನ್ನು ಚಿನ್ನವನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದರು. ಅಂತಿಮ ಪಂದ್ಯದ ಸಮಯದಲ್ಲಿ, ದಕ್ಷಿಣ ಆಫ್ರಿಕಾದ ಆಟಗಾರ್ತಿ ಸುಶೀಲಾ ಅವರನ್ನು ಪೂರ್ಣ ಬಲ ಮತ್ತು ವೇಗದಿಂದ ಹಿಂಭಾಗದಲ್ಲಿ ಹಲವಾರು ಬಾರಿ ಮ್ಯಾಟ್ ಮೇಲೆ ಕೆಡವಿದರು. ಮತ್ತು 20 ಸೆಕೆಂಡುಗಳ ಕಾಲ ಅವರನ್ನು ಒತ್ತಿ ಹಿಡಿದರು. ಹೀಗಾಗಿ ಸುಶೀಲಾ ಅವರಿಗೆ ಪಂದ್ಯದಲ್ಲಿ ಮರಳುವ ಅವಕಾಶ ಸಿಗಲಿಲ್ಲ.
Way to go champ!
Great performance by Sushila Devi to take ? in #Judo Women's 48 Kg event in the #CWG2022.
Congratulations & best wishes. You have made ?? proud. pic.twitter.com/wASqEP87js
— Sarbananda Sonowal (@sarbanandsonwal) August 1, 2022
ಚಿಕ್ಕಪ್ಪನಿಂದಾಗಿ ಜೂಡೋದಲ್ಲಿ ಆಸಕ್ತಿ ಹೆಚ್ಚಾಯಿತು
ಹಿಂದಿನ ದಿನ ಅದೇ ರೀತಿಯಲ್ಲಿ ಮಲಾವಿಯ ಹ್ಯಾರಿಯೆಟ್ ಬೋನ್‌ಫೇಸ್ ಅವರನ್ನು ಸೋಲಿಸುವ ಮೂಲಕ ಭಾರತದ ಆಟಗಾರ್ತಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರು. ಸುಶೀಲಾ ಬಗ್ಗೆ ಹೇಳುವುದಾದರೆ, ಅವರು ಮಣಿಪುರ ಪೊಲೀಸ್‌ನಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಅವರನ್ನು ಜೂಡೋ ಆಟಗಾರ್ತಿಯನ್ನಾಗಿ ಮಾಡುವಲ್ಲಿ ಅವರ ಚಿಕ್ಕಪ್ಪನ ಶ್ರಮ ಬಹಳಷ್ಟಿದೆ. ಸುಶೀಲಾ ಅವರ ಚಿಕ್ಕಪ್ಪ ದಿನಿತ್ ಅಂತರಾಷ್ಟ್ರೀಯ ಜೂಡೋ ಆಟಗಾರರಾಗಿದ್ದರು. 2002ರಲ್ಲಿ ಸುಶೀಲ್ ಅವರ ತರಬೇತಿ ಆರಂಭವಾದ ಖುಮಾನ್ಗೆ ಇವರೇ ಕರೆತಂದರು.
ಕಂಚು ಗೆದ್ದ ವಿಜಯ್
ಮತ್ತೊಂದೆಡೆ, ಪುರುಷರ 60 ಕೆಜಿ ತೂಕದ ಜೂಡೋ ವಿಭಾಗದಲ್ಲಿ ವಿಜಯ್ ಕುಮಾರ್ ಕಂಚಿನ ಪದಕ ಗೆದ್ದರು. ವಿಜಯ್ ಪಂದ್ಯ ಪ್ರಾರಂಭವಾದ ತಕ್ಷಣ, ಪೆಟ್ರೋಸ್ ಕ್ರಿಸ್ಟೋಡೌಲಿಡೆಸ್ ಮೇಲೆ ಪ್ರಾಬಲ್ಯ ಸಾಧಿಸಿದರು. ಪೆಟ್ರೋಸ್ ಪುನರಾಗಮನಕ್ಕೆ ಪ್ರಯತ್ನಿಸಿದರೂ ವಿಜಯ್ ಅವರಿಗೆ ಯಾವುದೇ ಅವಕಾಶ ನೀಡಲಿಲ್ಲ.
Published On - 10:07 pm, Mon, 1 August 22