PV Sindhu: ಮೊದಲ ಮ್ಯಾಚ್​ನಲ್ಲೇ ಪಾಕ್ ಆಟಗಾರ್ತಿಗೆ ಮಣ್ಣು ಮುಕ್ಕಿಸಿದ ಪಿವಿ ಸಿಂಧು: ಭರ್ಜರಿ ಗೆಲುವು

| Updated By: Vinay Bhat

Updated on: Jul 30, 2022 | 8:09 AM

CWG 2022: ಬಹುನಿರೀಕ್ಷಿತ ಕಾಮಲ್​ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಮೊದಲ ದಿನವೇ ಪರಾಕ್ರಮ ಮೆರೆದಿದೆ. ಅದರಲ್ಲೂ ಪಾಕಿಸ್ತಾನ ವಿರುದ್ಧ ನಡೆದ ಎಲ್ಲ ಕ್ರೀಡೆಯಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಮೊದಲಿಗೆ ಎ ವಿಭಾಗದ ಬ್ಯಾಡ್ಮಿಂಟನ್‌ ತಂಡ ಸ್ಪರ್ಧೆಯಲ್ಲಿ ಭಾರತ ತಂಡ ಪಾಕಿಸ್ಥಾನವನ್ನು ಕೆಡವಿತು.

1 / 7
ಬಹುನಿರೀಕ್ಷಿತ ಕಾಮಲ್​ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಮೊದಲ ದಿನವೇ ಪರಾಕ್ರಮ ಮೆರೆದಿದೆ. ಅದರಲ್ಲೂ ಪಾಕಿಸ್ತಾನ ವಿರುದ್ಧ ನಡೆದ ಎಲ್ಲ ಕ್ರೀಡೆಯಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಮೊದಲಿಗೆ ಎ ವಿಭಾಗದ ಬ್ಯಾಡ್ಮಿಂಟನ್‌ ತಂಡ ಸ್ಪರ್ಧೆಯಲ್ಲಿ ಭಾರತ ತಂಡ ಪಾಕಿಸ್ಥಾನವನ್ನು ಕೆಡವಿತು.

2 / 7
ಮಿಶ್ರ ಡಬಲ್ಸ್‌ ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಬಿ. ಸುಮೀತ್‌ ರೆಡ್ಡಿ 21-9, 21-12 ಅಂತರದ ಗೆಲುವು ಒಲಿಸಿಕೊಂಡರು. ಬಳಿಕ ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್‌ 21-16, 22-20 ಅಂತರದಿಂದ ಮುಹಮ್ಮದ್‌ ಅಲಿ ಅವರನ್ನು ಕೆಡವಿದರು.

3 / 7
ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಪಾಕಿಸ್ತಾನಿ ಮಹೂರ್ ಶೆಹಜಾದಿ ಅವರನ್ನು ಸೋಲಿಸಿ ಕಾಮನ್ ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಶುಭಾರಂಭ ಮಾಡಿದರು. ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲೇ ಸಿಂಧು 21-7, 21-6 ಸೆಟ್ ಗಳಿಂದ ಮಹೂರ್ ಶೆಹಜಾದಿ ಅವರನ್ನು ಸೋಲಿಸಿದರು.

4 / 7
ಇನ್ನು ಪುರುಷರ ಡಬಲ್ಸ್‌ ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ 21-12, 21-9 ಅಂತರದಿಂದ ಮುರಾದ್‌ ಅಲಿ-ಮುಹಮ್ಮದ್‌ ಇರ್ಫಾನ್‌ ವಿರುದ್ಧ ಗೆಲುವು ಸಾಧಿಸಿದರು.

5 / 7
ಇತ್ತ ಪುರುಷರ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಶಿವ ಥಾಪ ಅಮೋಘ ಆರಂಭ ಪಡೆದರು. 63.5 ಕೆಜಿ ವಿಭಾಗದಲ್ಲಿ ಪಾಕಿಸ್ಥಾನದ ಸುಲೇಮಾನ್‌ ಬಲೋಕ್‌ ಅವರನ್ನು 5-0 ಅಂತರದಿಂದ ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. 5 ಬಾರಿಯ ಏಷ್ಯನ್‌ ಚಾಂಪಿಯನ್‌ ಶಿಪ್‌ ಪದಕ ವಿಜೇತ ಶಿವ ಥಾಮ ಅವರಿಗೆ ಪಾಕಿಸ್ಥಾನಿ ಎದುರಾಳಿ ಯಾವ ರೀತಿಯಲ್ಲೂ ಸಾಟಿಯಾಗಲಿಲ್ಲ.

6 / 7
ಈಜು ಸರ್ಧೆಯಲ್ಲಿ ಭಾರತದ ಶ್ರೀಹರಿ ನಟರಾಜನ್‌ ಅವರು 100 ಮೀ. ಬ್ಯಾಕ್‌ಸ್ಟ್ರೋಕ್​ ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. 54.68 ಸೆಕೆಂಡ್‌ ಗಳಲ್ಲಿ ದೂರವನ್ನು ಕ್ರಮಿಸಿದ ಶ್ರೀಹರಿ ಹೀಟ್‌ ನಲ್ಲಿ 3ನೇ ಹಾಗೂ ಒಟ್ಟಾರೆ 5ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

7 / 7
ಭಾರತ ಮಹಿಳಾ ಹಾಕಿ ತಂಡ ಕೂಡ ಭರ್ಜರಿ ಶುಭಾರಂಭ ಮಾಡಿದೆ. ಗುರ್ಜಿತ್ ಕೌರ್ ಗಳಿಸಿದ ಸೊಗಸಾದ ಎರಡು ಗೋಲುಗಳ ಬಲದಿಂದ ಸವಿತಾ ಪೂನಿಯಾ ನಾಯಕತ್ವದ ಭಾರತ 5-0ಯಿಂದ ತನಗಿಂತ ಕೆಳ ರ‍್ಯಾಂಕಿನ ಘಾನಾ ವಿರುದ್ಧ ಜಯಭೇರಿ ಮೊಳಗಿಸಿತು.

Published On - 8:09 am, Sat, 30 July 22