AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಏನಿದು ಸೂಪರ್-8: ಹೇಗಿರಲಿದೆ ಮುಖಾಮುಖಿ? ಇಲ್ಲಿದೆ ಸಂಪೂರ್ಣ ಮಾಹಿತಿ

T20 World Cup 2024 Super 8: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ ಸೂಪರ್-8 ಸುತ್ತು ಶುರುವಾಗಲಿದೆ. ಈ ಸುತ್ತಿನಲ್ಲಿ ಎಂಟು ತಂಡಗಳ ನಡುವೆ ಕಾದಾಟ ನಡೆಯಲಿದೆ. ಏನಿದು ಸೂಪರ್-8 ಸುತ್ತು? ಯಾರೆಲ್ಲಾ ಮುಖಾಮುಖಿಯಾಗಲಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

T20 World Cup 2024: ಏನಿದು ಸೂಪರ್-8: ಹೇಗಿರಲಿದೆ ಮುಖಾಮುಖಿ? ಇಲ್ಲಿದೆ ಸಂಪೂರ್ಣ ಮಾಹಿತಿ
T20 World Cup 2024
ಝಾಹಿರ್ ಯೂಸುಫ್
|

Updated on:Jun 15, 2024 | 2:09 PM

Share

T20 World Cup 2024: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 32 ಪಂದ್ಯಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 8 ಮ್ಯಾಚ್​ಗಳು ಮಾತ್ರ. ಈ ಮೂವತ್ತೆರಡು ಪಂದ್ಯಗಳ ಮುಕ್ತಾಯದ ವೇಳೆಗೆ 10 ತಂಡಗಳು ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಇದೇ ವೇಳೆ 6 ತಂಡಗಳು ಸೂಪರ್-8 ಹಂತಕ್ಕೇರಿದೆ. ಇನ್ನು ಎರಡು ತಂಡಗಳಿಗೆ ಮುಂದಿನ ಸುತ್ತಿನ ಅರ್ಹತೆ ಪಡೆಯಲು ಅವಕಾಶವಿದ್ದು, ಬಾಂಗ್ಲಾದೇಶ್, ನೆದರ್​ಲೆಂಡ್ಸ್, ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಪಂದ್ಯಗಳ ಮುಕ್ತಾಯದೊಂದಿಗೆ ಸೂಪರ್-8 ಸುತ್ತಿನ ಮ್ಯಾಚ್​ಗಳು ಶುರುವಾಗಲಿದೆ. ಹಾಗಿದ್ರೆ ಏನಿದು ಸೂಪರ್-8 ಸುತ್ತು? ಹೇಗಿರಲಿದೆ ಮುಖಾಮುಖಿ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ…

ಏನಿದು ಸೂಪರ್-8?

ಈ ಪ್ರಶ್ನೆಗೆ ಸರಳ ಉತ್ತರ 8 ತಂಡಗಳ ಮುಖಾಮುಖಿ. ಅಂದರೆ ಮೊದಲ ಸುತ್ತಿನಿಂದ 8 ತಂಡಗಳು ದ್ವಿತೀಯ ಸುತ್ತಿಗೆ ಅರ್ಹತೆ ಪಡೆಯಲಿದೆ. ಇದೇ ಕಾರಣಕ್ಕಾಗಿ ಟಿ20 ವಿಶ್ವಕಪ್​ನ ದ್ವಿತೀಯ ಸುತ್ತನ್ನು ಸೂಪರ್-8 ಎಂದು ಕರೆಯಲಾಗುತ್ತದೆ.

ಹೇಗಿರಲಿದೆ ಮುಖಾಮುಖಿ?

ಮೇಲೆ ಹೇಳಿದಂತೆ ಸೂಪರ್-8 ಹಂತದಲ್ಲಿ ಒಟ್ಟು ಎಂಟು ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿ ಒಂದು ಗುಂಪಿನಲ್ಲಿ 4 ತಂಡಗಳಿರಲಿವೆ.

ಯಾರೆಲ್ಲಾ ಮುಖಾಮುಖಿ?

ಮೊದಲ ಸುತ್ತಿನಲ್ಲಿ ಒಂದೇ ಗುಂಪಿನಲ್ಲಿದ್ದ ತಂಡಗಳು ಸೂಪರ್-8 ಹಂತದಲ್ಲಿ ಮತ್ತೆ ಮುಖಾಮುಖಿಯಾಗುವುದಿಲ್ಲ. ಅಂದರೆ ಮೊದಲ ಸುತ್ತಿನಲ್ಲಿ ಭಾರತ ಮತ್ತು ಯುಎಸ್​ಎ ತಂಡಗಳು ಗ್ರೂಪ್-ಎ ನಲ್ಲ್ಲಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ಈ ತಂಡಗಳು ಪರಸ್ಪರ ಬೇರೆ ಬೇರೆ ಗ್ರೂಪ್​ನಲ್ಲಿ ಕಾಣಿಸಿಕೊಳ್ಳಲಿದೆ.

ಯಾವ ಗ್ರೂಪ್​ನಲ್ಲಿ ಯಾವ ತಂಡ?

  • ಗ್ರೂಪ್-1
  • ಭಾರತ
  • ಆಸ್ಟ್ರೇಲಿಯಾ
  • ಅಫ್ಘಾನಿಸ್ತಾನ್
  • ಬಾಂಗ್ಲಾದೇಶ್ ಅಥವಾ ನೆದರ್​ಲೆಂಡ್ಸ್.

ಮೊದಲ ಸುತ್ತಿನಲ್ಲಿ ಬಾಂಗ್ಲಾದೇಶ್ ಮತ್ತು ನೆದರ್​ಲೆಂಡ್ಸ್​ ತಂಡಗಳು ಕೊನೆಯ ಪಂದ್ಯವಾಡಬೇಕಿದೆ. ಈ ಪಂದ್ಯದಲ್ಲಿ ನೆದರ್​ಲೆಂಡ್ಸ್ ತಂಡ ಸೋತರೆ ಬಾಂಗ್ಲಾದೇಶ್ ಸೂಪರ್​-8 ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ನೆದರ್​ಲೆಂಡ್ ತಂಡ ಗೆದ್ದರೆ, ಬಾಂಗ್ಲಾದೇಶ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲ್ಲಲೇಬೇಕು. ಇಲ್ಲದಿದ್ದರೆ ನೆಟ್ ರನ್​ ರೇಟ್ ಮೂಲಕ ನೆದರ್​ಲೆಂಡ್ಸ್ ತಂಡಕ್ಕೆ ಸೂಪರ್-8 ಗೆ ಪ್ರವೇಶಿಸಲು ಅವಕಾಶವಿದೆ. ಹೀಗಾಗಿ ಗ್ರೂಪ್-1 ರಲ್ಲಿ ಕಾಣಿಸಿಕೊಳ್ಳಲಿರುವ 4ನೇ ತಂಡ ಯಾವುದೆಂದು ಇನ್ನೂ ಸಹ ನಿರ್ಧಾರವಾಗಿಲ್ಲ.

  • ಗ್ರೂಪ್-2
  • ಯುಎಸ್​ಎ
  • ವೆಸ್ಟ್ ಇಂಡೀಸ್
  • ಸೌತ್ ಆಫ್ರಿಕಾ
  • ಇಂಗ್ಲೆಂಡ್ ಅಥವಾ ಸ್ಕಾಟ್ಲೆಂಡ್.

ಗ್ರೂಪ್-2 ನಲ್ಲೂ ನಾಲ್ಕನೇ ಸ್ಥಾನ ಅಲಂಕರಿಸುವ ತಂಡ ಯಾವುದೆಂದು ಇನ್ನೂ ಸಹ ನಿರ್ಧಾರವಾಗಿಲ್ಲ. ಇಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವೆ ಪೈಪೋಟಿ ಇದೆ. ಒಂದು ವೇಳೆ ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸೋತರೆ ಮಾತ್ರ ಟಿ20 ವಿಶ್ವಕಪ್​ನಿಂದ ಇಂಗ್ಲೆಂಡ್ ಹೊರಬೀಳಲಿದೆ. ಇನ್ನು ಸ್ಕಾಟ್ಲೆಂಡ್ ಸೋತರೆ, ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಗೆಲ್ಲುವ ಮೂಲಕ ಇಂಗ್ಲೆಂಡ್ ಸೂಪರ್-8 ಹಂತಕ್ಕೆ ಪ್ರವೇಶಿಸಲಿದೆ. ಹೀಗಾಗಿ ಉಭಯ ತಂಡಗಳ ಕೊನೆಯ ಪಂದ್ಯದ ಫಲಿತಾಂಶದ ಬಳಿಕ ಗ್ರೂಪ್-2 ನಲ್ಲಿ ಕಾಣಿಸಿಕೊಳ್ಳುವ 4ನೇ ತಂಡ ಯಾವುದೆಂದು ಗೊತ್ತಾಗಲಿದೆ.

4 ತಂಡಗಳ ಮುಖಾಮುಖಿ ಹೇಗೆ?

ಇಲ್ಲಿ ಒಂದೇ ಗ್ರೂಪ್​ನಲ್ಲಿರುವ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಅಂದರೆ ಗ್ರೂಪ್-1 ರಲ್ಲಿರುವ ಭಾರತ ತಂಡವು, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್ ಅಥವಾ ನೆದರ್​ಲೆಂಡ್ಸ್ ವಿರುದ್ಧ ಪಂದ್ಯಗಳನ್ನಾಡಲಿದೆ. ಗ್ರೂಪ್-2 ನಲ್ಲೂ ಇದೇ ಮಾದರಿಯಲ್ಲಿ 4 ತಂಡಗಳು ಮುಖಾಮುಖಿಯಾಗಲಿದೆ.

ಮುಂದಿನ ಹಂತಕ್ಕೇರುವುದು ಹೇಗೆ?

ಸೂಪರ್-8 ಸುತ್ತಿನಲ್ಲಿ ಎರಡು ಗ್ರೂಪ್​ಗಳಲ್ಲೂ ಪಾಯಿಂಟ್ಸ್ ಟೇಬಲ್ ಇರಲಿದೆ. ಈ ಪಾಯಿಂಟ್ಸ್​ ಟೇಬಲ್​ಗಳ​ಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಸೆಮಿಫೈನಲ್​ ಸುತ್ತಿಗೆ ಪ್ರವೇಶಿಸಲಿದೆ.

ಇದನ್ನೂ ಓದಿ: Tim Southee: 24 ಎಸೆತಗಳಲ್ಲಿ ಹೊಸ ಇತಿಹಾಸ ನಿರ್ನಿಸಿದ ಟಿಮ್ ಸೌಥಿ

ಸೂಪರ್-8 ಪಂದ್ಯಗಳು ಯಾವಾಗ ಶುರು?

ಟಿ20 ವಿಶ್ವಕಪ್​ನ ದ್ವಿತೀಯ ಸುತ್ತಿನ ಪಂದ್ಯಗಳು ಜೂನ್ 19 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಯುಎಸ್​ಎ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ್ ವಿರುದ್ಧ ಆಡಲಿದೆ. ಈ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿದೆ.

ಸೂಪರ್-8 ಸುತ್ತಿನ ವೇಳಾಪಟ್ಟಿ:

ದಿನಾಂಕ  ಪಂದ್ಯಗಳು ಸ್ಥಳ
ಜೂನ್ 19 ಯುಎಸ್​ಎ vs ಸೌತ್ ಆಫ್ರಿಕಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 19 B1 vs ವೆಸ್ಟ್ ಇಂಡೀಸ್ ಸೇಂಟ್ ಲೂಸಿಯಾ
ಜೂನ್ 20 ಭಾರತ vs ಅಫ್ಘಾನಿಸ್ತಾನ್ ಬಾರ್ಬಡೋಸ್
ಜೂನ್ 20 ಆಸ್ಟ್ರೇಲಿಯಾ vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 21 B1 vs ಸೌತ್ ಆಫ್ರಿಕಾ ಸೇಂಟ್ ಲೂಸಿಯಾ
ಜೂನ್ 21 ಯುಎಸ್​ಎ vs ವೆಸ್ಟ್ ಇಂಡೀಸ್ ಬಾರ್ಬಡೋಸ್
ಜೂನ್ 22 ಭಾರತ vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 22 ಅಫ್ಘಾನಿಸ್ತಾನ್ vs ಆಸ್ಟ್ರೇಲಿಯಾ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 23 ಯುಎಸ್ಎ​ vs B1 ಬಾರ್ಬಡೋಸ್
ಜೂನ್ 23 ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 24 ಆಸ್ಟ್ರೇಲಿಯಾ vs ಭಾರತ ಸೇಂಟ್ ಲೂಸಿಯಾ
ಜೂನ್ 24 ಅಫ್ಘಾನಿಸ್ತಾನ್ vs D2 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್

* ಇಲ್ಲಿ B1 ಎಂಬುದು ಮೊದಲ ಸುತ್ತಿನಲ್ಲಿ ಗ್ರೂಪ್-ಬಿ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡ. ಹಾಗೆಯೇ D2 ಅಂದರೆ ಗ್ರೂಪ್-ಡಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸುವ ತಂಡ.

Published On - 2:04 pm, Sat, 15 June 24

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?