T20 World Cup 2022: ಮತ್ತೊಂದು ಪಂದ್ಯ ರದ್ದು: ಉಲ್ಟಾ ಆಗುತ್ತಿರುವ ಗ್ರೂಪ್​-1 ತಂಡಗಳ ಲೆಕ್ಕಾಚಾರ

| Updated By: ಝಾಹಿರ್ ಯೂಸುಫ್

Updated on: Oct 26, 2022 | 5:05 PM

Afghanistan - New Zealand: ಒಂದೆಡೆ ಗ್ರೂಪ್​-2 ತಂಡಗಳ ನಡುವಿನ ಪೈಪೋಟಿಯು ಕುತೂಹಲಕಾರಿಯಾಗಿದೆ. ಏಕೆಂದರೆ ಎಲ್ಲಾ ತಂಡಗಳು ಎರೆಡೆರಡು ಪಂದ್ಯವಾಡಿದ್ದು, ಇದಾಗ್ಯೂ ಯಾವುದೇ ತಂಡ 4 ಅಂಕಗಳಿಸಿಲ್ಲ.

T20 World Cup 2022: ಮತ್ತೊಂದು ಪಂದ್ಯ ರದ್ದು: ಉಲ್ಟಾ ಆಗುತ್ತಿರುವ  ಗ್ರೂಪ್​-1 ತಂಡಗಳ ಲೆಕ್ಕಾಚಾರ
T20 World Cup 2022
Follow us on

T20 World Cup 2022: ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ಬುಧವಾರ ನಡೆಯಬೇಕಿದ್ದ ನ್ಯೂಜಿಲೆಂಡ್-ಅಫ್ಘಾನಿಸ್ತಾನ್ (New Zealand vs Afghanistan) ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಈ ಬಾರಿಯ ವಿಶ್ವಕಪ್​ನಲ್ಲಿ 2ನೇ ಪಂದ್ಯ ಕೂಡ ಕ್ಯಾನ್ಸಲ್​ ಆದಂತಾಗಿದೆ. ಇದಕ್ಕೂ ಮುನ್ನ ಸೌತ್ ಆಫ್ರಿಕಾ ಹಾಗೂ ಜಿಂಬಾಬ್ವೆ ನಡುವಣ ಪಂದ್ಯವು ರದ್ದಾಗಿತ್ತು. ಇದೀಗ ಅಫ್ಘಾನಿಸ್ತಾನ್ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲೂ ಫಲಿತಾಂಶ ಹೊರಬಂದಿಲ್ಲ.

ಅಂದರೆ ಪಂದ್ಯದ ಆರಂಭಕ್ಕೂ ಮುನ್ನ ಶುರುವಾದ ಮಳೆಯಿಂದಾಗಿ ಉಭಯ ತಂಡಗಳಿಗೂ ಮೈದಾನಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ 5 ಓವರ್​ಗಳ ಪಂದ್ಯ ನಡೆಸಲು ಮ್ಯಾಚ್ ರೆಫ್ರಿ ಕಾದು ನೋಡಿದ್ದರು. ಆದರೆ ಸತತ ಮಳೆಯಿಂದಾಗಿ ಪಂದ್ಯವನ್ನು ಆಯೋಜಿಸುವುದು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಿ, ಉಭಯ ತಂಡಗಳಿಗೂ ತಲಾ ಒಂದೊಂದು ಪಾಯಿಂಟ್ ನೀಡಲಾಗಿದೆ.

ಗ್ರೂಪ್-2 ತಂಡಗಳ ಲೆಕ್ಕಚಾರಗಳು ಉಲ್ಟಾ-ಪಲ್ಟಾ:

ಇದನ್ನೂ ಓದಿ
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
IND vs PAK: ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ
India vs Pakistan: ಹೊಸ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ಒಂದೆಡೆ ಗ್ರೂಪ್​-2 ತಂಡಗಳ ನಡುವಿನ ಪೈಪೋಟಿಯು ಕುತೂಹಲಕಾರಿಯಾಗಿದೆ. ಏಕೆಂದರೆ ಎಲ್ಲಾ ತಂಡಗಳು ಎರೆಡೆರಡು ಪಂದ್ಯವಾಡಿದ್ದು, ಇದಾಗ್ಯೂ ಯಾವುದೇ ತಂಡ 4 ಅಂಕಗಳಿಸಿಲ್ಲ. ಅಂದರೆ ನ್ಯೂಜಿಲೆಂಡ್ ತಂಡವನ್ನು ಹೊರತುಪಡಿಸಿ ಎಲ್ಲಾ ತಂಡಗಳು ಒಂದೊಂದು ಪಂದ್ಯವನ್ನು ಸೋತಿದೆ.

ಇನ್ನು ಎಲ್ಲಾ ತಂಡಗಳಿಗೆ 3 ಪಂದ್ಯಗಳು ಮಾತ್ರ ಉಳಿದಿವೆ. ಅತ್ತ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ ಹೊಂದಿರುವುದು ಕೇವಲ 3 ಪಾಯಿಂಟ್ ಮಾತ್ರ. ಹೀಗಾಗಿ ಮುಂದಿನ ಮೂರು ಪಂದ್ಯಗಳೂ ಕೂಡ ಎಲ್ಲಾ ತಂಡಗಳಿಗೂ ತುಂಬಾ ಮಹತ್ವದಾಗಿದೆ.

ಏಕೆಂದರೆ ಮುಂದಿನ ಮೂರು ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುವ ತಂಡವು ಸೆಮಿಫೈನಲ್​ಗೇರಲಿದೆ ಎನ್ನಲಾಗುವುದಿಲ್ಲ. ಬದಲಾಗಿ ಗ್ರೂಪ್-2 ನಲ್ಲಿ ಸೆಮಿಫೈನಲ್​ ಪ್ರವೇಶಕ್ಕೆ ನೆಟ್​ ರನ್​ ರೇಟ್ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ಹೀಗಾಗಿ ಗ್ರೂಪ್- 1 ರ ಮುಂದಿನ ಪಂದ್ಯಗಳಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಸೇಫ್ ಝೋನ್​ನಲ್ಲಿ ನ್ಯೂಜಿಲೆಂಡ್ :

ಪ್ರಸ್ತುತ ಗ್ರೂಪ್-2 ನ ಪಾಯಿಂಟ್ ಟೇಬಲ್​ನಲ್ಲಿ 2 ಪಂದ್ಯಗಳಲ್ಲಿ 3 ಅಂಕಗಳಿಸಿರುವ ನ್ಯೂಜಿಲೆಂಡ್ ತಂಡವು ಸೇಫ್ ಝೋನ್​ನಲ್ಲಿದೆ ಎನ್ನಬಹುದು. ಏಕೆಂದರೆ ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದರೆ ಒಟ್ಟು 9 ಪಾಯಿಂಟ್ ಕಲೆಹಾಕಿ ನೇರವಾಗಿ ಸೆಮಿಫೈನಲ್​ಗೆ ಎಂಟ್ರಿ ಕೊಡಬಹುದು. ಇತ್ತ ಉಳಿದ ತಂಡಗಳು ಮುಂದಿನ 3 ಪಂದ್ಯಗಳನ್ನು ಗೆದ್ದರೂ ಒಟ್ಟು 8 ಪಾಯಿಂಟ್ ಆಗಲಿದೆ. ಹೀಗಾಗಿ ಮುಂದಿನ ಎಲ್ಲಾ ಪಂದ್ಯ ಗೆದ್ದು ನೆಟ್​ ರನ್​ ರೇಟ್​ ಸಹಾಯವಿಲ್ಲದೆ ನ್ಯೂಜಿಲೆಂಡ್ ತಂಡ ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ.

ಗ್ರೂಪ್- 1 ತಂಡಗಳು ಮತ್ತು ಪಾಯಿಂಟ್ಸ್​

  1. ನ್ಯೂಜಿಲೆಂಡ್- 2 ಪಂದ್ಯ (3 ಅಂಕ)
  2. ಶ್ರೀಲಂಕಾ – 2 ಪಂದ್ಯ (2 ಅಂಕ)
  3. ಇಂಗ್ಲೆಂಡ್- 2 ಪಂದ್ಯ (2 ಅಂಕ)
  4. ಐರ್ಲೆಂಡ್- 2 ಪಂದ್ಯ (2 ಅಂಕ)
  5. ಆಸ್ಟ್ರೇಲಿಯಾ- 2 ಪಂದ್ಯ (2 ಅಂಕ)
  6. ಅಫ್ಘಾನಿಸ್ತಾನ್- 2 ಪಂದ್ಯ (1 ಅಂಕ)

 

 

 

Published On - 5:04 pm, Wed, 26 October 22