IND vs AUS Final Playing XI: ಗೋಲ್ಡ್ ಗೇಮ್​ನಲ್ಲಿ ಭಾರತ ಮೊದಲು ಬೌಲಿಂಗ್; ಉಭಯ ತಂಡಗಳ ಪ್ಲೇಯಿಂಗ್ XI

IND vs AUS Final Playing XI: ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ಆರಂಭವಾಗಿದೆ. ಆಸ್ಟ್ರೇಲಿಯಾ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

IND vs AUS Final Playing XI: ಗೋಲ್ಡ್ ಗೇಮ್​ನಲ್ಲಿ ಭಾರತ ಮೊದಲು ಬೌಲಿಂಗ್; ಉಭಯ ತಂಡಗಳ ಪ್ಲೇಯಿಂಗ್ XI
TV9kannada Web Team

| Edited By: pruthvi Shankar

Aug 07, 2022 | 9:43 PM

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 (Birmingham Commonwealth Games 2022)ರಲ್ಲಿ, ಕುತೂಹಲದಿಂದ ಕಾಯುತ್ತಿದ್ದ ದಿನ ಮತ್ತು ಸಮಯ ಬಂದಿದೆ. ಮೊದಲ ಬಾರಿಗೆ ಮಹಿಳಾ ಟಿ20 ಕ್ರಿಕೆಟ್‌ನ ಮೊದಲ ಚಾಂಪಿಯನ್ ಯಾರು ಎಂದು ನಿರ್ಧರಿಸುವ ದಿನ ಬಂದಿದೆ. ಭಾರತ ಕ್ರಿಕೆಟ್ ತಂಡವೂ ಚಿನ್ನದ ಪದಕದ ರೇಸ್​ನಲ್ಲಿದೆ ಎಂಬುದು ಪ್ರಮುಖ ಸಂಗತಿ. ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವಿನ ಫೈನಲ್ ಪಂದ್ಯ ಆರಂಭವಾಗಿದೆ. ಆಸ್ಟ್ರೇಲಿಯಾ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 14 ವರ್ಷಗಳ ನಂತರ ಕ್ರಿಕೆಟ್ ಮರಳಿದೆ. ಇದಕ್ಕೂ ಮೊದಲು, 1998 ರಲ್ಲಿ ಮೊದಲ ಮತ್ತು ಏಕೈಕ ಬಾರಿಗೆ ಕ್ರಿಕೆಟ್ ಆಡಲಾಯಿತು. ಆದರೆ ಆ ಆವೃತ್ತಿಯಲ್ಲಿ ಭಾರತ ತಂಡ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಸೋಲನ್ನು ಎದುರಿಸಬೇಕಾಯಿತು.

ಭಾರತದ ಪ್ರದರ್ಶನ ಹೀಗಿತ್ತು

ಈಗ ಮತ್ತೊಮ್ಮೆ ಕಾಮನ್​ವೆಲ್ತ್​ ಗೇಮ್ಸ್​ಗೆ ಕ್ರಿಕೆಟ್ ಮರಳಿದೆ. ಸ್ವರೂಪವೇ ಬೇರೆ, ಆದರೆ ಆಸ್ಟ್ರೇಲಿಯ ಮತ್ತೆ ಫೈನಲ್‌ನಲ್ಲಿದೆ. ವ್ಯತ್ಯಾಸವೆಂದರೆ ಈ ಬಾರಿ ಆಫ್ರಿಕಾ ಬದಲು ಭಾರತ ಫೈನಲ್‌ನಲ್ಲಿದೆ. ಟೂರ್ನಿಯಲ್ಲಿ ಉಭಯ ತಂಡಗಳ ಪ್ರದರ್ಶನ ಬಲಿಷ್ಠವಾಗಿದೆ. ಇಡೀ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಮೊದಲ ಪಂದ್ಯದಲ್ಲಿಯೇ ಭಾರತದಿಂದ ದೊಡ್ಡ ಸವಾಲು ಪಡೆದ ಆಸೀಸ್, ಟೀಂ ಇಂಡಿಯಾ ವಿರುದ್ಧ ಗೆದ್ದು ಬೀಗಿತ್ತು. ಆದಾಗ್ಯೂ, ಭಾರತ ಇದರ ನಂತರ ಪುನರಾಗಮನವನ್ನು ಮಾಡಿ ಪಾಕಿಸ್ತಾನ, ಬಾರ್ಬಡೋಸ್ ಮತ್ತು ನಂತರ ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಮತ್ತೊಂದೆಡೆ, ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿ ಚಿನ್ನದ ಪದಕದ ಪಂದ್ಯಕ್ಕೆ ಟಿಕೆಟ್ ಪಡೆಯಿತು

IND vs AUS: ಇಂದಿನ ಪ್ಲೇಯಿಂಗ್ XI

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ಮೇಘನಾ ಸಿಂಗ್, ರಾಧಾ ಯಾದವ್, ರೇಣುಕಾ ಸಿಂಗ್

ಇದನ್ನೂ ಓದಿ

ಆಸ್ಟ್ರೇಲಿಯಾ: ಮೆಗ್ ಲ್ಯಾನಿಂಗ್ (ನಾಯಕಿ), ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ತಾಲಿಯಾ ಮೆಕ್‌ಗ್ರಾತ್, ರಾಚೆಲ್ ಹ್ಯಾನ್ಸ್, ಆಶ್ಲೇ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸನ್, ಎಲಾನಾ ಕಾಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್

Follow us on

Related Stories

Most Read Stories

Click on your DTH Provider to Add TV9 Kannada