AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s World Cup 2025: ಅತಿ ಹೆಚ್ಚು ವೀಕ್ಷಣೆ; ಇತಿಹಾಸ ಸೃಷ್ಟಿಸಿದ ಮಹಿಳಾ ವಿಶ್ವಕಪ್

Women's World Cup 2025: 2025 ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿ ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ಜೊತೆಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ 450 ಮಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆ ನಿರ್ಮಿಸಿದೆ. ಫೈನಲ್ ಪಂದ್ಯವೊಂದೇ 21 ಕೋಟಿ ವೀಕ್ಷಣೆ ಕಂಡಿದೆ. ಆಟಗಾರ್ತಿಯರಿಗೆ ಭಾರಿ ಬಹುಮಾನ ಘೋಷಿಸಲಾಗಿದ್ದು, ಮುಂದಿನ WPL 2026 ಕೂಡ ಆರ್ಥಿಕವಾಗಿ ಲಾಭ ತರಲಿದೆ.

ಪೃಥ್ವಿಶಂಕರ
|

Updated on: Nov 07, 2025 | 9:09 PM

Share
2025 ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದ್ದು ಮಾತ್ರವಲ್ಲದೆ, ವೀಕ್ಷಣೆಯ ವಿಚಾರದಲ್ಲೂ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಮಾಹಿತಿಯ ಪ್ರಕಾರ, ಭಾರತದಲ್ಲಿ ನಡೆದ ಮಹಿಳಾ ವಿಶ್ವಕಪ್ ಆವೃತ್ತಿಯು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 450 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

1 / 5
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಬಗ್ಗೆ ಹೇಳುವುದಾದರೆ, ಈ ಹೈವೋಲ್ಟೇಜ್ ಕದನ ಸುಮಾರು 21 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು 2024 ರ ಪುರುಷರ ಟಿ20 ವಿಶ್ವಕಪ್‌ನ ಫೈನಲ್‌ಗೆ ಬಹುತೇಕ ಸಮಾನವಾಗಿದೆ.

2 / 5
ಟಿವಿ ದತ್ತಾಂಶದ ಪ್ರಕಾರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯ 92 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು 2024 ರ ಟಿ20 ವಿಶ್ವಕಪ್ ಫೈನಲ್ ಮತ್ತು 2023 ರ ವಿಶ್ವಕಪ್ ಫೈನಲ್‌ಗೆ ಸಮಾನವಾಗಿದೆ.

3 / 5
ಮೊಟ್ಟ ಮೊದಲ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ಆಟಗಾರ್ತಿಯರಿಗೆ ದೇಶದಾದ್ಯಂತ ಅಪಾರ ಪ್ರೀತಿ ಸಿಗುತ್ತಿದೆ. ಿಇಡೀ ತಂಡದ ಮೇಲೆ ಕೋಟ್ಯಂತರ ರೂಪಾಯಿಗಳ ಬಹುಮಾನದ ಸುರಿಮಳೆಯಾಗುತ್ತಿದೆ. ಸ್ಮೃತಿ ಮಂಧಾನ, ರಾಧಾ ಯಾದವ್ ಮತ್ತು ಜೆಮಿಮಾ ರೊಡ್ರಿಗಸ್​ ರಾಜ್ಯಸರ್ಕಾರದಿಂದ ತಲಾ 2.25 ಕೋಟಿ ರೂ. ಬಹುಮಾನ ಪಡೆದಿದ್ದಾರೆ. ಶ್ರೀಚರಣಿ ಆಂಧ್ರಪ್ರದೇಶ ಸರ್ಕಾರದಿಂದ ನಿವೇಶನದ ಜೊತೆಗೆ 2.5 ಕೋಟಿ ರೂ. ಪಡೆದಿದ್ದಾರೆ.

4 / 5
ಮಹಿಳಾ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಯಶಸ್ಸಿನ ನಂತರ, ಮಹಿಳಾ ಪ್ರೀಮಿಯರ್ ಲೀಗ್ 2026 ಕೂಡ ಗಮನಾರ್ಹ ವೀಕ್ಷಕರ ಮೈಲಿಗಲ್ಲನ್ನು ಸಾಧಿಸಬಹುದು. ಇದು ಸಂಭವಿಸಿದಲ್ಲಿ, ಇದು ಬಿಸಿಸಿಐಗೆ ಗಮನಾರ್ಹ ಆರ್ಥಿಕ ಪ್ರಯೋಜನಗಳನ್ನು ತರುವುದು ಖಚಿತ.

5 / 5