AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಪಾಕ್ ವಿರುದ್ಧ 1 ರನ್​ಗೆ ಔಟಾದರೂ ಇತಿಹಾಸ ಬರೆದ 13 ವರ್ಷದ ವೈಭವ್

India vs Pakistan U19 Asia Cup 2024: ಐಪಿಎಲ್ ಮೆಗಾ ಹರಾಜಿನಲ್ಲಿ 1 ಕೋಟಿ 10 ಲಕ್ಷ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದ ವೈಭವ್, ಐಪಿಎಲ್‌ಗೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಇದೀಗ ಅವರು ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪುರುಷರ ಅಂಡರ್-19 ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದು, ತಮ್ಮ ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ್ದಾರೆ.

IND vs PAK: ಪಾಕ್ ವಿರುದ್ಧ 1 ರನ್​ಗೆ ಔಟಾದರೂ ಇತಿಹಾಸ ಬರೆದ 13 ವರ್ಷದ ವೈಭವ್
ವೈಭವ್ ಸೂರ್ಯವಂಶಿ
ಪೃಥ್ವಿಶಂಕರ
|

Updated on: Nov 30, 2024 | 4:58 PM

Share

ಐಪಿಎಲ್ ಮೆಗಾ ಹರಾಜಿನಲ್ಲಿ ಕೇವಲ 13 ವರ್ಷಕ್ಕೆ ಕೋಟಿ ಸಂಭಾವನೆ ಪಡೆದು ದಾಖಲೆ ಸೃಷ್ಟಿಸಿದ್ದ ಬಿಹಾರದ ವೈಭವ್ ಸೂರ್ಯವಂಶಿ ಇದೀಗ 19 ವರ್ಷದೊಳಗಿನವರ ಏಷ್ಯಾಕಪ್​ನಲ್ಲಿ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ 1 ಕೋಟಿ 10 ಲಕ್ಷ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದ ವೈಭವ್, ಐಪಿಎಲ್‌ಗೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಇದೀಗ ಅವರು ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪುರುಷರ ಅಂಡರ್-19 ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದು, ತಮ್ಮ ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ್ದಾರೆ.

ಸೂರ್ಯವಂಶಿಯ ವಿಶೇಷ ದಾಖಲೆ

ದುಬೈನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡುವ ಅವಕಾಶ ಪಡೆದರು. ಅಂಡರ್-19 ಕ್ರಿಕೆಟ್‌ನಲ್ಲಿ ಇದು ಅವರ ಮೊದಲ ಏಕದಿನ ಪಂದ್ಯವಾಗಿದ್ದು, ಈ ಮೂಲಕ ಅವರು ಭಾರತದ ಪರ ಅಂಡರ್-19 ಏಕದಿನ ಪಂದ್ಯವನ್ನನಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅವರು 13 ವರ್ಷ ಮತ್ತು 248 ದಿನಗಳಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದಾರೆ. ಈ ಹಿಂದೆ ಈ ದಾಖಲೆ ಪಿಯೂಷ್ ಚಾವ್ಲಾ ಹೆಸರಿನಲ್ಲಿತ್ತು. ಪಿಯೂಷ್ ಚಾವ್ಲಾ ಅವರು 14 ವರ್ಷ ಮತ್ತು 311 ದಿನಗಳಲ್ಲಿ ಭಾರತೀಯ ಅಂಡರ್-19 ತಂಡಕ್ಕಾಗಿ ಏಕದಿನ ಪಂದ್ಯವನ್ನು ಆಡಿದ್ದರು.

ಆದರೆ, ಈ ಚೊಚ್ಚಲ ಪಂದ್ಯ ವೈಭವ್ ಸೂರ್ಯವಂಶಿಗೆ ವಿಶೇಷವೇನೂ ಆಗಿರಲಿಲ್ಲ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್, 9 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಂದರೆ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ವೈಭವ್ ಸೂರ್ಯವಂಶಿ ತಮ್ಮ ಅಭಿಮಾನಿಗಳು ಮತ್ತು ಐಪಿಎಲ್ ತಂಡದ ನಿರೀಕ್ಷೆಯನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಶತಕ

ವೈಭವ್ ಸೂರ್ಯವಂಶಿ ಕಳೆದ ತಿಂಗಳಷ್ಟೇ ಆಸ್ಟ್ರೇಲಿಯಾದ ಅಂಡರ್ 19 ತಂಡದ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಅವರು ಆಸ್ಟ್ರೇಲಿಯಾ ವಿರುದ್ಧ 64 ಎಸೆತಗಳನ್ನು ಎದುರಿಸಿ 104 ರನ್ ಗಳಿಸಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 14 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದರೊಂದಿಗೆ ಅಂಡರ್-19 ಟೆಸ್ಟ್‌ನಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಇದಲ್ಲದೆ ಇದೇ ವರ್ಷ, ವೈಭವ್ ಸೂರ್ಯವಂಶಿ ಬಿಹಾರ ಕ್ರಿಕೆಟ್ ಅಸೋಸಿಯೇಷನ್ ​​ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್-19 ಏಕದಿನ ಕ್ರಿಕೆಟ್​ನಲ್ಲಿ ತ್ರಿಶತಕ ಸಿಡಿಸಿದ್ದರು. ಅಂಡರ್-19 ಟೂರ್ನಿಯ ಇತಿಹಾಸದಲ್ಲಿ ಇದು ಮೊದಲ ತ್ರಿಶತಕ ಕೂಡ ಆಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!