ನೀರಜ್ ಚೋಪ್ರಾ
ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 (Commonwealth Games 2022)ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಭಾರತೀಯ ಆಟಗಾರರು ಕೂಡ ಸಂಪೂರ್ಣ ಸಜ್ಜಾಗಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 70ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಜುಲೈ 28 ರಿಂದ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಬಾರಿ 215 ಭಾರತೀಯ ಆಟಗಾರರು ಪದಕಕ್ಕಾಗಿ ಸೆಣಸಾಡಲಿದ್ದಾರೆ.ಪಿವಿ ಸಿಂಧು, ನೀರಜ್ ಚೋಪ್ರಾ, ಮಣಿಕಾ ಬಾತ್ರಾ ( PV Sindhu, Neeraj Chopra, Manika Batra) ಸೇರಿದಂತೆ ಭಾರತದ ತಾರೆಯರು ಯಾವಾಗ ಮೈದಾನದಲ್ಲಿ ತಮ್ಮ ಶಕ್ತಿ ಪ್ರದರ್ಶಿಸುತ್ತಾರೆ, ಯಾವ ಸಮಯದಲ್ಲಿ ತಮ್ಮ ಪಂದ್ಯವನ್ನು ಆಡುತ್ತಾರೆ ಎಂಬುದರ ಬಗ್ಗೆ ಪೂರ್ಣ ವಿವರ ಇಲ್ಲಿದೆ.
- ಬ್ಯಾಡ್ಮಿಂಟನ್ ಪಂದ್ಯಗಳು ಜುಲೈ 29 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 8 ರವರೆಗೆ ನಡೆಯಲಿವೆ. ಪಂದ್ಯಗಳು ಸಂಜೆ 5 ರಿಂದ ಆರಂಭವಾಗಲಿದ್ದು, ಪಿವಿ ಸಿಂಧು, ಗಾಯತ್ರಿ ಗೋಪಿಚಂದ್, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಸಾತ್ವಿಕ್ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಕಣಕ್ಕಿಳಿಯಲಿದ್ದಾರೆ.
- ಬಾಕ್ಸಿಂಗ್ ಪಂದ್ಯಗಳು ಜುಲೈ 29 ರಿಂದ ಆಗಸ್ಟ್ 7 ರವರೆಗೆ ನಡೆಯಲಿವೆ. ಭಾರತೀಯ ಬಾಕ್ಸರ್‌ಗಳು ರಾತ್ರಿ 9 ರಿಂದ ತಮ್ಮ ಸವಾಲನ್ನು ಪ್ರಸ್ತುತಪಡಿಸಲಿದ್ದಾರೆ. ಎಲ್ಲರ ಕಣ್ಣುಗಳು ನಿಖತ್ ಜರೀನ್, ಲೊವ್ಲಿನಾ ಬೊರೆಗೊಹಾನ್ ಮೇಲೆ ಇರುತ್ತದೆ.
- ವೇಟ್ ಲಿಫ್ಟಿಂಗ್ ಪಂದ್ಯಗಳು ಜುಲೈ 30 ರಿಂದ ಆಗಸ್ಟ್ 3 ರವರೆಗೆ ನಡೆಯಲಿವೆ. ಪಂದ್ಯಗಳು ಬೆಳಗ್ಗೆ 5 ಗಂಟೆಗೆ ಆರಂಭವಾಗಲಿವೆ. ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು, ಜೆರೆಮಿ ಲಾಲ್ರಿನ್ನುಂಗಾ ಪದಕಕ್ಕೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ.
- ಆಗಸ್ಟ್ 5 ಮತ್ತು 6 ರಂದು ರಾತ್ರಿ 7.30 ರಿಂದ ಕುಸ್ತಿ ಪಂದ್ಯಗಳು ನಡೆಯಲಿವೆ. ಇಡೀ ರಾಷ್ಟ್ರವೇ ಭಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಅವರ ಪ್ರದರ್ಶನಕ್ಕಾಗಿ ಕಾಯುತ್ತಿದೆ.
- ಅಥ್ಲೆಟಿಕ್ಸ್ ಪಂದ್ಯಗಳು ಜುಲೈ 30 ರಿಂದ ಆಗಸ್ಟ್ 7 ರವರೆಗೆ ನಡೆಯಲಿವೆ. ಬೆಳಗ್ಗೆ 10ರಿಂದ ಅಥ್ಲೆಟಿಕ್ಸ್ ಪಂದ್ಯಗಳು ಆರಂಭವಾಗಲಿವೆ. ಒಲಿಂಪಿಕ್ ಚಾಂಪಿಯನ್‌ಗಳಾದ ನೀರಜ್ ಚೋಪ್ರಾ, ಎಂ ಶ್ರೀಶಂಕರ್, ಹಿಮಾ ದಾಸ್, ದ್ಯುತಿ ಚಂದ್ ಅವರನ್ನು ಪ್ರಶಸ್ತಿಗೆ ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ.
- ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸವಾಲೊಡ್ಡಲು ಭಾರತ ಕ್ರಿಕೆಟ್ ತಂಡ ಸಜ್ಜಾಗಿದೆ. ಜುಲೈ 29 ಮತ್ತು ಆಗಸ್ಟ್ 7 ರ ನಡುವೆ, ಕ್ರಿಕೆಟ್ ಪಂದ್ಯಗಳು ಬೆಳಿಗ್ಗೆ 11 ರಿಂದ ನಡೆಯಲಿವೆ. ಜುಲೈ 31 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಆಗಸ್ಟ್ 6 ರಂದು ಮತ್ತು ಫೈನಲ್ ಆಗಸ್ಟ್ 7 ರಂದು ನಡೆಯಲಿದೆ.
- ಹಾಕಿ ಪಂದ್ಯಗಳು ಜುಲೈ 29 ರಿಂದ ಆಗಸ್ಟ್ 8 ರವರೆಗೆ ನಡೆಯಲಿದ್ದು, ಭಾರತದ ಪುರುಷ ಮತ್ತು ಮಹಿಳಾ ತಂಡದೊಂದಿಗೆ ಘಾನಾ, ಇಂಗ್ಲೆಂಡ್, ಕೆನಡಾ ಮತ್ತು ವೇಲ್ಸ್ ತಂಡಗಳು ಗುಂಪಿನಲ್ಲಿವೆ. ರಾತ್ರಿ 7.30ಕ್ಕೆ ಪುರುಷರ ಮತ್ತು ಮಹಿಳೆಯರ ಪಂದ್ಯಗಳು ಆರಂಭವಾಗಲಿವೆ.
- ಜುಲೈ 29ರಿಂದ ಸೈಕ್ಲಿಂಗ್ ಸ್ಪರ್ಧೆಗಳು ಆರಂಭವಾಗಲಿದ್ದು, ಭಾರತದಿಂದ 13 ಆಟಗಾರರು ಸವಾಲನ್ನು ಮಂಡಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ರೊನಾಲ್ಡೊ ತಂಡವನ್ನು ಮುನ್ನಡೆಸಿದರೆ, ಮಹಿಳೆಯರ ವಿಭಾಗದಲ್ಲಿ ಮಯೂರಿ ಲೂಟ್ ತಂಡವನ್ನು ಮುನ್ನಡೆಸಲಿದ್ದಾರೆ.
- ಜೂಡೋ ಪಂದ್ಯಗಳು ಆಗಸ್ಟ್ 1 ರಿಂದ 3 ರವರೆಗೆ ನಡೆಯಲಿವೆ. ಈ ಸ್ಪರ್ಧೆಯಲ್ಲಿ ಭಾರತ 3 ಬೆಳ್ಳಿ ಮತ್ತು 5 ಕಂಚು ಸೇರಿದಂತೆ ಒಟ್ಟು 8 ಪದಕಗಳನ್ನು ಗೆದ್ದಿದೆ, ಆದರೆ ಚಿನ್ನದ ಕಾಯುವಿಕೆ ಇನ್ನೂ ಮುಂದುವರೆದಿದೆ. ಸುಶೀಲಾ ತಂಡದ ಅನುಭವಿ ಆಟಗಾರ್ತಿಯಾಗಿದ್ದು, ಈ ಬಾರಿ ಪದಕದ ಬಣ್ಣ ಬದಲಿಸುವ ನಿರೀಕ್ಷೆ ಇದೆ. 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದರು.
- ಸ್ಕ್ವಾಷ್ ಪಂದ್ಯಗಳು ಜುಲೈ 29 ರಿಂದ ಆಗಸ್ಟ್ 8 ರವರೆಗೆ ನಡೆಯಲಿದ್ದು, ಇದರಲ್ಲಿ ಭಾರತ ಒಟ್ಟು 3 ಪದಕಗಳನ್ನು ಗೆದ್ದಿದೆ. ದೀಪಿಕಾ ಪಳ್ಳಿಕಲ್, ಜೋಷ್ನಾ ಚಿನಪ್ಪ ನಿರಂತರವಾಗಿ ಪದಕ ಗೆಲ್ಲುತ್ತಿದ್ದಾರೆ. ಪಂದ್ಯಗಳು ಸಂಜೆ 4.30ಕ್ಕೆ ಆರಂಭವಾಗಲಿವೆ.
- ಜುಲೈ 29 ರಿಂದ ಆಗಸ್ಟ್ 8 ರವರೆಗೆ ಟೇಬಲ್ ಟೆನಿಸ್ ಪಂದ್ಯಗಳು ನಡೆಯಲಿವೆ. ಶರತ್ ಕಮಲ್, ಜಿ ಸತ್ಯನ್, ಮನಿಕಾ ಬಾತ್ರಾ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. ಪಂದ್ಯಗಳು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿವೆ.