- Kannada News Photo gallery Cricket photos India's 2025 Women's World Cup Win Shatters Viewership Records!
Women’s World Cup 2025: ಅತಿ ಹೆಚ್ಚು ವೀಕ್ಷಣೆ; ಇತಿಹಾಸ ಸೃಷ್ಟಿಸಿದ ಮಹಿಳಾ ವಿಶ್ವಕಪ್
Women's World Cup 2025: 2025 ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿ ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ಜೊತೆಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ 450 ಮಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆ ನಿರ್ಮಿಸಿದೆ. ಫೈನಲ್ ಪಂದ್ಯವೊಂದೇ 21 ಕೋಟಿ ವೀಕ್ಷಣೆ ಕಂಡಿದೆ. ಆಟಗಾರ್ತಿಯರಿಗೆ ಭಾರಿ ಬಹುಮಾನ ಘೋಷಿಸಲಾಗಿದ್ದು, ಮುಂದಿನ WPL 2026 ಕೂಡ ಆರ್ಥಿಕವಾಗಿ ಲಾಭ ತರಲಿದೆ.
Updated on: Nov 07, 2025 | 9:09 PM

2025 ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದ್ದು ಮಾತ್ರವಲ್ಲದೆ, ವೀಕ್ಷಣೆಯ ವಿಚಾರದಲ್ಲೂ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಮಾಹಿತಿಯ ಪ್ರಕಾರ, ಭಾರತದಲ್ಲಿ ನಡೆದ ಮಹಿಳಾ ವಿಶ್ವಕಪ್ ಆವೃತ್ತಿಯು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 450 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಬಗ್ಗೆ ಹೇಳುವುದಾದರೆ, ಈ ಹೈವೋಲ್ಟೇಜ್ ಕದನ ಸುಮಾರು 21 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು 2024 ರ ಪುರುಷರ ಟಿ20 ವಿಶ್ವಕಪ್‌ನ ಫೈನಲ್‌ಗೆ ಬಹುತೇಕ ಸಮಾನವಾಗಿದೆ.

ಟಿವಿ ದತ್ತಾಂಶದ ಪ್ರಕಾರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯ 92 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು 2024 ರ ಟಿ20 ವಿಶ್ವಕಪ್ ಫೈನಲ್ ಮತ್ತು 2023 ರ ವಿಶ್ವಕಪ್ ಫೈನಲ್‌ಗೆ ಸಮಾನವಾಗಿದೆ.

ಮೊಟ್ಟ ಮೊದಲ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ಆಟಗಾರ್ತಿಯರಿಗೆ ದೇಶದಾದ್ಯಂತ ಅಪಾರ ಪ್ರೀತಿ ಸಿಗುತ್ತಿದೆ. ಿಇಡೀ ತಂಡದ ಮೇಲೆ ಕೋಟ್ಯಂತರ ರೂಪಾಯಿಗಳ ಬಹುಮಾನದ ಸುರಿಮಳೆಯಾಗುತ್ತಿದೆ. ಸ್ಮೃತಿ ಮಂಧಾನ, ರಾಧಾ ಯಾದವ್ ಮತ್ತು ಜೆಮಿಮಾ ರೊಡ್ರಿಗಸ್ ರಾಜ್ಯಸರ್ಕಾರದಿಂದ ತಲಾ 2.25 ಕೋಟಿ ರೂ. ಬಹುಮಾನ ಪಡೆದಿದ್ದಾರೆ. ಶ್ರೀಚರಣಿ ಆಂಧ್ರಪ್ರದೇಶ ಸರ್ಕಾರದಿಂದ ನಿವೇಶನದ ಜೊತೆಗೆ 2.5 ಕೋಟಿ ರೂ. ಪಡೆದಿದ್ದಾರೆ.

ಮಹಿಳಾ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಯಶಸ್ಸಿನ ನಂತರ, ಮಹಿಳಾ ಪ್ರೀಮಿಯರ್ ಲೀಗ್ 2026 ಕೂಡ ಗಮನಾರ್ಹ ವೀಕ್ಷಕರ ಮೈಲಿಗಲ್ಲನ್ನು ಸಾಧಿಸಬಹುದು. ಇದು ಸಂಭವಿಸಿದಲ್ಲಿ, ಇದು ಬಿಸಿಸಿಐಗೆ ಗಮನಾರ್ಹ ಆರ್ಥಿಕ ಪ್ರಯೋಜನಗಳನ್ನು ತರುವುದು ಖಚಿತ.




