AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2022: ಲಾನ್​ ಬಾಲ್ಸ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

Commonwealth Games 2022: 1930 ರಿಂದ ಲಾನ್ ಬಾಲ್ ಕ್ರೀಡೆಯು ಕಾಮನ್‌ವೆಲ್ತ್ ಕ್ರೀಡಾಕೂಟದ ಭಾಗವಾಗಿದೆ. 22 ವರ್ಷಗಳಲ್ಲಿ ಭಾರತ ತಂಡ ಈ ಕ್ರೀಡೆಯಲ್ಲಿ ಯಾವುದೇ ಪದಕ ಗೆದ್ದಿಲ್ಲ.

CWG 2022: ಲಾನ್​ ಬಾಲ್ಸ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತ
Lawn Bowls Indian Team
TV9 Web
| Edited By: |

Updated on:Aug 02, 2022 | 7:28 PM

Share

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​ ಗೇಮ್ಸ್​ನ (CWG 2022) ಲಾನ್​ ಬಾಲ್ಸ್​​ನಲ್ಲಿ (Lawn Bowls) ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 17-10 ಅಂತರದಿಂದ ಸೋಲಿಸುವ ಮೂಲಕ ಭಾರತೀಯ ಮಹಿಳೆಯರು ಈ ವಿಶೇಷ ಸಾಧನೆ ಮಾಡಿದರು. ಭಾರತವು ಹಲವು ವರ್ಷಗಳಿಂದ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾಗವಹಿಸುತ್ತಿದ್ದರೂ ಇದುವರೆಗೆ ಲಾನ್​ ಬಾಲ್ಸ್​ನಲ್ಲಿ ಪದಕ ಗೆದ್ದಿರಲಿಲ್ಲ. ಇದೀಗ ಭಾರತದ ತಂಡದ ಲವ್ಲಿ ಚೌಬೆ , ಪಿಂಕಿ , ನಯನ್ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಒಳಗೊಂಡ ತಂಡವು ಚಿನ್ನದ ಪದಕ ಗೆಲ್ಲುವ ಮೂಲಕ  ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಏನಿದು ಲಾನ್ ಬಾಲ್ಸ್​? ಲಾನ್​ ಬಾಲ್ಸ್​ ಎಂಬುದು ಹೊರಾಂಗಣ ಕ್ರೀಡೆ. ಈ ಸ್ಪರ್ಧೆಯು 1930 ರಿಂದ ಕಾಮನ್‌ವೆಲ್ತ್ ಕ್ರೀಡಾಕೂಟದ ಭಾಗವಾಗಿದೆ. 22 ವರ್ಷಗಳಲ್ಲಿ ಭಾರತ ತಂಡ ಈ ಕ್ರೀಡೆಯಲ್ಲಿ ಯಾವುದೇ ಪದಕ ಗೆದ್ದಿಲ್ಲ. ಆದರೆ ಈ ಬಾರಿ ಫೈನಲ್​ಗೆ ಪ್ರವೇಶಿಸುವ ಎಲ್ಲರ ಗಮನ ಸೆಳೆದಿತ್ತು. ಇದೀಗ ಸ್ವರ್ಣ ಪದಕ ಗೆಲ್ಲುವ ಮೂಲಕ ಭಾರತೀಯರ ಗಮನ ಸೆಳೆದಿದೆ. ಅಂದಹಾಗೆ ಲಾನ್​ ಬಾಲ್ಸ್ ಎಂಬುದು ಈಜಿಪ್ಟ್ ಮೂಲದ ಕ್ರೀಡೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಯುರೋಪಿಯನ್​ ದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಇಂಗ್ಲೆಂಡ್​ನಲ್ಲಿ ಈ ಕ್ರೀಡೆಯನ್ನು ಹೆಚ್ಚಾಗಿ ಆಡಲಾಗುತ್ತದೆ. ಹೀಗಾಗಿ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಇಂಗ್ಲೆಂಡ್ ಲಾನ್​ ಬಾಲ್ಸ್​ನಲ್ಲಿ ಇದುವರೆಗೆ 20 ಚಿನ್ನ, 9 ಬೆಳ್ಳಿ ಮತ್ತು 22 ಕಂಚಿನ ಪದಕ ಸೇರಿದಂತೆ ಒಟ್ಟು 51 ಪದಕಗಳನ್ನು ಗೆದ್ದಿದೆ.

ಲಾನ್ ಬಾಲ್ಸ್​ ಗೇಮ್ ನಿಯಮಗಳೇನು? ಲಾನ್ ಬಾಲ್ಸ್​ ಆಟದ ನಿಯಮಗಳು ತುಂಬಾ ಆಸಕ್ತಿದಾಯಕವಾಗಿವೆ. ಇಲ್ಲಿ ರಬ್ಬರ್​ನಿಂದ ಮಾಡಲಾದ ವಿಶೇಷ ಚೆಂಡನ್ನು ಬಳಸಲಾಗುತ್ತದೆ. ಈ ಚೆಂಡಿನ ತೂಕವು 1.59 ಕೆಜಿ ಇರುತ್ತದೆ. ಈ ಚೆಂಡನ್ನು ನಿಗದಿಪಡಿಸಲಾದ ಗುರಿಯತ್ತ ನೆಲದಿಂದ ಉರುಳಿಸಬೇಕು. ಹೀಗೆ ಸಾಗಿದ ಚೆಂಡು ನಿರ್ದಿಷ್ಠ  ಗುರಿಗೆ (ಜ್ಯಾಕ್- ಸಣ್ಣ ಚೆಂಡು) ತಲುಪಬೇಕು. ಇಲ್ಲಿ ಗುರಿಯ ಅಂತರವು 23 ಮೀಟರ್ ಆಗಿರುತ್ತದೆ. ಅಲ್ಲಿಗೆ ಚೆಂಡನ್ನು ತಲುಪಿಸುವ ಮೂಲಕ ಅಥವಾ ಜ್ಯಾಕ್​ಗೆ ತಾಗಿಸುವ ಮೂಲಕ ಪಾಯಿಂಟ್​ಗಳನ್ನು ಪಡೆಯಲಾಗುತ್ತದೆ.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಪಾಯಿಂಟ್ ಸಿಗುವುದು ಹೇಗೆ? ಲಾನ್ ಬಾಲ್​ಗಳಲ್ಲಿ ಸ್ಕೋರ್ ಮಾಡುವುದು ತುಂಬಾ ಸರಳ. ಇಲ್ಲಿ ನಿಗದಿ ಮಾಡಲಾದ ಗುರಿಯ ಹತ್ತಿರ ಹೆಚ್ಚು ಚೆಂಡುಗಳನ್ನು ಹಾಕಿದ ತಂಡಕ್ಕೆ ಹೆಚ್ಚು ಪಾಯಿಂಟ್ ಸಿಗುತ್ತದೆ. ಅಂದರೆ ನಿರ್ದಿಷ್ಟ ಗುರಿಯ ಸಮೀಪ ಯಾವ ತಂಡಗಳ ಚೆಂಡು ಹೆಚ್ಚು ಇರುತ್ತದೆಯೋ ಆ ತಂಡ ಹೆಚ್ಚಿನ ಪಾಯಿಂಟ್ ಪಡೆದು ಗೆಲುವು ತನ್ನದಾಗಿಸಿಕೊಳ್ಳುತ್ತದೆ.

ಎಷ್ಟು ಆಟಗಾರರು ಆಡುತ್ತಾರೆ? ಈ ಕ್ರೀಡೆಯನ್ನು ಒಬ್ಬರು, ಇಬ್ಬರು, ಮೂವರು  ಮತ್ತು ನಾಲ್ಕು ಮಂದಿ ಆಡಬಹುದು. ಆದರೆ ಇಲ್ಲಿ ಒಂದು ತಂಡವಾಗಿ ಆಡುವಾಗ ಮೂವರು ಮತ್ತು ನಾಲ್ವರು ಆಟಗಾರರಿಗೆ ಮಾತ್ರ ಅವಕಾಶ ಇರುತ್ತದೆ. ಅಲ್ಲದೆ ಒಂದು ತಂಡಕ್ಕೆ 18 ತುದಿಗಳಿಂದ ಥ್ರೋಗಳನ್ನು ನೀಡಲಾಗಿರುತ್ತದೆ. ಈ ಮೂಲಕ ಗುರಿಯ ಹತ್ತಿರಕ್ಕೆ ಯಾವ ತಂಡ ಹೆಚ್ಚು ಚೆಂಡುಗಳನ್ನು ತಲುಪಿಸುತ್ತಾರೋ ಅವರು ಅಧಿಕ ಪಾಯಿಂಟ್ ಪಡೆದು ವಿಜಯಿಯಾಗುತ್ತಾರೆ.

ಇದೀಗ ಭಾರತ ತಂಡವು ಲಾನ್​ ಬಾಲ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

Published On - 6:49 pm, Tue, 2 August 22

Follow Us
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್
ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್
NEET ರಿಸಲ್ಟ್ ಲೇಟ್​​; ಈ ಸಲ ಆಪ್ಷನ್ ಎಂಟ್ರಿ ಹೇಗೆ?
NEET ರಿಸಲ್ಟ್ ಲೇಟ್​​; ಈ ಸಲ ಆಪ್ಷನ್ ಎಂಟ್ರಿ ಹೇಗೆ?
ಸಿಇಟಿ 2026: ಸೀಟ್​​ ಹಂಚಿಕೆ ಹೇಗೆ ನಡೆಯುತ್ತೆ? 
ಸಿಇಟಿ 2026: ಸೀಟ್​​ ಹಂಚಿಕೆ ಹೇಗೆ ನಡೆಯುತ್ತೆ? 
ಎಸ್​ಸಿ ಒಳ ಮೀಸಲಾತಿ ಗೊಂದಲ ಬಗ್ಗೆ KEA ನಿರ್ದೇಶಕ ಪ್ರಸನ್ನ ಹೇಳಿದ್ದೇನು?
ಎಸ್​ಸಿ ಒಳ ಮೀಸಲಾತಿ ಗೊಂದಲ ಬಗ್ಗೆ KEA ನಿರ್ದೇಶಕ ಪ್ರಸನ್ನ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ಬಾಮೈದನ ಸ್ನೇಹಿತೆಯ ನಿವಾಸದಲ್ಲೂ ಇಡಿ ಪರಿಶೀಲನೆ
ಸತೀಶ್ ಜಾರಕಿಹೊಳಿ ಬಾಮೈದನ ಸ್ನೇಹಿತೆಯ ನಿವಾಸದಲ್ಲೂ ಇಡಿ ಪರಿಶೀಲನೆ