Breaking: ಭಾರತದ ಮುಂದೆ ತಲೆಬಾಗಿದ ಪಾಕಿಸ್ತಾನ: ಹೈಬ್ರಿಡ್ ಮಾದರಿಗೆ ಒಪ್ಪಿಗೆ; ಆದರೆ ಒಂದು ಷರತ್ತು..!

Champions Trophy 2025: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದಂತೆ ಹುಟ್ಟಿಕೊಂಡಿದ್ದ ಅಡೆತಡೆಗಳಿಗೆ ಕೊನೆಗೂ ತೆರೆ ಬಿದ್ದಿದೆ. ಕ್ರಿಕೆಟ್​ನ ಬಿಗ್ ಬಾಸ್ ಬಿಸಿಸಿಐ ಮುಂದೆ ತಲೆಬಾಗಿರುವ ಪಾಕಿಸ್ತಾನ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.

Breaking: ಭಾರತದ ಮುಂದೆ ತಲೆಬಾಗಿದ ಪಾಕಿಸ್ತಾನ: ಹೈಬ್ರಿಡ್ ಮಾದರಿಗೆ ಒಪ್ಪಿಗೆ; ಆದರೆ ಒಂದು ಷರತ್ತು..!
ಚಾಂಪಿಯನ್ಸ್ ಟ್ರೋಫಿ
Follow us
ಪೃಥ್ವಿಶಂಕರ
|

Updated on:Nov 30, 2024 | 6:10 PM

ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದಂತೆ ಹುಟ್ಟಿಕೊಂಡಿದ್ದ ಅಡೆತಡೆಗಳಿಗೆ ಕೊನೆಗೂ ಪರಿಹಾರ ಸಿಕ್ಕಿದೆ. ಕ್ರಿಕೆಟ್​ನ ಬಿಗ್ ಬಾಸ್ ಬಿಸಿಸಿಐ ಮುಂದೆ ತಲೆಬಾಗಿರುವ ಪಾಕಿಸ್ತಾನ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಉಭಯ ದೇಶಗಳ ನಡುವಿನ ಈ ಹಗ್ಗಜಗ್ಗಾಟಕ್ಕೆ ಅಂತ್ಯ ಹಾಡುವ ಸಲುವಾಗಿಯೇ ಐಸಿಸಿ, ವರ್ಚುವಲ್ ಸಭೆ ಆಯೋಜಿಸಿತ್ತು. ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಭೆಯನ್ನು ಇವತ್ತಿಗೆ ಮುಂದೂಡಲಾಗಿತ್ತು. ಆ ಪ್ರಕಾರ ಇಂದು ನಡೆದ ಸಭೆಯಲ್ಲಿ ತನ್ನ ನಿಲುವನ್ನು ಬದಲಿಸಲು ಮುಂದಾಗಿರುವ ಪಾಕಿಸ್ತಾನ ಒಂದು ಪ್ರಮುಖ ಷರತ್ತಿನೊಂದಿಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.

ಇಂದು ನಡೆದ ವರ್ಚುವಲ್ ಸಭೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿರುವ ಪ್ರಕಾರ, ಬಿಸಿಸಿಐನ ಹೈಬ್ರಿಡ್ ಮಾದರಿಯ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಪಿಸಿಬಿ, ಐಸಿಸಿಗೆ ತಿಳಿಸಿದೆ. ಹೈಬ್ರಿಡ್ ಮಾಡೆಲ್ ಮಾತ್ರವಲ್ಲದೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಸಹ ದುಬೈನಲ್ಲಿ ಆಡಲು ಪಿಸಿಬಿ ಒಪ್ಪಿಕೊಂಡಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ, ಆದರೆ ಪಾಕಿಸ್ತಾನ ಇದಕ್ಕೆ ಷರತ್ತು ಕೂಡ ಹಾಕಿದೆ. ಮುಂದಿನ 7 ವರ್ಷಗಳವರೆಗೆ ಅಂದರೆ 2031ರವರೆಗೆ ನಡೆಯಲಿರುವ ಪ್ರತಿಯೊಂದು ಐಸಿಸಿ ಪಂದ್ಯಾವಳಿಯಲ್ಲೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಪಿಸಿಬಿ ತನ್ನ ನಿಲುವಿನ ಬಗ್ಗೆ ಐಸಿಸಿಗೆ ಮಾಹಿತಿ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಬಿಸಿಸಿಐಗೆ ಎದುರೇಟು ನೀಡುವ ತಂತ್ರ

ಪಿಸಿಬಿಯ ಈ 7 ವರ್ಷಗಳ ಷರತ್ತಿನ ಹಿಂದೆ ಬಿಸಿಸಿಐಗೆ ಎದುರೇಟು ನೀಡುವ ಸಂಚು ಕೂಡ ಅಡಗಿದೆ. ಹೇಗೆಂದರೆ 2031ರ ವರೆಗೆ ಪ್ರತಿ ವರ್ಷ ಪ್ರಮುಖ ಟೂರ್ನಿ ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಇದರ ಅಡಿಯಲ್ಲಿ 2026 ರಲ್ಲಿ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. 2029ರಲ್ಲಿ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಇದರ ನಂತರ ಭಾರತ ಮತ್ತು ಬಾಂಗ್ಲಾದೇಶ 2031 ರಲ್ಲಿ ನಡೆಯುವ ಏಕದಿನ ವಿಶ್ವಕಪ್​ಗೆ ಆತಿಥ್ಯ ನೀಡಲಿವೆ. ಇದರ ಜೊತೆಗೆ ಮುಂದಿನ ವರ್ಷ ಮಹಿಳೆಯರ ಏಕದಿನ ವಿಶ್ವಕಪ್ ಕೂಡ ಭಾರತದಲ್ಲಿ ನಡೆಯಲ್ಲಿದೆ. ಹೀಗಾಗಿ ಮುಂದಿನ 7 ವರ್ಷಗಳಲ್ಲಿ ನಡೆಯಲ್ಲಿರುವ ಐಸಿಸಿ ಟೂರ್ನಿಗಳಿಗೆ ಭಾರತದ ಆತಿಥ್ಯವೇ ಬಹುಪಾಲಿದೆ. ಆದ್ದರಿಂದಲೇ ಈ ಹೈಬ್ರಿಡ್ ಮಾದರಿಯನ್ನು ಮುಂದಿನ 7 ವರ್ಷಗಳ ಕಾಲ ಎಲ್ಲಾ ಐಸಿಸಿ ಈವೆಂಟ್​ಗಳಲ್ಲಿ ಅಳವಡಿಸಬೇಕು ಎಂಬ ಷರತನ್ನು ಪಾಕಿಸ್ತಾನ ಮುಂದಿಟ್ಟಿದೆ.

ಆದಾಯದ ಪಾಲಲ್ಲೂ ಹೆಚ್ಚಳ ಬೇಕು

ಈ ಷರತ್ತಿನ ಪ್ರಕಾರ, ಭಾರತದ ಆತಿಥ್ಯ ನೀಡುವ ಯಾವುದೇ ಪಂದ್ಯಾವಳಿಗೆ ಪಾಕಿಸ್ತಾನ ತನ್ನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ. ಅದರ ಬದಲಿಗೆ ಪಾಕಿಸ್ತಾನದ ಪಂದ್ಯಗಳನ್ನು ಭಾರತದ ಹೊರಗೆ ಆಯೋಜಿಸಬೇಕಾಗುತ್ತದೆ. ಆದಾಗ್ಯೂ ಈ ಷರತ್ತು ಕೇವಲ ಪುರುಷರ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಮಹಿಳಾ ಕ್ರಿಕೆಟ್ ಮತ್ತು ಜೂನಿಯರ್ ಕ್ರಿಕೆಟ್‌ನಲ್ಲೂ ಇದನ್ನು ಜಾರಿಗೆ ತರಲು ಬೇಡಿಕೆಯಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಪಿಟಿಐ ವರದಿಯ ಪ್ರಕಾರ, ಈ ಷರತ್ತಿನ ಹೊರತಾಗಿ, ವಾರ್ಷಿಕ ಆದಾಯದಲ್ಲಿ ತನ್ನ ಪಾಲನ್ನು ಹೆಚ್ಚಿಸುವ ಷರತ್ತನ್ನೂ ಪಿಸಿಬಿ ಮುಂದಿಟ್ಟಿದೆ. ಐಸಿಸಿಯ ಪ್ರಸ್ತುತ ಆದಾಯ ಮಾದರಿಯ ಅಡಿಯಲ್ಲಿ, ಬಿಸಿಸಿಐ ಗರಿಷ್ಠ ಹಣವನ್ನು ಅಂದರೆ ಶೇ, 39 ಪ್ರತಿಶತ ಹಣವನ್ನು ಪಡೆಯುತ್ತದೆ. ಆದರೆ ಪಾಕ್ ಕ್ರಿಕೆಟ್ ಮಂಡಳಿ ಕೇವಲ 5.75 ಪ್ರತಿಶತ ಹಣವನ್ನು ಪಡೆಯುತ್ತದೆ. ಇದೀಗ ಇದನ್ನೂ ಹೆಚ್ಚಿಸುವಂತೆ ಪಿಸಿಬಿ ಆಗ್ರಹಿಸುತ್ತಿದೆ.

ಪಿಸಿಬಿಯ ಷರತ್ತನ್ನು ಐಸಿಸಿ ಒಪ್ಪಿಕೊಳ್ಳುವುದೇ?

ವಾಸ್ತವವಾಗಿ ಬಿಸಿಸಿಐ ಜೊತೆ ಜಿದ್ದಿಗೆ ಬಿದ್ದಿದ್ದ ಪಾಕಿಸ್ತಾನ, ಹೈಬ್ರಿಡ್ ಮಾದರಿಗೆ ಒಲ್ಲೆ ಎಂದಿತ್ತು. ಹೀಗಾಗಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳುವಂತೆ ಐಸಿಸಿ, ಪಿಸಿಬಿಗೆ ಎಚ್ಚರಿಕೆ ನೀಡಿದ್ದು, ಇಲ್ಲದಿದ್ದರೆ ಹೋಸ್ಟಿಂಗ್ ಹಕ್ಕುಗಳನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಗಳಾಗಿದ್ದವು. ಇದೀಗ ಪಾಕಿಸ್ತಾನ ಹಾಕಿರುವ ಷರತ್ತನ್ನು ಐಸಿಸಿ ಒಪ್ಪಿಕೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್‌ಗೆ ಸಂಬಂಧಿಸಿದಂತೆ ಈ ಷರತ್ತು ಐಸಿಸಿಗೆ ದೊಡ್ಡ ಸಮಸ್ಯೆಯಾಗುವುದಿಲ್ಲ. ಏಕೆಂದರೆ ಭಾರತವನ್ನು ಹೊರತುಪಡಿಸಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡ ಈ ಎರಡು ಪಂದ್ಯಾವಳಿಗಳ ಆತಿಥ್ಯದ ಹಕ್ಕು ಪಡೆದಿವೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಗಳು ಮತ್ತು ಭಾರತ-ಪಾಕಿಸ್ತಾನದ ಪಂದ್ಯಗಳು ಕೂಡ ಈ ದೇಶಗಳಲ್ಲಿ ನಡೆಯಬಹುದು. ಆದರೆ ಸಂಪೂರ್ಣವಾಗಿ ಭಾರತದಲ್ಲಿ ನಡೆಯಲಿರುವ 2029ರ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಮಾತ್ರ ಈ ಷರತ್ತಿಗೆ ಐಸಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:40 pm, Sat, 30 November 24

ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ
ನಿಖಿಲ್ ಉಪ ಚುನಾವಣೆ ಸೋಲನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಿದ್ದಾರೆ
ನಿಖಿಲ್ ಉಪ ಚುನಾವಣೆ ಸೋಲನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಿದ್ದಾರೆ
ಬಿಗ್​ಬಾಸ್ ರಾಜಕುಟುಂಬದ ಕತೆ ವಿಶ್ಲೇಷಣೆಗಿಳಿದ ಸುದೀಪ್
ಬಿಗ್​ಬಾಸ್ ರಾಜಕುಟುಂಬದ ಕತೆ ವಿಶ್ಲೇಷಣೆಗಿಳಿದ ಸುದೀಪ್
ಉಡುಪಿಯ ವಂಡ್ಸೆ ಸ್ವಚ್ಛತೆಗೆ ಮಾದರಿ ಗ್ರಾಮ: ಬಯೋಕಾನ್ ಮುಖ್ಯಸ್ಥೆ ಪ್ರಶಂಸೆ
ಉಡುಪಿಯ ವಂಡ್ಸೆ ಸ್ವಚ್ಛತೆಗೆ ಮಾದರಿ ಗ್ರಾಮ: ಬಯೋಕಾನ್ ಮುಖ್ಯಸ್ಥೆ ಪ್ರಶಂಸೆ
ರಾಮನಗರದ ಜನ ನೀಡಿದ ಪ್ರೀತಿಗೆ ಅನುಗುಣವಾಗಿ ಕೆಲಸ ಮಾಡಿದ್ದೇವೆ: ನಿಖಿಲ್
ರಾಮನಗರದ ಜನ ನೀಡಿದ ಪ್ರೀತಿಗೆ ಅನುಗುಣವಾಗಿ ಕೆಲಸ ಮಾಡಿದ್ದೇವೆ: ನಿಖಿಲ್
‘ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡ್ರು’; ಇದೇನಾ ಝೈದ್ ಖಾನ್ ಅಸಲಿ ಮುಖ?   
‘ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡ್ರು’; ಇದೇನಾ ಝೈದ್ ಖಾನ್ ಅಸಲಿ ಮುಖ?