AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಖಾಲಿ ರಸ್ತೆಯಲ್ಲೂ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು ನಿಂತ ವ್ಯಕ್ತಿ

ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿದಿದ್ದರೂ ಗಾಳಿಗೆ ತೂರುವವರೇ ಹೆಚ್ಚು. ಇದೀಗ ಸಿಂಗಾಪುರದ ವ್ಯಕ್ತಿಯೊಬ್ಬರು ಖಾಲಿರಸ್ತೆಯಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಖಾಲಿ ರಸ್ತೆಯಲ್ಲೂ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು ನಿಂತ ವ್ಯಕ್ತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Jun 04, 2026 | 11:26 AM

Share

ಸಿಂಗಾಪುರ, ಜೂನ್ 04: ಸಂಚಾರಿ ನಿಯಮಗಳನ್ನು (Traffic Rules) ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಕೆಲವರು ಹೈಲ್ಮೆಟ್‌ ಧರಿಸದೆ, ಸೀಟ್‌ ಬೆಲ್ಟ್‌ ಧರಿಸುವುದಿಲ್ಲ, ಗ್ರೀನ್ ಸಿಗ್ನಲ್ ಬರುವವರೆಗೂ ಕಾಯುವುದೇ ಇಲ್ಲ ವಾಹನ ಚಲಾಯಿಸಿ ಟ್ರಾಫಿಕ್‌ ರೂಲ್ಸ್‌ಗಳನ್ನು ಬ್ರೇಕ್‌ ಮಾಡ್ತಾರೆ. ಇದಕ್ಕೆ ವ್ಯತಿರಿಕ್ತವಾಗಿದೆ ಈ ದೃಶ್ಯ. ಸಿಂಗಾಪುರದ (Singapore) ಖಾಲಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಟ್ರಾಫಿಕ್ ನಿಮಯ ಪಾಲಿಸಿದ್ದಾರೆ. ತಡರಾತ್ರಿ 1 ಗಂಟೆಯ ವೇಳೆ ವಾಹನಗಳಿಲ್ಲದ ರಸ್ತೆಯಲ್ಲಿ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು, ಆ ಬಳಿಕ ರಸ್ತೆ ದಾಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಟ್ರಾಫಿಕ್ ರೂಲ್ಸ್ ಪಾಲಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃತಿಕಾ ಜೈನ್ (Kritika Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಅಭ್ಯಾಸವೋ, ಶಿಸ್ತೋ ತಿಳಿಯದು ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ರಸ್ತೆಯಲ್ಲಿ ವಾಹನಗಳು ಓಡಾಡದೇ ಖಾಲಿ ಇರುವುದನ್ನು ಗಮನಿಸಬಹುದು. ಹೀಗಿರುವಾಗ ವ್ಯಕ್ತಿಯೊಬ್ಬರು ರೆಡ್ ಸಿಗ್ನಲ್ ಇರುವುದನ್ನು ಗಮನಿಸಿದ್ದಾರೆ. ಆ ಬಳಿಕ ಗ್ರೀನ್ ಸಿಗ್ನಲ್ ಬರುವವರೆಗೆ ಕಾದು ನಿಂತು ಆ ಬಳಿಕ ರಸ್ತೆ ದಾಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​​ನಲ್ಲಿ 3 ಗಂಟೆ ಪರದಾಟ: ನಡೆದೇ ಮನೆಗೆ ಹೋಗಬಹುದಿತ್ತು ಎಂದ ವ್ಯಕ್ತಿ; ಪೋಸ್ಟ್​​ ವೈರಲ್​​

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಇವರೇ ನಿಜವಾದ ಮಾದರಿ ಎಂದಿದ್ದಾರೆ. ಇನ್ನೊಬ್ಬರು, ಸಿಂಗಾಪುರದ ಕಠಿಣ ನಿಯಮಗಳೇ ಇಂತಹ ನಡವಳಿಕೆಗೆ ಕಾರಣ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ತಾವೇನೋ ಸಾಧನೆ ಮಾಡಿದ್ದಂತೆ ಅಂದುಕೊಂಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:13 am, Thu, 4 June 26

Follow Us
CET ಕೋರ್ಸ್​ಗಳಿಗೆ ಕೌನ್ಸೆಲಿಂಗ್ ಬಗ್ಗೆ KEA ನಿರ್ದೇಶಕ ಪ್ರಸನ್ನ ಅಪ್ಡೇಟ್
CET ಕೋರ್ಸ್​ಗಳಿಗೆ ಕೌನ್ಸೆಲಿಂಗ್ ಬಗ್ಗೆ KEA ನಿರ್ದೇಶಕ ಪ್ರಸನ್ನ ಅಪ್ಡೇಟ್
ಪ್ರವಾಸಿಗರೇ ಎಚ್ಚರ!: ಅಪಾಯಕಾರಿ ಸ್ಥಿತಿ ತಲುಪಿರುವ ಅಬ್ಬಿ ಫಾಲ್ಸ್‌ ಗೋಪುರ
ಪ್ರವಾಸಿಗರೇ ಎಚ್ಚರ!: ಅಪಾಯಕಾರಿ ಸ್ಥಿತಿ ತಲುಪಿರುವ ಅಬ್ಬಿ ಫಾಲ್ಸ್‌ ಗೋಪುರ
ಅಕುಲ್ ಬಾಲಾಜಿಯ ಹೊಸ ಮನೆಗೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ: ವಿಡಿಯೋ
ಅಕುಲ್ ಬಾಲಾಜಿಯ ಹೊಸ ಮನೆಗೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ: ವಿಡಿಯೋ
ಭಾರತದಲ್ಲಿ ವಿಶ್ವದ ಅತಿಶಕ್ತಿಶಾಲಿ ಹೈಡ್ರೋಜನ್ ರೈಲು
ಭಾರತದಲ್ಲಿ ವಿಶ್ವದ ಅತಿಶಕ್ತಿಶಾಲಿ ಹೈಡ್ರೋಜನ್ ರೈಲು
ರಾಯಚೂರಲ್ಲಿ ಖತರ್ನಾಕ್ ಬೈಕ್ ಮೆಕ್ಯಾನಿಕ್ ಗ್ಯಾಂಗ್ ಅರೆಸ್ಟ್
ರಾಯಚೂರಲ್ಲಿ ಖತರ್ನಾಕ್ ಬೈಕ್ ಮೆಕ್ಯಾನಿಕ್ ಗ್ಯಾಂಗ್ ಅರೆಸ್ಟ್
ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ ಸಿದ್ಧತೆ ಹೇಗಿದೆ ನೋಡಿ
ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ ಸಿದ್ಧತೆ ಹೇಗಿದೆ ನೋಡಿ
ಬೆಂಗಳೂರು: ಶಾಲೆ ಕೊಠಡಿ ಒಳಗಡೆ ಕುಸಿದುಬಿದ್ದು 5ನೇ ತರಗತಿ ಬಾಲಕ ಸಾವು
ಬೆಂಗಳೂರು: ಶಾಲೆ ಕೊಠಡಿ ಒಳಗಡೆ ಕುಸಿದುಬಿದ್ದು 5ನೇ ತರಗತಿ ಬಾಲಕ ಸಾವು
ಇಷ್ಟಪಟ್ಟು ಕಾರು ತಗೊಂಡೆ, ಇಎಂಐ ಕಟ್ಟೋದು ಕಷ್ಟ ಆಗ್ತಿದೆ: ಮೋಕ್ಷಿತಾ
ಇಷ್ಟಪಟ್ಟು ಕಾರು ತಗೊಂಡೆ, ಇಎಂಐ ಕಟ್ಟೋದು ಕಷ್ಟ ಆಗ್ತಿದೆ: ಮೋಕ್ಷಿತಾ
ಪಾವಗಡ - ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು
ಪಾವಗಡ - ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು