Asia Cup 2022: ಏಷ್ಯಾಕಪ್ ಆರಂಭದಲ್ಲೇ ವಿವಾದ; ಥರ್ಡ್​ ಅಂಪೈರ್ ತೀರ್ಪಿಗೆ ಕಿಡಿಕಾರಿದ ಲಂಕಾ ತಂಡ! ವಿಡಿಯೋ

Asia Cup 2022: ದ್ಯಾವಳಿಯ ಆರಂಭದಲ್ಲಿಯೇ ದೊಡ್ಡ ವಿವಾದ ಹುಟ್ಟಿಕೊಂಡಿದೆ. ದುಬೈನಲ್ಲಿ ನಡೆದ ಈ ಶ್ರೀಲಂಕಾ-ಅಫ್ಘಾನಿಸ್ತಾನ ಪಂದ್ಯದ ಎರಡನೇ ಓವರ್‌ನಲ್ಲಿ ಅಂಪೈರ್ ನಿರ್ಧಾರದ ಬಗ್ಗೆ ಈ ವಿವಾದ ಎದಿದ್ದು, ಇದು ಇಡೀ ಶ್ರೀಲಂಕಾ ತಂಡವನ್ನು ಕೆರಳಿಸಿತು.

Asia Cup 2022: ಏಷ್ಯಾಕಪ್ ಆರಂಭದಲ್ಲೇ ವಿವಾದ; ಥರ್ಡ್​ ಅಂಪೈರ್ ತೀರ್ಪಿಗೆ ಕಿಡಿಕಾರಿದ ಲಂಕಾ ತಂಡ! ವಿಡಿಯೋ
Follow us
TV9 Web
| Updated By: ಪೃಥ್ವಿಶಂಕರ

Updated on:Aug 27, 2022 | 8:40 PM

ಹಲವು ವಾರಗಳ ಕಾಯುವಿಕೆಯ ನಂತರ, ಅಂತಿಮವಾಗಿ ಏಷ್ಯಾಕಪ್ 2022 (Asia Cup 2022) ಪ್ರಾರಂಭವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದೊಂದಿಗೆ ಟಿ20 ವಿಶ್ವಕಪ್ (T20 World Cup) ತಯಾರಿ ಪಂದ್ಯಾವಳಿ ಪ್ರಾರಂಭವಾಯಿತು, ಆದರೆ ಪಂದ್ಯಾವಳಿಯ ಆರಂಭದಲ್ಲಿಯೇ ದೊಡ್ಡ ವಿವಾದ ಹುಟ್ಟಿಕೊಂಡಿದೆ. ದುಬೈನಲ್ಲಿ ನಡೆದ ಈ ಶ್ರೀಲಂಕಾ-ಅಫ್ಘಾನಿಸ್ತಾನ (Sri Lanka-Afghanistan) ಪಂದ್ಯದ ಎರಡನೇ ಓವರ್‌ನಲ್ಲಿ ಅಂಪೈರ್ ನಿರ್ಧಾರದ ಬಗ್ಗೆ ಈ ವಿವಾದ ಎದಿದ್ದು, ಇದು ಇಡೀ ಶ್ರೀಲಂಕಾ ತಂಡವನ್ನು ಕೆರಳಿಸಿತು.

ಶನಿವಾರ ಆಗಸ್ಟ್ 27 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ಪಂದ್ಯಾವಳಿಯ ಮೊದಲ ಪಂದ್ಯ ಪ್ರಾರಂಭವಾಯಿತು. ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಎಡಗೈ ವೇಗದ ಬೌಲರ್ ಫಜ್ಲ್ಹಾಕ್ ಫಾರೂಕಿ ಐದು ಮತ್ತು ಆರನೇ ಎಸೆತದಲ್ಲಿ ಸತತ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಎಲ್‌ಬಿಡಬ್ಲ್ಯೂ ಮಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ನಂತರ ಬಂದ ಎರಡನೇ ಓವರ್​ನಲ್ಲೇ ಈ ವಿವಾದ ಉಂಟಾಯಿತು.

ವಿವಾದಿತ ತೀರ್ಪು

ಶ್ರೀಲಂಕಾದ ಬ್ಯಾಟ್ಸ್‌ಮನ್ ಪಾಥುಮ್ ನಿಸಂಕಾ ಈ ಓವರ್‌ನ ಕೊನೆಯ ಚೆಂಡನ್ನು ಕವರ್ಸ್​ ಮೇಲೆ ಆಡಲು ಪ್ರಯತ್ನಿಸಿದರು. ಆದರೆ ಆಡುವಲ್ಲಿ ವಿಫಲರಾದರು, ವಿಕೆಟ್ ಕೀಪರ್ ಚೆಂಡನ್ನು ಕ್ಯಾಚ್ ಮಾಡಿದರು. ಅಫ್ಘಾನಿಸ್ತಾನ ತಂಡ ಬಲವಾದ ಮನವಿಯನ್ನು ಮಾಡಿತು, ಆದರೆ ಅಂಪೈರ್ ಅದನ್ನು ಔಟ್ ನೀಡಲಿಲ್ಲ. ಬಳಿಕ ಅಫ್ಘಾನಿಸ್ತಾನ ಡಿಆರ್‌ಎಸ್‌ ತೆಗೆದುಕೊಂಡಿತು. ಆದರೆ ಥರ್ಡ್​ ಅಂಪೈರ್ ನೀಡಿದ ತೀರ್ಪು ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಮೂರನೇ ಅಂಪೈರ್ ಹಲವಾರು ಬಾರಿ ರಿವ್ಯೂ ವೀಕ್ಷಿಸಿದರು, ಬಳಿಕ ಸ್ನಿಕೋಮೀಟರ್‌ನ ಸಹಾಯವನ್ನು ತೆಗೆದುಕೊಂಡರು. ಆದರೆ ಸ್ನಿಕೋಮೀಟರ್‌ನಲ್ಲಿ ಬಾಲ್, ಬ್ಯಾಟಿಗೆ ತಾಗಿರುವ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.

ಆದರೆ ಚೆಂಡು ಬ್ಯಾಟ್‌ನ ಮೂಲಕ ಹಾದುಹೋಗುವಾಗ ಸ್ನಿಕೋಮೀಟರ್‌ನಲ್ಲಿ ಸ್ವಲ್ಪವೇ ಸ್ವಲ್ಪ ಚಲನೆ ಇತ್ತು. ಇದನ್ನು ನೋಡಿದವರೆಲ್ಲ ಇದು ನಾಟೌಟ್ ಅಂತಲೇ ಅಂದುಕೊಂಡಿದ್ದರು. ಆದರೆ ಮೂರನೇ ಅಂಪೈರ್ ಜಯರಾಮನ್ ಮದನಗೋಪಾಲ್ ಅದನ್ನು ಔಟ್ ಎಂದು ತೀರ್ಪು ನೀಡಿದರು.

ಮೈದಾನದಲ್ಲಿ ಇದನ್ನು ನೋಡಿದವರೆಲ್ಲ ಬೆಚ್ಚಿಬಿದ್ದರು. ಅಫ್ಘಾನಿಸ್ತಾನದ ಆಟಗಾರರು ಮತ್ತು ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ದರು. ಆದರೆ ಶ್ರೀಲಂಕಾದ ಕೋಚ್ ಕ್ರಿಸ್ ಸಿಲ್ವರ್‌ವುಡ್, ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಕೋಪದಿಂದ ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿದರು. ಡಗೌಟ್‌ನಲ್ಲಿ ಕುಳಿತಿದ್ದ ಶ್ರೀಲಂಕಾ ನಾಯಕ ದಸುನ್ ಶನಕಾ ಅವರ ಪ್ರತಿಕ್ರಿಯೆಯೂ ಭಿನ್ನವಾಗಿರಲಿಲ್ಲ, ಅವರೂ ಸಹ ಕೋಪಗೊಂಡವರಂತೆ ಕಾಣುತ್ತಿದ್ದರು.

Published On - 8:28 pm, Sat, 27 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್