IPL: ಕನ್ನಡ ಸೇರಿ 7 ಭಾಷೆಗಳಲ್ಲಿ ಆಕಾಶ್ ಚೋಪ್ರಾ ಐಪಿಎಲ್ ಕಾಮೆಂಟರಿ: ಕ್ಲೀನ್ ಬೋಲ್ಡ್ ಆದ ಅಭಿಮಾನಿಗಳು!

| Updated By: ಪೃಥ್ವಿಶಂಕರ

Updated on: Oct 08, 2021 | 5:24 PM

IPL 2021: ಆಸಕ್ತಿಕರ ವಿಷಯವೆಂದರೆ ಚೋಪ್ರಾ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವಲ್ಲ, ಕನ್ನಡ, ತೆಲುಗು, ಬಂಗಾಳಿ, ಮರಾಠಿ ಮತ್ತು ತಮಿಳಿನಲ್ಲಿಯೂ ಅಭಿಮಾನಿಗಳೊಂದಿಗೆ ಸಂಪರ್ಕ ಮತ್ತು ಸಂವಹನ ನಡೆಸುತ್ತಿದ್ದಾರೆ

IPL: ಕನ್ನಡ ಸೇರಿ 7 ಭಾಷೆಗಳಲ್ಲಿ ಆಕಾಶ್ ಚೋಪ್ರಾ ಐಪಿಎಲ್ ಕಾಮೆಂಟರಿ: ಕ್ಲೀನ್ ಬೋಲ್ಡ್ ಆದ ಅಭಿಮಾನಿಗಳು!
ಆಕಾಶ್ ಚೋಪ್ರಾ ಪ್ರಕಾರ, ಎರಡು ಫ್ರಾಂಚೈಸಿಗಳು ಈ ಆಟಗಾರರನ್ನು ಮೊದಲೇ ಆಯ್ಕೆ ಮಾಡಿಕೊಳ್ಳಲಿದ್ದು, ಹೀಗಾಗಿ ಈ ಆರು ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅದರಂತೆ ಆಕಾಶ ಚೋಪ್ರಾ ಹೆಸರಿಸಿದ 6 ಆಟಗಾರರ ಪಟ್ಟಿ ಹೀಗಿದೆ...
Follow us on

ಮಾತನಾಡುವ ಕಲೆ ಭಾರತದ ಕ್ರಿಕೆಟಿಗರಿಗೆ ಬಹುಶಃ ವರದಾನವಾಗಿ ಬಂದಿದೆ ಎನ್ನಿಸುತ್ತದೆ. ಇಲ್ಲಿ ನಾವು ಮಾತನಾಡುತ್ತಿರುವುದು ತೀಕ್ಷ್ಣ ಹಾಗು ಹಾಸ್ಯಮಯವಾಗಿ ಮಾತನಾಡುವ ವೀರೇಂದ್ರ ಸೆಹ್ವಾಗ್ ಅವರ ಬಗ್ಗೆಯಲ್ಲ, ಮಾತಿನಲ್ಲೇ ಸಿಕ್ಸರ್ ಬಾರಿಸುವ ಮತ್ತೊಬ್ಬ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರ ಬಗ್ಗೆ. ಈ ಬಾರಿಯ ಐಪಿಎಲ್ 2021 ಪ್ರಾರಂಭದಿಂದಲೂ ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಚೋಪ್ರಾ ಅವರ ಆಕಾಶವಾಣಿವು ಚಾಲ್ತಿಯಲ್ಲಿದ್ದು, ಆರಂಭದಿಂದಲೂ ಕ್ರಿಕೆಟ್ ಆಕ್ಷನ್ ಕುರಿತು ಸಮೀಕ್ಷೆಗಳ ಮೂಲಕ ತಮ್ಮ ಆಕ್ರಮಣಕಾರಿ ಮುನ್ಸೂಚನೆಗಳನ್ನು ನೀಡುತ್ತಿದ್ದಾರೆ.

ಆಸಕ್ತಿಕರ ವಿಷಯವೆಂದರೆ ಚೋಪ್ರಾ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವಲ್ಲ, ಕನ್ನಡ, ತೆಲುಗು, ಬಂಗಾಳಿ, ಮರಾಠಿ ಮತ್ತು ತಮಿಳಿನಲ್ಲಿಯೂ ಅಭಿಮಾನಿಗಳೊಂದಿಗೆ ಸಂಪರ್ಕ ಮತ್ತು ಸಂವಹನ ನಡೆಸುತ್ತಿದ್ದಾರೆ!. ಕೂ ನಲ್ಲಿನ ಬಹುಭಾಷಾ ಆಯ್ಕೆಯನ್ನು ಬಳಸಿ, ಅವರ ಮಾತೃಭಾಷೆ ಮೂಲಕ ಎಲ್ಲ ಜನರನ್ನು ತಲುಪುತ್ತಿದ್ದಾರೆ. ಹೀಗಾಗಿ ಆಕಾಶ್ ಚೋಪ್ರಾ ಅವರು ಭಾರತದಾದ್ಯಂತ ತಮ್ಮ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇತ್ತೀಚೆಗೆ, ಕೋಲ್ಕತ್ತಾ ಪ್ಲೇಆಫ್‌ಗೆ ಅರ್ಹತೆ ಪಡೆಯಬಹುದೇ? ಎಂಬುದರ ಬಗ್ಗೆ ಚೋಪ್ರಾ ಸಮೀಕ್ಷೆ ನಡೆಸಿದರು. ಇದು ಏಳು ಭಾಷೆಗಳಲ್ಲಿ ವೈರಲ್ ಆಗಿತ್ತು ಮತ್ತು ತಮ್ಮ ಸ್ಥಳೀಯ ಭಾಷೆಯಲ್ಲಿ ಉತ್ತರಿಸಲು ಆಯ್ಕೆ ಮಾಡಿದ್ದರಿಂದ ಆ ಪೋಸ್ಟ್ ಭಾರೀ ಪ್ರತಿಕ್ರಿಯೆಯನ್ನು ಪಡೆಯಿತು.

ವೇದಿಕೆಯ ಬಹು-ಭಾಷೆಯ ವೈಶಿಷ್ಟ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ-ಒಂದು ಪೋಸ್ಟ್ ಅನ್ನು ನೈಜ ಸಮಯದಲ್ಲಿ ಅನೇಕ ಭಾರತೀಯ ಭಾಷೆಗಳಿಗೆ ಸ್ವಯಂಚಾಲಿತವಾಗಿ ಅನುವಾದಿಸುವ ಮೂಲಕ, @cricketaakash ಹ್ಯಾಂಡಲ್ ಮೂಲಕ ಕೂ ಮಾಡಿದ ಚೋಪ್ರಾ ಗಮನಾರ್ಹ ಆಕರ್ಷಣೆಯನ್ನು ಪಡೆಯುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಈಗ ಕಡಿಮೆ ಅವಧಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ.

ಕ್ಲಾಸಿಕಲ್ ಓಪನರ್ ಆಗಿದ್ದ ಚೋಪ್ರಾ, 2003-04ರ ಅವಧಿಯಲ್ಲಿ ಭಾರತವನ್ನು ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದರು ಮತ್ತು ವೀರೇಂದ್ರ ಸೆಹ್ವಾಗ್ ಜೊತೆಯಲ್ಲಿ ಹಲವಾರು ಬಲವಾದ ಮೊದಲ ವಿಕೆಟ್ ಪಾಲುದಾರಿಕೆಗಳಲ್ಲಿ ಕಾಣಿಸಿಕೊಂಡರು.