IND vs IRE 3rd T20 Live Score: ಭಾರತ-ಐರ್ಲೆಂಡ್ 3ನೇ ಟಿ20 ಪಂದ್ಯ ರದ್ದು
India vs Ireland T20 Cricket Match Livescore Updates: ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 2 ರನ್ಗಳಿಂದ ಜಯ ಸಾಧಿಸಿತ್ತು. ಇನ್ನು 2ನೇ ಪಂದ್ಯದಲ್ಲಿ 33 ರನ್ಗಳಿಂದ ಗೆಲುವು ದಾಖಲಿಸಿ ಸರಣಿ ವಶಪಡಿಸಿಕೊಂಡಿತು. ಇದೀಗ ಮೂರನೇ ಪಂದ್ಯ ರದ್ದಾದ ಕಾರಣ 2-0 ಅಂತರದಿಂದ ಟೀಮ್ ಇಂಡಿಯಾ ಸರಣಿ ಗೆದ್ದುಕೊಂಡಿದೆ.
IND vs IRE 3rd T20: ಡಬ್ಲಿನ್ ಮಲಾಹೈಡ್ನಲ್ಲಿ ನಡೆಯಬೇಕಿದ್ದ ಭಾರತ-ಐರ್ಲೆಂಡ್ ನಡುವಣ ಮೂರನೇ ಟಿ20 ಪಂದ್ಯ ಮಳೆಯ ಕಾರಣ ರದ್ದಾಗಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 2 ರನ್ಗಳಿಂದ ಜಯ ಸಾಧಿಸಿತ್ತು. ಇನ್ನು 2ನೇ ಪಂದ್ಯದಲ್ಲಿ 33 ರನ್ಗಳಿಂದ ಗೆಲುವು ದಾಖಲಿಸಿ ಸರಣಿ ವಶಪಡಿಸಿಕೊಂಡಿತು. ಇದೀಗ ಮೂರನೇ ಪಂದ್ಯ ರದ್ದಾದ ಕಾರಣ 2-0 ಅಂತರದಿಂದ ಟೀಮ್ ಇಂಡಿಯಾ ಸರಣಿ ಗೆದ್ದುಕೊಂಡಿದೆ.
ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕ್ಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್, ಫಿಯಾನ್ ಹ್ಯಾಂಡ್, ಥಿಯೋ ವ್ಯಾನ್ ವೋರ್ಕಾಮ್, ಗೆರೆತ್ ಡೆಲಾನಿ, ರಾಸ್ ಅಡೈರ್.
ಭಾರತ ತಂಡ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ(ನಾಯಕ), ರವಿ ಬಿಷ್ಣೋಯ್, ಅವೇಶ್ ಖಾನ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್ , ಶಹಬಾಝ್ ಅಹಮದ್.
LIVE NEWS & UPDATES
-
ಭಾರತ-ಐರ್ಲೆಂಡ್ 3ನೇ ಟಿ20 ಪಂದ್ಯ ರದ್ದು
ಮಳೆಯ ಕಾರಣ ಭಾರತ-ಐರ್ಲೆಂಡ್ ನಡುವಣ 3ನೇ ಟಿ20 ಪಂದ್ಯವನ್ನು ರದ್ದುಗೊಳಿಸಲಾಗಿದೆ. 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದ್ದ ಭಾರತ ತಂಡವು ಸರಣಿ ಗೆದ್ದುಕೊಂಡಿದೆ.
-
ಸ್ಥಗಿತಗೊಂಡ ಮಳೆ
ಡಬ್ಲಿನ್ನಲ್ಲಿ ಮಳೆ ನಿಂತಿದ್ದು, ಇದೀಗ ಮೈದಾನದಲ್ಲಿ ಹಾಕಲಾದ ಟರ್ಪಲ್ನ್ನು ಸರಿಸಲಾಗುತ್ತಿದೆ. ಅಲ್ಲದೆ ಅಂಪೈರ್ ಪಿಚ್ ಪರಿಶೀಲಿಸಿ ಪಂದ್ಯ ಆಯೋಜಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
-
ನಿರಂತರ ಮಳೆ
ಡಬ್ಲಿನ್ನಲ್ಲಿ ಮಳೆ ಮುಂದುವರೆದಿದ್ದು, ಪಂದ್ಯ ಆಯೋಜನೆ ಸಾಧ್ಯನಾ ಎಂದು ಪರಿಶೀಲಿಸಲು ಅಂಪೈರ್ ನಿರ್ಧರಿಸಿದ್ದಾರೆ. 20 ನಿಮಿಷಗಳ ಬಳಿಕ ಮೈದಾನದ ಮೇಲ್ಮೈ ಪರಿಶೀಲು ಅಂಪೈರ್ಗಳು ಮುಂದಾಗಲಿದ್ದಾರೆ ಎಂದು ಐರ್ಲೆಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ.
ಕಟ್ ಆಫ್ ಟೈಮ್ 9.15
ಭಾರತೀಯ ಕಾಲಮಾನ ರಾತ್ರಿ 9.25 ರೊಳಗೆ ಪಂದ್ಯ ಶುರುವಾಗದಿದ್ದರೆ ಓವರ್ ಕಡಿತ ಪ್ರಾರಂಭವಾಗಲಿದೆ. ಅಂದರೆ 9.15 ರ ಬಳಿಕ ಪ್ರತಿ 5 ನಿಮಿಷಗಳಿಗೆ ಇಂತಿಷ್ಟು ಓವರ್ಗಳನ್ನು ಕಡಿಮೆಗೊಳಿಸಲಾಗುತ್ತದೆ. ಹೀಗಾಗಿ ಇನ್ನು ಪಂದ್ಯ ಶುರುವಾದರೂ ಕಡಿಮೆ ಓವರ್ನ ಮ್ಯಾಚ್ ನಡೆಯಲಿದೆ.
ಪಂದ್ಯಕ್ಕೆ ಮಳೆ ಅಡ್ಡಿ
ಭಾರತ-ಐರ್ಲೆಂಡ್ ನಡುವಣ ಮೂರನೇ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಭಾರತೀಯ ಕಾಲಮಾನ 7.30 ರಿಂದ ಶುರುವಾಗಬೇಕಿದ್ದ ಪಂದ್ಯವು ಮಳೆಯ ಕಾರಣ ವಿಳಂಬವಾಗಿದೆ. ಇನ್ನು ಮಳೆ ನಿಂತ ಬಳಿಕ ಪಂದ್ಯ ಆರಂಭಿಸಿದರೆ ಓವರ್ ಕಡಿತ ಮಾಡುವ ಸಾಧ್ಯತೆಯಿದೆ.
ಮುಂದುವರೆದ ತುಂತುರು ಮಳೆ
🚨 UPDATE 🚨
The toss in the third T20I between Ireland and India has been delayed due to rain.
Here's hoping it clears up soon 🤞#IREvIND 🏏☘️ #BackingGreen @joy_ebike pic.twitter.com/iFUle60xAq
— Cricket Ireland (@cricketireland) August 23, 2023
ಭಾರತ-ಐರ್ಲೆಂಡ್ 3ನೇ ಟಿ20: ಟಾಸ್ ಪ್ರಕ್ರಿಯೆ ವಿಳಂಬ
ಡಬ್ಲಿನ್ ಭಾಗದಲ್ಲಿ ಮಳೆಯಾಗುತ್ತಿದ್ದು, ಹೀಗಾಗಿ ಭಾರತ-ಐರ್ಲೆಂಡ್ ನಡುವಣ ಪಂದ್ಯದ ಟಾಸ್ ಪ್ರಕ್ರಿಯೆ ವಿಳಂಬವಾಗಿದೆ.
ಚಂದ್ರಯಾನ-3ರ ಯಶಸ್ಸನ್ನು ಸಂಭ್ರಮಿಸಿದ ಟೀಮ್ ಇಂಡಿಯಾ
ಚಂದ್ರಯಾನ ಮಿಷನ್ ಚಂದ್ರನ ಮೇಲೆ ಕಾಲಿಟ್ಟ ಸುದ್ದಿಯನ್ನು ನೋಡಿ ಸಂಭ್ರಮಿಸಿದ ಭಾರತ ತಂಡ
🎥 Witnessing History from Dublin! 🙌
The moment India's Vikram Lander touched down successfully on the Moon's South Pole 🚀#Chandrayaan3 | @isro | #TeamIndia https://t.co/uIA29Yls51 pic.twitter.com/OxgR1uK5uN
— BCCI (@BCCI) August 23, 2023
ಮಲಾಹೈಡ್ ಮೈದಾನಕ್ಕೆ ಸ್ವಾಗತ
👋: WELCOME
We’re at @MalahideCC for this 3rd @joy_ebike Men’s T20I:
Ireland Men 🆚 India Men
The scheduled start time is 3pm (Ireland time).
WATCH: TNT Sports (ROI/UK) SCORE: https://t.co/nImk9IyGSm@prozeal_infra #BackingGreen ☘️🏏 pic.twitter.com/gPQkozV5jG
— Cricket Ireland (@cricketireland) August 23, 2023
ಭಾರತ-ಐರ್ಲೆಂಡ್ 3ನೇ ಟಿ20 ಪಂದ್ಯ
ಇಂಡಿಯಾ-ಐರ್ಲೆಂಡ್ ನಡುವಣ 3ನೇ ಟಿ20 ಪಂದ್ಯ ಡಬ್ಲಿನ್ನ ಮಲಾಹೈಡ್ ಮೈದಾನದಲ್ಲಿ ನಡೆಯಲಿದೆ.
ರಾತ್ರಿ 7.30 ರಿಂದ ಪಂದ್ಯ ಶುರುವಾಗಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
Published On - Aug 23,2023 5:36 PM