Afghanistan Vs Sri Lanka, Match 1 Highlight: ಬ್ಯಾಟಿಂಗ್- ಬೌಲಿಂಗ್ನಲ್ಲಿ ಮಿಂಚಿದ ಅಫ್ಘಾನ್ ತಂಡಕ್ಕೆ ಸುಲಭ ಜಯ
Afghanistan Vs Sri Lanka, Match 1 Highlight: ಶ್ರೀಲಂಕಾವನ್ನು ಕೇವಲ 11 ಓವರ್‌ಗಳಲ್ಲಿ 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ ಪಂದ್ಯಾವಳಿಯನ್ನು ಅದ್ಭುತವಾಗಿ ಪ್ರಾರಂಭಿಸಿತು.
ಏಷ್ಯಾಕಪ್ 2022 ರ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಶ್ರೀಲಂಕಾದ ಕಳಪೆ ಪ್ರದರ್ಶನ ಜಗಜ್ಜಾಹೀರಾಯಿತು. ಶ್ರೀಲಂಕಾವನ್ನು ಕೇವಲ 11 ಓವರ್‌ಗಳಲ್ಲಿ 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ ಪಂದ್ಯಾವಳಿಯನ್ನು ಅದ್ಭುತವಾಗಿ ಪ್ರಾರಂಭಿಸಿತು. ಅದೇ ಸಮಯದಲ್ಲಿ ಇತರ ತಂಡಗಳಿಗೆ ಎಚ್ಚರಿಕೆ ನೀಡಿತು. ದುಬೈ ಸ್ಟೇಡಿಯಂನಲ್ಲಿ ಶನಿವಾರ ಆಗಸ್ಟ್ 27 ರಂದು ನಡೆದ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ, ಅಫ್ಘಾನಿಸ್ತಾನ, ಶ್ರೀಲಂಕಾವನ್ನು ಬಲಿಷ್ಠ ಬೌಲಿಂಗ್ನಿಂದ ಕೇವಲ 105 ರನ್‌ಗಳಿಗೆ ಕಟ್ಟಿಹಾಕಿತು. ಇದಾದ ಬಳಿಕ ಅಫ್ಘಾನಿಸ್ತಾನ ಪವರ್‌ಪ್ಲೇನಲ್ಲಿಯೇ ಅಬ್ಬರಿಸುವ ಬ್ಯಾಟಿಂಗ್‌ನೊಂದಿಗೆ ಶ್ರೀಲಂಕಾವನ್ನು ಪಂದ್ಯದಿಂದ ಹೊರದಬ್ಬಿತು.
LIVE NEWS & UPDATES
-
ಅಫ್ಘಾನಿಸ್ತಾನಕ್ಕೆ ಜಯ
ಏಷ್ಯಾಕಪ್ 2022 ರ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಶ್ರೀಲಂಕಾದ ಕಳಪೆ ಪ್ರದರ್ಶನ ಜಗಜ್ಜಾಹೀರಾಯಿತು. ಶ್ರೀಲಂಕಾವನ್ನು ಕೇವಲ 11 ಓವರ್‌ಗಳಲ್ಲಿ 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ ಪಂದ್ಯಾವಳಿಯನ್ನು ಅದ್ಭುತವಾಗಿ ಪ್ರಾರಂಭಿಸಿತು.
-
ಕೊನೆಗೂ ವಿಕೆಟ್
ಗುರ್ಬಾಜ್ ಕೇವಲ 18 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ವನಿಂದು ಹಸರಂಗ, ರಹಮಾನುಲ್ಲಾ ಗುರ್ಬಾಜ್ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. 7 ಓವರ್‌ಗಳ ನಂತರ ಸ್ಕೋರ್, AFG: 86/1
-
ಎರಡು ಓವರ್‌ಗಳಲ್ಲಿ 42 ರನ್
6 L1 4 4 2 4 – ಅಫ್ಘಾನಿಸ್ತಾನ ಬೆಂಕಿ ಬ್ಯಾಟಿಂಗ್ ಮಾಡುತ್ತಿದೆ. ರಹಮಾನುಲ್ಲಾ ಗುರ್ಬಾಜ್ ಕ್ಲೀನ್ ಸ್ಟ್ರೈಕಿಂಗ್ ಸಾಮರ್ಥ್ಯ ಇಲ್ಲಿಯವರೆಗೆ ಎಲ್ಲರನ್ನು ಹುಚ್ಚೆದು ಕುಣಿಯುವಂತೆ ಮಾಡಿದೆ.
ಓವರ್‌ನಲ್ಲಿ 21
6 6 4 0 1 4 – ಹಜರತುಲ್ಲಾ ಝಜೈ ಮತ್ತು ಗುರ್ಬಾಜ್ ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ ಮೈದಾನದಲ್ಲಿ ಅಬ್ಬರ ಸೃಷ್ಟಿಸಿದ್ದಾರೆ. ಲಂಕಾ ಪ್ರಮುಖ ಸ್ಪಿನ್ನರ್ ತೀಕ್ಷಣ ಎರಡು ಓವರ್‌ಗಳಲ್ಲಿ ಬರೋಬ್ಬರಿ 25 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. 5 ಓವರ್‌ಗಳ ನಂತರ ಸ್ಕೋರ್, AFG: 62/0
ಫೋರ್ಗಳ ಸುರಿಮಳೆ
ಗುರ್ಬಾಜ್ ಅವರು ಮತೀಶ ಪತಿರಾನ ವಿರುದ್ಧ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಜೊತೆಗೆ ಅವರು ಆಟವನ್ನು ಬೇಗ ಮುಗಿಸುವ ಆತುರದಲ್ಲಿದ್ದಾರೆ. 3 ಓವರ್‌ಗಳ ನಂತರ AFG 31/0
ಫೋರ್
ಹಜರತುಲ್ಲಾ ಝಜೈ ಮತ್ತು ಗುರ್ಬಾಜ್ ಆರಂಭಿಕರಾಗಿದ್ದು, ಶ್ರೀಲಂಕಾ ಪರ ದಿಲ್ಶನ್ ಮಧುಶಂಕ ಮೊದಲ ಓವರ್ ಬೌಲ್ ಮಾಡಿದರು. ಮೊದಲ ಓವರ್‌ನಲ್ಲಿ ಹಜರತುಲ್ಲಾ ಝಜೈ ಬೌಂಡರಿ ಬಾರಿಸಿದರು. 1 ಓವರ್‌ನ ನಂತರ AFG 11/0.
ಅಫ್ಘಾನಿಸ್ತಾನ್ ಗೆಲುವಿಗೆ 106 ರನ್ ಬೇಕು
ಫಜಲ್ಹಕ್ ಫಾರೂಕಿ ಅಂತಿಮ ಓವರ್ ಅನ್ನು ಬೌಲ್ ಮಾಡಿದರು. ಈ ಓವರ್‌ನಲ್ಲಿ ಕರುಣಾರತ್ನೆ ಒಂದು ಬೌಂಡರಿ ಹೊಡೆದರು. ಬಳಿಕ ಮತ್ತೊಂದು ಬಿಗ್ ಶಾಟ್ ಯತ್ನದಲ್ಲಿ ಕರುಣಾರತ್ನೆ ಕ್ಲೀನ್ ಬೌಲ್ಡ್ ಆದರು. ಅಂತಿಮವಾಗಿ ಶ್ರೀಲಂಕಾ 105 ರನ್‌ಗಳಿಗೆ ಆಲೌಟ್ ಆಯಿತು. 19.4 ಓವರ್‌ಗಳಲ್ಲಿ SL 105/10.
ಸಿಕ್ಸ್
ಕರುಣಾರತ್ನೆ ಅಂತಿಮವಾಗಿ ಸಿಕ್ಸರ್ ಬಾರಿಸಿದ್ದಾರೆ. ಮುಜೀಬ್ ಎಸೆತವನ್ನು ಮಿಡ್-ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. 17 ಓವರ್‌ಗಳ ನಂತರ SL 88/9.
ವಿಕೆಟ್!
ನಬಿ, ಮತೀಶ ಪತಿರಾನ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಬಿ ಎಸೆತಕ್ಕೆ ಬಿಗ್ ಶಾಟ್ ಆಡುವ ಯತ್ನದಲ್ಲಿ ಮತೀಶ, ನಜಿಬುಲ್ಲಾ ಅವರಿಗೆ ಕ್ಯಾಚ್ ನೀಡಿದರು. ಇಂದು ಅಫ್ಘಾನ್ ಬೌಲರ್‌ಗಳಿಂದ ಶ್ರೇಷ್ಠ ಬೌಲಿಂಗ್ ಕಂಡುಬರುತ್ತಿದೆ. 15 ಓವರ್‌ಗಳ ನಂತರ SL 75/9.
ರನ್ ಔಟ್
ಎರಡು ಎಸೆತಗಳು, ಎರಡು ರನೌಟ್. ಶ್ರೀಲಂಕಾ ಬ್ಯಾಟರ್‌ಗಳಿಂದ ಕಳಪೆ ಸಂವಹನದಿಂದಾಗಿ ವಿಕೆಟ್‌ಗಳ ಮಳೆ ಆರಂಭವಾಗಿದೆ. ಅಫ್ಘಾನಿಸ್ತಾನ ಈಗ ಪ್ರಾಬಲ್ಯ ಸಾಧಿಸಿದ್ದು, 13 ಓವರ್‌ಗಳ ನಂತರ SL 70/8.
ಕ್ಯಾಪ್ಟನ್ ವಿಕೆಟ್ ಪಡೆದ ಕ್ಯಾಪ್ಟನ್
ನಬಿ ವಿಕೆಟ್‌ನೊಂದಿಗೆ ಓವರ್ ಪ್ರಾರಂಭಿಸಿದರು. ಅವರು ಶನಕಾ ಅವರ ವಿಕೆಟ್ ಪಡೆದರು, ಗುರ್ಬಾಜ್ ಸುಲಭ ಕ್ಯಾಚ್ ಹಿಡಿದರು. ಶ್ರೀಲಂಕಾ ತಂಡ ತೀವ್ರ ಸಂಕಷ್ಟದಲ್ಲಿದ್ದು, 11 ಓವರ್‌ಗಳ ನಂತರ SL 66/6.
ಹಸರಂಗ ಔಟ್
ಮುಜೀಬ್ ಓವರ್‌ನಲ್ಲಿ ಹಸರಂಗ ವಿಕೆಟ್ ಕಬಳಿಸಿದ್ದಾರೆ. ಹಸರಂಗ ಬಿಗ್ ಶಾಟ್ ಆಡುವ ಯತ್ನದಲ್ಲಿ ಲಾಂಗ್ ಆಫ್ನಲ್ಲಿ ನಿಂತಿದ್ದ ನಬಿಗೆ ಸುಲಭವಾದ ಕ್ಯಾಚ್ ನೀಡಿದರು, ಶ್ರೀಲಂಕಾಕ್ಕೆ ಮತ್ತೊಂದು ಹೊಡೆತ. ಬಳಿಕ ರಾಜಪಕ್ಸೆ ಇದೇ ಓವರ್‌ನಲ್ಲಿ ಬೌಂಡರಿ ಬಾರಿಸಿದರು. 10 ಓವರ್‌ಗಳ ನಂತರ SL 64/5.
ವಿಕೆಟ್
ರಿವರ್ಸ್ವಿಪ್ ಆಡುವ ಯತ್ನದಲ್ಲಿ ಗುಣತಿಲಕ ಡೀಪ್ ಸ್ಕ್ವೇರ್ನಲ್ಲಿ ನಿಂತಿದ್ದ ಕರೀಂ ಜನತ್ಗೆ ಕ್ಯಾಚ್ ನೀಡಿದರು. 8 ಓವರ್‌ಗಳ ನಂತರ SL 54/4
ಪವರ್‌ಪ್ಲೇ ಮುಗಿದಿದೆ
ಅಫ್ಘಾನಿಸ್ತಾನದ ಪವರ್‌ಪ್ಲೇಯ ಕೊನೆಯ ಓವರ್ ಅನ್ನು ಅಜ್ಮತುಲ್ಲಾ ಬೌಲ್ ಮಾಡಿದರು. ಈ ಓವರ್‌ನಲ್ಲಿ ಶ್ರೀಲಂಕಾ ಮೂರು ಬೌಂಡರಿಗಳನ್ನು ಗಳಿಸಿತು. ಇಬ್ಬರೂ ಬ್ಯಾಟಿಂಗ್‌ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದು, 6 ಓವರ್‌ಗಳ ನಂತರ SL 41/3.
ಸಿಕ್ಸರ್
ಆರಂಭಿಕ ಆಘಾತದ ಬಳಿಕ ರಾಜಪಕ್ಸೆ, ನವೀನ್-ಉಲ್-ಹಕ್ ವಿರುದ್ಧ ಸಿಕ್ಸರ್ ಬಾರಿಸಿದರು. ನಿಧಾನಗತಿಯ ಎಸೆತಕ್ಕೆ ರಾಜಪಕ್ಸೆ ಸಿಕ್ಸ್ ಬಾರಿಸಿದರು. ಬಳಿಕ ಗುಣತಿಲಕ ಬೌಂಡರಿಯೊಂದಿಗೆ ಓವರ್ ಅನ್ನು ಕೊನೆಗೊಳಿಸಿದರು. 4 ಓವರ್‌ಗಳ ನಂತರ SL 18/3.
ವಿಕೆಟ್!
ನವೀನ್-ಉಲ್-ಹಕ್ ಎರಡನೇ ಓವರ್ ಬೌಲ್ ಮಾಡಿ ನಿಸ್ಸಾಂಕ ಅವರ ವಿಕೆಟ್ ಪಡೆದರು. ಗುರ್ಬಾಜ್ ವಿಕೆಟ್ ಹಿಂದೆ ಸುಲಭ ಕ್ಯಾಚ್ ಪಡೆದರು. ಶ್ರೀಲಂಕಾ ಈಗ ಸಂಕಷ್ಟದಲ್ಲಿದ್ದು 2 ಓವರ್‌ಗಳಲ್ಲಿ 5 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ.
ಕುಸಾಲ್- ಅಸಲಂಕಾ ಔಟ್
ನಿಸ್ಸಾಂಕಾ ಮತ್ತು ಕುಸಾಲ್ ಮೆಂಡಿಸ್ ಶ್ರೀಲಂಕಾ ಪರ ಇನ್ನಿಂಗ್ಸ್ ಆರಂಭಿಸಿದರು. ಅಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ ಮೊದಲ ಓವರ್ ಬೌಲ್ ಮಾಡಿದರು. ಶ್ರೀಲಂಕಾ ತನ್ನ ಮೊಸಲ ಓವರ್ನಲ್ಲೇ ಕುಸಾಲ್ ಮೆಂಡಿಸ್ ಹಾಗೂ ಅಸಲಂಕಾ ವಿಕೆಟ್ ಕಬಳಿಸುತ್ತಿದ್ದಂತೆ ಫಝಲ್ಹಕ್ ಫಾರೂಕಿ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. 1 ಓವರ್‌ನ ನಂತರ SL 3/2 ಆಗಿದೆ.
ಶ್ರೀಲಂಕಾ ಪ್ಲೇಯಿಂಗ್ XI
ದನುಷ್ಕ ಗುಣತಿಲಕ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ
ಅಫ್ಘಾನಿಸ್ತಾನ ಪ್ಲೇಯಿಂಗ್ XI
ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಕರೀಂ ಜನತ್, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ
ಟಾಸ್
ಅಫ್ಘಾನಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
Published On - Aug 27,2022 7:20 PM