ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿವಾದಾತ್ಮಕ ಬೌಲರ್ ಮೊಹಮ್ಮದ್ ಆಮಿರ್

ಪಾಕಿಸ್ತಾನದ ವಿವಾದಾತ್ಮಕ ವೇಗದ ಬೌಲರ್ ಮೊಹಮ್ಮದ್ ಆಮಿರ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಧೋರಣೆಗಳಿಂದ ಬೇಸತ್ತು ಅವರು ಕ್ರೀಡೆಗೆ ಗುಡ್​ಬೈ ಹೇಳುವ ನಿರ್ಧಾರ ತೆಗೆದುಕೊಂಡರೆಂದು ಹೇಳಲಾಗುತ್ತಿದೆ.

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿವಾದಾತ್ಮಕ ಬೌಲರ್ ಮೊಹಮ್ಮದ್ ಆಮಿರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 17, 2020 | 8:21 PM

ಕ್ರೀಡೆ ಯಾವುದೇ ಆಗಿರಲಿ, 28ರ ವಯಸ್ಸು ಒಬ್ಬ ಕ್ರೀಡಾಪಟುಗೆ ಅವನು ಪ್ರತಿನಿಧಿಸುವ ಆಟದಲ್ಲಿ ಉತ್ತುಂಗವನ್ನು ತಲುಪಿರುವ ಇಲ್ಲವೇ ತಲುಪಬಹುದಾದ ಸಮಯ. ಆದರೆ ಪಾಕಿಸ್ತಾನದ ವಿವಾದಾತ್ಮಕ ವೇಗದ ಬೌಲರ್ ಮೊಹಮ್ಮದ್ ಆಮಿರ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಆ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸಿಮ್ ಖಾನ್ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ ಆಮಿರ್ ರಿಟೈರ್​ಮೆಂಟ್ ಘೋಷಿಸಿರುವುದನ್ನು ಖಚಿತಪಡಿಸಿದ್ದಾರೆ.

30 ಟೆಸ್ಟ್, 61 ಒಂದು ದಿನದ ಅಂತರರಾಷ್ಟ್ರೀಯ ಮತ್ತು 50ಟಿ20ಐ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ ಆಮಿರ್ ಒಟ್ಟು 259 ವಿಕೆಟ್​ಗಳನ್ನು ಪಡೆದಿದ್ದಾರೆ. ತನ್ನ 17ನೇ ವಯಸ್ಸಿನಲ್ಲೇ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ಆಮಿರ್​ರನ್ನು ಆ ದೇಶದ ಸರ್ವಶ್ರೇಷ್ಠ ವೇಗದ ಬೌಲರ್ ಎಂದು ಗುರುತಿಸಿಕೊಂಡಿರುವ ವಾಸಿಮ್ ಅಕ್ರಮ್ ಅವರ ಉತ್ತರಾಧಿಕಾರಿಯೆಂದು ಪರಿಗಣಿಸಿಲಾಗಿತ್ತು.

ಅಕ್ರಮ್​ರಂಥ ವ್ಯಕ್ತಿತ್ವವನ್ನು ಆಮಿರ್ ಮೈಗೂಡಿಸಿಕೊಂಡಿದ್ದರೆ ಅವರಿಗೂ ಆ ಲೆಜೆಂಡ್​ಗೆ ಸಿಗುವಷ್ಟೇ ಗೌರವ ದಕ್ಕುತ್ತಿತ್ತು. ಆದರೆ, ಹುಡುಗು ಬುದ್ಧಿ ಅವರನ್ನು ಯಾಮಾರಿಸಿತು. ಪಾಕಿಸ್ತಾನದ 2010ರ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಆಮಿರ್ 5ವರ್ಷಗಳ ಅವಧಿಗೆ ನಿಷೇಧಕ್ಕೊಳಗಾದರು. ಅವರೊಂದಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಆರಂಭ ಆಟಗಾರ ಸಲ್ಮಾನ್ ಬಟ್ ಮತ್ತು ಇನ್ನೊಬ್ಬ ವೇಗದ ಬೌಲರ್ ಮೊಹಮ್ಮದ್ ಆಸಿಫ್​ರನ್ನು ಸಹ 5 ವರ್ಷಗಳ ಕಾಲ ಕ್ರಿಕೆಟ್ ಆಡದಂತೆ ನಿಷೇಧಿಸಲಾಗಿತ್ತು.

ಪಿಸಿಬಿಯ ಸಿಇಒ ವಾಸಿಮ್ ಖಾನ್

ದೇಶೀಯ ಕ್ರಿಕೆಟ್​ನಲ್ಲಿ ಪಾಕಿಸ್ತಾನ ನ್ಯಾಶನಲ್ ಬ್ಯಾಂಕ್ ಪರ 2009 ರಲ್ಲಿ ಆಡಲಾರಂಭಿಸಿದ ಆಮಿರ್ ತಮ್ಮ ವೇಗ, ನಿಖರತೆ ಮತ್ತು ವಿಕೆಟ್ ಪಡೆಯುವ ಸಾಮರ್ಥ್ಯದಿಂದ ಕೂಡಲೇ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆದರು. ಅವರನ್ನು 2009ರ ಟಿ20ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡದಲ್ಲಿ ಅವಕಾಶ ಕಲ್ಪಿಸಲಾಯಿತು. ಆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಉತ್ಕೃಷ್ಟ ಬೌಲಿಂಗ್ ಪ್ರದರ್ಶನ ನೀಡಿದ ಆಮಿರ್ ಪಾಕಿಸ್ತಾನ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದರು.

ಹುಡುಗು ಬುದ್ಧಿ ಅವರ ಉಜ್ವಲ ಭವಿಷ್ಯವನ್ನು 2010ರಲ್ಲಿ ಮೊಟಕುಗೊಳಿಸಿತು. ನಿಷೇದಕ್ಕೊಳಗಾದರೂ ಟೀಮಿಗೆ ವಾಪಸ್ಸಾಗುವ ಛಲತೊಟ್ಟಿದ್ದ ಆಮಿರ್, 2015ರಲ್ಲಿ ತಮ್ಮಾಸೆಯನ್ನು ಈಡೇರಿಸಿಕೊಂಡರು. 2017 ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರ ಆಸಾಧಾರಣ ಬೌಲಿಂಗ್ ಪ್ರದರ್ಶನದಿಂದ ಪಾಕಿಸ್ತಾನ ಚಾಂಪಿಯನ್ ಪಟ್ಟ ಧರಿಸಿತು. 2019 ರ ಐಸಿಸಿ ವಿಶ್ವಕಪ್​ನಲ್ಲಿ ಆಮಿರ್ ಪಾಕಿಸ್ತಾನದ ಪರ ಅತಿಹೆಚ್ಚು ವಿಕೆಟ್ ಪಡೆದರು.

ಮೊಹಮ್ಮದ್ ಆಸಿಫ್

ಬಿಳಿಚೆಂಡಿನ ಕ್ರಿಕೆಟ್ ಮೇಲೆ ಹೆಚ್ಚು ಗಮನ ಹರಿಸುವುದಕ್ಕೋಸ್ಕರ ಆಮಿರ್ 2017ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದರು. ಅವರ ಈ ನಿರ್ಧಾರ ಆಗ ಪಾಕ್ ಟೀಮಿನ ಕೋಚ್ ಅಗಿದ್ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಅವರನ್ನು ಕೆರಳಿಸಿತ್ತು.

ಪಾಕಿಸ್ತಾನದ ಕ್ರಿಕೆಟ್ ವಲಯಗಳಲ್ಲಿ ಆಮಿರ್ ರೆಟೈರ್​ಮೆಂಟ್ ನಿರ್ಧಾರ ತಾತ್ಕಾಲಿಕ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಅವರ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ.

Published On - 7:27 pm, Thu, 17 December 20

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ