
2025 ರ ಐಸಿಸಿ ಮಹಿಳಾ ವಿಶ್ವಕಪ್ (T20 World Cup 2026) ಮುಕ್ತಾಯದೊಂದಿಗೆ, ಮುಂದಿನ ಪಂದ್ಯಾವಳಿಗೆ ಸಿದ್ಧತೆಗಳು ಪ್ರಾರಂಭವಾಗಿವೆ. ವಾಸ್ತವವಾಗಿ 2026 ರ ಪುರುಷರ ಟಿ20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ (India, Sri Lanka) ನಡೆಯುತ್ತಿದೆ. ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಈ ಪಂದ್ಯಾವಳಿಗೆ ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಭಾರತದ ಐದು ನಗರಗಳನ್ನು ಈ ವಿಶ್ವಕಪ್‌ಗೆ ಸ್ಥಳಗಳಾಗಿ ಗೊತ್ತುಪಡಿಸಲಾಗಿದೆ. ಇತ್ತ ಶ್ರೀಲಂಕಾದಲ್ಲಿ ಮೂರು ಕ್ರೀಡಾಂಗಣಗಳನ್ನು ಅಂತಿಮಗೊಳಿಸಲಾಗಿದೆ. ಇದಲ್ಲದೆ, ಸೆಮಿಫೈನಲ್ ಪಂದ್ಯಗಳಿಗೆ ಸ್ಥಳಗಳನ್ನು ಸಹ ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಭಾರತದಲ್ಲಿ ಎರಡು ಮತ್ತು ಶ್ರೀಲಂಕಾದಲ್ಲಿ ಒಂದು ಸ್ಥಳವನ್ನು ಗುರುತಿಸಲಾಗಿದೆ.
20 ತಂಡಗಳ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವನ್ನು ಆಯ್ಕೆ ಮಾಡಲಾಗಿದೆ ಎಂದು ಕ್ರಿಕ್‌ಬಜ್ ವರದಿ ಬಹಿರಂಗಪಡಿಸಿದೆ. ಹಾಗೆಯೇ ಮತ್ತೊಂದು ಸೆಮಿಫೈನಲ್‌ಗಾಗಿ ಕೊಲಂಬೊದ ಕ್ರೀಡಾಂಗಣವನ್ನು ಸಹ ಆಯ್ಕೆ ಮಾಡಲಾಗಿದೆ. ಇದಕ್ಕೆ ಕಾರಣ ಪಾಕಿಸ್ತಾನವು ತನ್ನ ಎಲ್ಲಾ ಟೂರ್ನಮೆಂಟ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಶ್ರೀಲಂಕಾ ಅಥವಾ ಪಾಕಿಸ್ತಾನ ಸೆಮಿಫೈನಲ್ ತಲುಪಿದರೆ, ಈ ಎರಡೂ ತಂಡಗಳು ತಮ್ಮ ಪಂದ್ಯಗಳನ್ನು ಕೊಲಂಬೊದಲ್ಲಿ ಆಡುತ್ತವೆ ಎಂದು ಐಸಿಸಿ ಮತ್ತು ಬಿಸಿಸಿಐ ಒಪ್ಪಂದಕ್ಕೆ ಬಂದಿವೆ.
ಆದಾಗ್ಯೂ, ಈ ಎರಡು ತಂಡಗಳಲ್ಲಿ ಯಾವ ತಂಡವು ಸೆಮಿಫೈನಲ್ ತಲುಪದಿದ್ದರೆ, ಎರಡೂ ಸೆಮಿಫೈನಲ್ ಪಂದ್ಯಗಳು ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ನಡೆಯುತ್ತವೆ ಎಂಬುದು ಸ್ಪಷ್ಟವಾಗಿದೆ. ಫೈನಲ್‌ಗೆ ಸಂಬಂಧಿಸಿದಂತೆ, ಅದರ ಸ್ಥಳವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಪ್ರಶಸ್ತಿ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಪಾಕಿಸ್ತಾನ ತಂಡ ಫೈನಲ್ ತಲುಪಿದರೆ, ಈ ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲಾಗುತ್ತದೆ.
6,084 ದಿನಗಳ ಕಾಯುವಿಕೆ ಅಂತ್ಯ; ಹರ್ಮನ್ ತೋಳಿನ ಮೇಲೆ ಮೂಡಿದ ವಿಶ್ವಕಪ್ ಟ್ರೋಫಿ ಟ್ಯಾಟೂ
ಸ್ಥಳಗಳ ವಿಷಯದಲ್ಲಿ, ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದ ದೆಹಲಿ, ಕೋಲ್ಕತ್ತಾ, ಮುಂಬೈ, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ನಡೆಸಲಾಗುವುದು. ಶ್ರೀಲಂಕಾದಲ್ಲಿ, ಕೊಲಂಬೊದಲ್ಲಿ ಎರಡು ಮತ್ತು ಕ್ಯಾಂಡಿಯಲ್ಲಿ ಒಂದು ಕ್ರೀಡಾಂಗಣವನ್ನು ಈ ವಿಶ್ವಕಪ್‌ಗಾಗಿ ಆಯ್ಕೆ ಮಾಡಲಾಗಿದೆ. ಸ್ವರೂಪಕ್ಕೆ ಸಂಬಂಧಿಸಿದಂತೆ, ಪಂದ್ಯಾವಳಿಯನ್ನು 2024 ರಂತೆಯೇ ನಡೆಸಲಾಗುವುದು. ಎಲ್ಲಾ 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಸುತ್ತಿಗೆ ಮುನ್ನಡೆಯುತ್ತವೆ ಮತ್ತು ಅಲ್ಲಿಂದ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Sun, 9 November 25