ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಇದುವರೆಗೆ 31 ಪಂದ್ಯಗಳು ನಡೆದಿವೆ. 31 ನೇ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ನೇಪಾಳ ನಡುವೆ ನಡೆಯಿತು. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ ಒಂದು ರನ್‌ನಿಂದ ಗೆದ್ದುಕೊಂಡಿತು. ಈ ಪಂದ್ಯದ ಸೋಲಿನೊಂದಿಗೆ ನೇಪಾಳ ಕೂಡ ವಿಶ್ವಕಪ್‌ನಿಂದ ಹೊರಬಿದ್ದಿದೆ. ಈ 31 ಪಂದ್ಯಗಳ ನಂತರ ಸೂಪರ್ 8 ಸುತ್ತಿಗೆ 6 ತಂಡಗಳು ಅರ್ಹತೆ ಪಡೆದಂತ್ತಾಗಿದೆ. ಈ 6 ತಂಡಗಳಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ತಂಡಗಳು ಸೇರಿವೆ. ಮೊದಲ ಟಿ20 ವಿಶ್ವಕಪ್ ಆಡುತ್ತಿರುವ ಅಮೆರಿಕ ತಂಡ ತನ್ನ ಮೊದಲ ಆವೃತ್ತಿಯಲ್ಲೇ ಅದ್ಭುತ ಪ್ರದರ್ಶನ ನೀಡಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ.
ಒಂದೆಡೆ 6 ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿದ್ದರೆ, ಮತ್ತೊಂದೆಡೆ 10 ತಂಡಗಳು ಸೂಪರ್-8 ರೇಸ್‌ನಿಂದ ಹೊರಗುಳಿದಿವೆ. ಇದರಲ್ಲಿ ಪಾಕಿಸ್ತಾನ, ಕೆನಡಾ, ಐರ್ಲೆಂಡ್, ನ್ಯೂಜಿಲೆಂಡ್, ನಮೀಬಿಯಾ, ಪಪುವಾ ನ್ಯೂಗಿನಿಯಾ, ಶ್ರೀಲಂಕಾ, ಉಗಾಂಡಾ, ನೇಪಾಳ ಮತ್ತು ಒಮಾನ್ ತಂಡಗಳು ಸೇರಿವೆ. ಇನ್ನೂ ಎರಡು ತಂಡಗಳು ಸೂಪರ್-8 ರಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಈಗ ನಾಲ್ಕು ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.
ಹೊರಬಿದ್ದ ತಂಡಗಳ ಪೈಕಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಈ ಬಾರಿ ಸಾಕಷ್ಟು ಅಚ್ಚರಿ ಮೂಡಿಸಿವೆ. ಎರಡೂ ತಂಡಗಳನ್ನು ಅತ್ಯಂತ ಬಲಿಷ್ಠವೆಂದು ಪರಿಗಣಿಸಲಾಗಿತ್ತು. ಆದರೆ ಈ ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದವು. ಇದರಿಂದಾಗಿ ಈ ಎರಡೂ ತಂಡಗಳಿಗೆ ಸೂಪರ್-8ರ ಘಟ್ಟ ತಲುಪಲು ಸಾಧ್ಯವಾಗಿಲ್ಲ.
ಇದೀಗ ಇಂಗ್ಲೆಂಡ್, ಸ್ಕಾಟ್ಲೆಂಡ್, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ ನಡುವೆ ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯಲು ಪೈಪೋಟಿ ಏರ್ಪಟ್ಟಿದ್ದು, ಇದರಲ್ಲಿ ಎರಡು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಲ್ಲಿವೆ. ಈ ನಾಲ್ಕು ತಂಡಗಳಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಪರಿಗಣಿಸಲಾಗಿದೆ.
T20 World Cup 2024: ಟಿ20 ವಿಶ್ವಕಪ್ನಲ್ಲೂ ಕಳಪೆ ಪ್ರದರ್ಶನ; ಮತ್ತೆ ಬಾಬರ್ ಆಝಂ ತಲೆದಂಡ?
ಟಿ20 ವಿಶ್ವಕಪ್‌ನ ಸೂಪರ್-8 ಸುತ್ತಿನಲ್ಲಿ ಭಾರತ ತಂಡವು ತನ್ನ ಮೂರು ಪಂದ್ಯಗಳನ್ನು ಯಾವ ದಿನಾಂಕ ಮತ್ತು ಸ್ಥಳದಲ್ಲಿ ಆಡುತ್ತದೆ ಎಂಬುದನ್ನು ಈಗಾಗಲೇ ನಿರ್ಧರಿಸಲಾಗಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಬಾರ್ಬಡೋಸ್‌ನಲ್ಲಿ ಆಡಲಿದೆ. ಇದಾದ ಬಳಿಕ ಎರಡನೇ ಪಂದ್ಯ ಜೂನ್ 22 ರಂದು ಆಂಟಿಗುವಾದಲ್ಲಿ ನಡೆಯಲಿದೆ. ಈ ಸುತ್ತಿನ ಮೂರನೇ ಮತ್ತು ಕೊನೆಯ ಪಂದ್ಯ ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ನಡೆಯಲ್ಲಿದೆ.
ಟೀಂ ಇಂಡಿಯಾವಿರುವ ಗುಂಪು 1 ರಲ್ಲಿ ಈಗಾಗಲೇ ಎರಡು ತಂಡಗಳು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿವೆ. ಮೂರನೇ ತಂಡ ಯಾವುದೆಂದು ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಬಿ ಗುಂಪಿನಿಂದ ಆಸ್ಟ್ರೇಲಿಯಾ ಮತ್ತು ಸಿ ಗುಂಪಿನಿಂದ ಅಫ್ಘಾನಿಸ್ತಾನ ತಂಡ ಗುಂಪು-1 ರ ಭಾಗವಾಗಿವೆ. ಈಗ ನಾಲ್ಕನೇ ತಂಡ ಡಿ ಗುಂಪಿನಿಂದ ಆಯ್ಕೆಯಾಗಬೇಕಾಗಿದೆ. ಡಿ ಗುಂಪಿನಲ್ಲಿ ಯಾವ ತಂಡ ಎರಡನೇ ಸ್ಥಾನ ಪಡೆಯುತ್ತದೋ, ಆ ತಂಡವು ಗುಂಪು-1 ರ ಭಾಗವಾಗಲಿದೆ. ಶ್ರೀಲಂಕಾ ತಂಡ ಈಗಾಗಲೇ ಡಿ ಗುಂಪಿನಿಂದ ಹೊರಗುಳಿದಿದೆ. ಆದರೆ ದಕ್ಷಿಣ ಆಫ್ರಿಕಾ ತಂಡ ಸೂಪರ್-8 ಸುತ್ತಿನಲ್ಲಿ ಗುಂಪು-2 ಭಾಗವಾಗಿದೆ. ಇದರರ್ಥ ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ನೇಪಾಳ, ಈ ಮೂರು ತಂಡಗಳಲ್ಲಿ ಒಂದು ತಂಡವು ಸೂಪರ್-8 ಸುತ್ತಿನಲ್ಲಿ ಗುಂಪು-1 ರಲ್ಲಿ ಸ್ಥಾನ ಪಡೆಯಲ್ಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ