AB de Villiers IPL 2021 RCB Team Player: ಐಪಿಎಲ್​ನಲ್ಲಿ ಆರ್​ಸಿಬಿ ಆಪತ್ಬಾಂಧವ ಎಬಿ ಡಿವಿಲಿಯರ್ಸ್ ಸಾಧನೆ ಏನು ಗೊತ್ತಾ?

AB de Villiers profile: ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರವಾಗಿ ಆಡಿದ್ದರು. ಆದರೆ ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು.

AB de Villiers IPL 2021 RCB Team Player: ಐಪಿಎಲ್​ನಲ್ಲಿ ಆರ್​ಸಿಬಿ ಆಪತ್ಬಾಂಧವ ಎಬಿ ಡಿವಿಲಿಯರ್ಸ್  ಸಾಧನೆ ಏನು ಗೊತ್ತಾ?
ಎಬಿ ಡಿವಿಲಿಯರ್ಸ್
Follow us
ಪೃಥ್ವಿಶಂಕರ
|

Updated on:Apr 09, 2021 | 4:27 PM

ಜಂಟಲ್​ಮ್ಯಾನ್ ಗೇಮ್ ಕ್ರಿಕೆಟ್​ನಲ್ಲಿ 360 ಡಿಗ್ರಿ ಬ್ಯಾಟ್ಸ್‌ಮನ್ ಎಂದೂ ಕರೆಯಲ್ಪಡುವ ಎಬಿ ಡಿವಿಲಿಯರ್ಸ್ (AB de Villiers) , ತನ್ನ ವಿಭಿನ್ನ ಶೈಲಿಯ ಬ್ಯಾಟಿಂಗ್​ನಿಂದಾಗಿ ಪ್ರಪಂಚದಾದ್ಯಂತ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಒಮ್ಮೆ ಡಿವಿಲಿಯರ್ಸ್​ ಕ್ರೀಸ್​ ಕಚ್ಚಿ ನಿಂತರೆಂದರೆ ಎದುರಾಳಿ ತಂಡದ ಬೌಲರ್​ ಕಥೆ ಅಲ್ಲಿಗೆ ಮುಗಿಯಿತು ಎಂಬುದು ಸತ್ಯವಾದ ಮಾತು. ಆರ್​ಸಿಬಿ (Royal Challengers Bangalore) ತಂಡ ಸಂಕಷ್ಟದಲ್ಲಿದ್ದಾಗಲೆಲ್ಲ ಏಕಾಂಗಿ ನಿಂತು ಹೋರಾಡಿ ತಂಡವನ್ನು ಗೆಲುವಿನ ದಡ ಸೇರಿಸುವ ಈ ಸವ್ಯಸಾಚಿ, ಆರ್​ಸಿಬಿಯ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ.

2015 ರ ಐಪಿಎಲ್​ ಆವೃತ್ತಿಯಲ್ಲಿ ಡಿವಿಲಿಯರ್ಸ್,​ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಭರ್ಜರಿ ಶತಕ ಮತ್ತು 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ಶತಕ ಬಾರಿಸಿ ಮಿಂಚಿದ್ದಾರೆ. ವಿರಾಟ್ ಕೊಹ್ಲಿ ಅವರೊಂದಿಗೆ ಎಬಿ ಆರ್ಸಿಬಿಗೆ ಐದು ಬಾರಿ 100+ ರನ್​ಗಳ ಪಾಲುದಾರಿಕೆಯನ್ನು ಮತ್ತು ಎರಡು ಬಾರಿ 200+ ರನ್​ಗಳ ಜೊತೆಯಾಟವನ್ನು ಆಡಿದ್ದಾರೆ.

ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರವಾಗಿ ಆಡಿದ್ದರು. ಆದರೆ ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಇವರು ಬಲಗೈ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದು ಕೆಲವೊಮ್ಮೆ ಅಗ್ರಕ್ರಮಾಂಕದಲ್ಲೂ ಆಡುತ್ತಾರೆ. ಮೊದಮೊದಲು ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಎಬಿಡಿ ಕೆಲವೊಮ್ಮೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ.

ಕೊನೆಯ 10 ಓವರ್‌ಗಳಲ್ಲಿ ಎಬಿ ಅಪಾಯಕಾರಿ ಐಪಿಎಲ್ 2021 ರಲ್ಲಿ ಎಬಿ ಡಿವಿಲಿಯರ್ಸ್ ಅವರ ಅಬ್ಬರವನ್ನು ಕಣ್ತುಂಬಿಸಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ 10 ನೇ ಓವರ್ ನಂತರ ಬ್ಯಾಟಿಂಗ್ ಮಾಡಲು ಬಂದಾಗ ಡಿವಿಲಿಯರ್ಸ್ ಆಟವನ್ನು ನೋಡುವುದೆ ಚೆಂದ. ಕೊನೆಯ 10 ಓವರ್​ಗಳಲ್ಲಿ ಎದುರಾಳಿ ತಂಡದ ಬೌಲರ್​ಗಳನ್ನು ಮನಸೋಇಚ್ಚೆ ದಂಡಿಸುವ ಡಿವಿಲಿಯರ್ಸ್ ರನ್​ ಮಳೆಯನ್ನೇ ಹರಿಸುತ್ತಾರೆ.

ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಆವೃತ್ತಿಯ ಅಂಕಿ ಅಂಶವನ್ನೇ ಗಮನಿಸಿದರೆ, ಕಳೆದ ಆವೃತ್ತಿಯಲ್ಲಿ 10 ಓವರ್​ಗಳ ನಂತರ ಒಟ್ಟು 9 ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೆ ಬಂದಿರುವ ಡಿವಿಲಿಯರ್ಸ್ 187. 42 ಸ್ಟ್ರೈಕ್​ ರೆಟ್​ನಲ್ಲಿ ಬರೋಬ್ಬರಿ 298 ರನ್​ ಗಳಿಸಿದ್ದಾರೆ. ಇದರಲ್ಲಿ ಅಮೋಘ 4 ಅರ್ಧಶತಕ ಸಹ ಸೇರಿವೆ. ಕೊನೆಯ 10 ಓವರ್​ನಲ್ಲಿ 59.6 ರ ಸರಾಸರಿಯಲ್ಲಿ ರನ್​ ಗಳಿಸಿರುವ ಡಿವಿಲಿಯರ್ಸ್, ಎದುರಾಳಿಗಳಿಗೆ ತುಂಬಾ ಅಪಾಯಕಾರಿಯಾಗುತ್ತಾರೆ.

ಹಾಗೆಯೇ ಮೊದಲ 10 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಬಂದ ಸಮಯದಲ್ಲಿ ಡಿವಿಲಿಯರ್ಸ್, 5 ಇನ್ನಿಂಗ್ಸ್‌ಗಳಲ್ಲಿ ಕೇವಲ 156 ರನ್ ಗಳಿಸಿದ್ದಾರೆ. 122.83 ಸ್ಟ್ರೈಕ್ ರೇಟ್‌ನೊಂದಿಗೆ 1 ಅರ್ಧಶತಕವನ್ನು ಗಳಿಸಿರುವ ಡಿವಿಲಿಯರ್ಸ್ ಅವರ ಸರಾಸರಿ 31.2 ಆಗಿದೆ. ಹೀಗಾಗಿ ಡಿವಿಲಿಯರ್ಸ್ ಕೊನೆಯ 10 ಓವರ್​ಗಳಲ್ಲೇ ಬ್ಯಾಟಿಂಗ್​ಗೆ ಬರುವುದು ಸೂಕ್ತವೆನಿಸುತ್ತದೆ.

ಐಪಿಎಲ್​ನಲ್ಲಿ ಡಿವಿಲಿಯರ್ಸ್​

ವರ್ಷ ಪಂದ್ಯ ರನ್ ಅತ್ಯಧಿಕ ರನ್ ಸರಾಸರಿ ಶತಕ ಅರ್ಧ ಶತಕ
2020 15 454 73* 45.4 0 5
2019 13 442 82* 44.2 0 5
2018 12 480 90* 53.33 0 6
2017 9 216 89* 27 0 1
2016 16 687 129* 52.84 1 6
2015 16 513 133* 46.63 1 2
2014 14 395 89* 35.9 0 3
2013 14 360 64 36 0 2
2012 16 319 64* 39.87 0 3
2011 16 312 65 34.66 0 2
2010 7 111 45 15.85 0 0
2009 15 465 105* 51.66 1 3
2008 6 95 26* 19 0 0

ಅಂತರರಾಷ್ಟ್ರೀಯ ಪಂದ್ಯದಲ್ಲಿ ಡಿವಿಲಿಯರ್ಸ್​ ಪ್ರದರ್ಶನ

ಆವೃತ್ತಿ ಪಂದ್ಯ ರನ್ ಅತ್ಯಧಿಕ ರನ್ ಸರಾಸರಿ ಶತಕ ದ್ವಿ ಶತಕ ಅರ್ಧ ಶತಕ
ಟೆಸ್ಟ್ 114 8765 278 50.66 22 2 25
ಏಕದಿನ 228 9577 176 53.5 25 0 62
T20 78 1672 79 26.12 0 0 28

Published On - 3:46 pm, Fri, 9 April 21

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್