VIDEO: ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿದ ಆರೋನ್ ಫಿಂಚ್
Aaron Finch Record: ಈ ಪಂದ್ಯದ 9ನೇ ಓವರ್ನಲ್ಲಿ ಆರೋನ್ ಫಿಂಚ್ 5 ಭರ್ಜರಿ ಸಿಕ್ಸ್ ಸಿಡಿಸಿ ಅಬ್ಬರಿಸಿದ್ದರು. ಕ್ರಿಸ್ಟೋಫರ್ ಬಾರ್ನ್ವೆಲ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ 1 ರನ್ ಓಡಿದರು. ಆ ಬಳಿಕ ಆರೋನ್ ಫಿಂಚ್ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ಗಳನ್ನು ಸಿಡಿಸಿದರು.
ಅಮೆರಿಕದಲ್ಲಿ ನಡೆಯುತ್ತಿರುವ ಯುಎಸ್ ಮಾಸ್ಟರ್ಸ್ ಟಿ10 ಲೀಗ್ನಲ್ಲಿ ಆರೋನ್ ಫಿಂಚ್ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಫ್ಲೋರಿಡಾದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜೆರ್ಸಿ ಲೆಜೆಂಡ್ಸ್ ಹಾಗೂ ಕ್ಯಾಲಿಫೋರ್ನಿಯಾ ನೈಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ನ್ಯೂಜೆರ್ಸಿ ತಂಡದ ನಾಯಕ ಗೌತಮ್ ಗಂಭೀರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕ್ಯಾಲಿಫೋರ್ನಿಯಾ ನೈಟ್ಸ್ ಪರ ಜಾಕ್ಸ್ ಕಾಲಿಸ್ ಹಾಗೂ ಆರೋನ್ ಫಿಂಚ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ 7 ರನ್ಗಳಿಸಿ ಕಾಲಿಸ್ ನಿರ್ಗಮಿಸಿದರು.
ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಫಿಂಚ್ ಕೇವಲ 31 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 75 ರನ್ ಚಚ್ಚಿದರು. ಪರಿಣಾಮ ನಿಗದಿತ 10 ಓವರ್ಗಳಲ್ಲಿ ಕ್ಯಾಲಿಫೋರ್ನಿಯಾ ನೈಟ್ಸ್ ತಂಡ 3 ವಿಕೆಟ್ ನಷ್ಟಕ್ಕೆ 116 ರನ್ ಕಲೆಹಾಕಿತು.
ಒಂದೇ ಓವರ್ನಲ್ಲಿ 5 ಸಿಕ್ಸ್:
ಈ ಪಂದ್ಯದ 9ನೇ ಓವರ್ನಲ್ಲಿ ಆರೋನ್ ಫಿಂಚ್ 5 ಭರ್ಜರಿ ಸಿಕ್ಸ್ ಸಿಡಿಸಿ ಅಬ್ಬರಿಸಿದ್ದರು. ಕ್ರಿಸ್ಟೋಫರ್ ಬಾರ್ನ್ವೆಲ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ 1 ರನ್ ಓಡಿದರು. ಆ ಬಳಿಕ ಆರೋನ್ ಫಿಂಚ್ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ಗಳನ್ನು ಸಿಡಿಸಿದರು. ಇದರೊಂದಿಗೆ ಯುಎಸ್ ಮಾಸ್ಟರ್ಸ್ ಟಿ10 ಲೀಗ್ನಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಫಿಂಚ್ ಪಾಲಾಯಿತು.
Why we call him the Aaronator 👊
Take a bow @AaronFinch5 6️⃣6️⃣6️⃣6️⃣6️⃣#USMastersT10 #NJTvCK #SunshineStarsSixes#CricketsFastestFormat #T10League pic.twitter.com/Wm0ht9CvBO
— T10 Global (@T10League) August 21, 2023
ಗೆದ್ದು ಬೀಗಿದ ನ್ಯೂಜೆರ್ಸಿ ಲೆಜೆಂಡ್ಸ್:
ಕ್ಯಾಲಿಫೋರ್ನಿಯಾ ನೈಟ್ಸ್ ನೀಡಿದ 117 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ನ್ಯೂಜೆರ್ಸಿ ಲೆಜೆಂಡ್ಸ್ ತಂಡಕ್ಕೆ ಜೆಸ್ಸಿ ರೈಡರ್ (20) ಹಾಗೂ ನಮನ್ ಓಜಾ (25) ಉತ್ತಮ ಆರಂಭ ಒದಗಿಸಿದ್ದರು.
ಆ ಬಳಿಕ ಬಂದ ಯೂಸುಫ್ ಪಠಾಣ್ ಕೇವಲ 11 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 35 ರನ್ ಚಚ್ಚಿದರು. ಈ ಮೂಲಕ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಅಂತಿಮವಾಗಿ 9.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 117 ರನ್ಗಳಿಸಿ ನ್ಯೂಜೆರ್ಸಿ ಲೆಜೆಂಡ್ಸ್ ತಂಡವು 6 ವಿಕೆಟ್ಗಳ ಜಯ ಸಾಧಿಸಿತು.
ನ್ಯೂಜೆರ್ಸಿ ಲೆಜೆಂಡ್ಸ್ ಪ್ಲೇಯಿಂಗ್ 11: ಗೌತಮ್ ಗಂಭೀರ್ (ನಾಯಕ) , ನಮನ್ ಓಜಾ (ವಿಕೆಟ್ ಕೀಪರ್) , ಯೂಸುಫ್ ಪಠಾಣ್ , ಅಲ್ಬಿ ಮೊರ್ಕೆಲ್ , ಕ್ರಿಸ್ಟೋಫರ್ ಬಾರ್ನ್ವೆಲ್ , ಬಿಪುಲ್ ಶರ್ಮಾ , ಪೀಟರ್ ಟ್ರೆಗೊ , ಡ್ಯಾನ್ಜಾ ಹಯಾತ್ , ಲಿಯಾಮ್ ಪ್ಲಂಕೆಟ್ , ಆರ್ ಪಿ ಸಿಂಗ್ , ಮಾಂಟಿ ಪನೇಸರ್.
ಇದನ್ನೂ ಓದಿ: Aaron Finch: ವಿಶ್ವ ದಾಖಲೆಯೊಂದಿಗೆ ವಿದಾಯ ಹೇಳಿದ ಆರೋನ್ ಫಿಂಚ್
ಕ್ಯಾಲಿಫೋರ್ನಿಯಾ ನೈಟ್ಸ್ ಪ್ಲೇಯಿಂಗ್ 11: ಆರೋನ್ ಫಿಂಚ್ (ನಾಯಕ) , ಜಾಕ್ಸ್ ಕಾಲಿಸ್ , ಮಿಲಿಂದ್ ಕುಮಾರ್ , ಮೊಹಮ್ಮದ್ ಕೈಫ್ , ರಿಕಾರ್ಡೊ ಪೊವೆಲ್ , ಇರ್ಫಾನ್ ಪಠಾಣ್ , ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್) , ಪವನ್ ಸುಯಲ್ , ಪೀಟರ್ ಸಿಡ್ಲ್ , ಆಶ್ಲೇ ನರ್ಸ್ , ಕ್ರಿಶ್ಮಾರ್ ಸಂಟೋಕಿ.