AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Pakistan: ಏಷ್ಯಾಕಪ್​ನಲ್ಲಿಂದು ರಣ ರೋಚಕ ಕದನ: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ

Asia Cup 2022: ಏಷ್ಯಾಕಪ್​ನಲ್ಲಿಂದು ಇಂದು ಎರಡನೇ ಪಂದ್ಯ ನಡೆಯಲಿದ್ದು, ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ನಡುವೆ ಮುಖಾಮುಖಿ ಆಗಲಿದೆ.

India vs Pakistan: ಏಷ್ಯಾಕಪ್​ನಲ್ಲಿಂದು ರಣ ರೋಚಕ ಕದನ: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ
IND vs PAK Asia Cup 2022
TV9 Web
| Updated By: Vinay Bhat|

Updated on:Aug 28, 2022 | 7:47 AM

Share

ಹದಿನೈದನೆ ಆವೃತ್ತಿಯ ಏಷ್ಯಾಕಪ್ (Asia Cup 2022) ಟೂರ್ನಿಗೆ ಶನಿವಾರ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಬಗ್ಗು ಬಡಿದಿರುವ ಅಫ್ಘಾನಿಸ್ತಾನ (SL vs AFG) ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಇಂದು ಎರಡನೇ ಪಂದ್ಯ ನಡೆಯಲಿದ್ದು, ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ನಡುವೆ ಮುಖಾಮುಖಿ ಆಗಲಿದೆ. ಸ್ಟಾರ್ ಆಟಗಾರರಿಂದಲೇ ತುಂಬಿರುವ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಯಾವರೀತಿ ಇರಲಿದೆ ಎಂಬ ಕುತೂಹಲ ಕೂಡ ಇದೆ. ಈ ಬದ್ದವೈರಿಗಳ ಕಾದಾಟಕ್ಕೆ ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಾಕ್ಷಿಯಾಗಿದೆ.

ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನದೆದುರು ಸೋತಿತ್ತು. ಹೀಗಾಗಿ ಟೀಮ್ ಇಂಡಿಯಾಕ್ಕೆ ಇದೊಂದು ಸೇಡಿನ ಪಂದ್ಯ ಎಂದುಕೂಡ ಹೇಳಬಹುದು. ನಾಯಕ ರೋಹಿತ್‌ ಶರ್ಮಾ ಪೂರ್ಣ ಪ್ರಮಾಣದ ನಾಯಕನಾದ ಮೇಲೆ ದೊಡ್ಡ ಟೂರ್ನಿಯೊಂದನ್ನು ಮುನ್ನಡೆಸುತ್ತಿದ್ದು ಯಾವರೀತಿ ಆಟವಾಡುತ್ತಾರೆ ಎಂದು ನೋಡಬೇಕಿದೆ. ಇಂಜುರಿ ಬಳಿಕ ತಂಡ ಸೇರಿಕೊಂಡ ಕೆಎಲ್ ರಾಹುಲ್ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಸದ್ದು ಮಾಡಲಿಲ್ಲ. ಏಷ್ಯಾಕಪ್​ನಲ್ಲಿ ಇವರ ಮೇಲೆಕೂಡ ಸಾಕಷ್ಟು ನಂಬಿಕೆ ಇಡಲಾಗಿದೆ.

ಸಾಕಷ್ಟು ವಿಶ್ರಾಂತಿಯ ಬಳಿಕ ಭಾರತ ತಂಡ ಕೂಡಿಕೊಂಡಿರುವ ವಿರಾಟ್ ಕೊಹ್ಲಿಗೆ ಈ ಟೂರ್ನಿ ಮಹತ್ವದ್ದಾಗಿದೆ. ಈಗಾಗಲೇ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಕೊಹ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ಕೂಡ ನಿರತರಾಗಿದ್ದಾರೆ. ಉಳಿದಂತೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಕಾರ್ತಿಕ್, ಭುವನೇಶ್ವರ್, ಚಹಲ್​ಗೆ ಸ್ಥಾನ ಖಚಿತವಾಗಿದೆ.

ಇದನ್ನೂ ಓದಿ
Image
Breaking News: ಬರೋಬರಿ 24 ಸಾವಿರ ಕೋಟಿಗೆ ಐಸಿಸಿ ಮಾಧ್ಯಮ ಹಕ್ಕುಗಳನ್ನು ಖರೀದಿಸಿದ ಡಿಸ್ನಿ ಸ್ಟಾರ್..!
Image
Asia Cup 2022: ಏಷ್ಯಾಕಪ್ ಆರಂಭದಲ್ಲೇ ವಿವಾದ; ಥರ್ಡ್​ ಅಂಪೈರ್ ತೀರ್ಪಿಗೆ ಕಿಡಿಕಾರಿದ ಲಂಕಾ ತಂಡ! ವಿಡಿಯೋ
Image
IND vs PAK: ಓಪನರ್ ಯಾರು?; ಪಾಕ್ ಪತ್ರಕರ್ತನ ಪ್ರಶ್ನೆಗೆ ರೋಹಿತ್ ನೀಡಿದ ಉತ್ತರವೇನು ಗೊತ್ತಾ?
Image
Afghanistan Vs Sri Lanka, Match 1 Highlight: ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿದ ಅಫ್ಘಾನ್ ತಂಡಕ್ಕೆ ಸುಲಭ ಜಯ

ದುಬೈ ಪಾಕಿಸ್ತಾನಕ್ಕೆ ಎರಡನೇ ತವರಿದ್ದಂತೆ. ಇಲ್ಲಿನ ಕಂಡೀಷನ್ ಬಗ್ಗೆ ಬಾಬರ್ ಪಡೆ ಚೆನ್ನಾಗಿ ಅರಿತುಕೊಂಡಿದೆ. ಶಾಹೀನ್‌ ಅಫ್ರಿದಿ ಗೈರು ದೊಡ್ಡ ಹೊಡೆತವಾಗುತ್ತಾ ಎಂಬುದು ಪ್ರಶ್ನೆ. ನಾಯಕ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಮತ್ತು ಅನುಭವಿ ಬ್ಯಾಟ್ಸ್‌ಮನ್ ಫಖರ್ ಝಾಮಾನ್ ತಂಡದ ಪ್ರಮುಖ ಟ್ರೆಂಪ್ ಕಾರ್ಡ್. ಸ್ಪಿನ್ ಆಲ್‌ರೌಂಡರ್ ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಪವರ್ ಹಿಟ್ಟರ್ ಆಸಿಫ್ ಅಲಿ ಪಂದ್ಯವನ್ನು ಯಾವುದೇ ಸಂದರ್ಭದಲ್ಲಿ ಟರ್ನ್ ಮಾಡುವ ಆಟಗಾರರಾಗಿದ್ದಾರೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಸಮಯೋಜಿತವಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಲಾಭ ಪಡೆದುಕೊಳ್ಳಬಹುದಾಗಿದೆ. ಆದರೆ, ಈ ಪಿಚ್‌ನಲ್ಲಿ ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಬಹುಮುಖ್ಯ ಸಂಗತಿಯಾಗಿದೆ. ಪಂದ್ಯ ಸಾಗುತ್ತಿದ್ದಂತೆ ಬ್ಯಾಟಿಂಗ್ ಸ್ವಲ್ಪ ಸುಲಭವಾಗುತ್ತದೆ. ನಿಧಾನಗತಿಯ ಬೌಲರ್‌ಗಳು ಕೂಡ ಹೆಚ್ಚಿನ ಯಶಸ್ಸು ಸಾಧಿಸಿದ ಇತಿಹಾಸವಿದೆ. ಸ್ಪಿನ್ನರ್‌ಗಳ ದಾಳಿಯ ಮುಂದೆ ಬ್ಯಾಟರ್‌ಗಳು ಪರದಾಡುವುದು ಖಚಿತ.

ಇನ್ನು ಭಾರತ ಹಾಗೂ ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಪಂದ್ಯ ನಿರಾತಂಕವಾಗಿ ಸಾಗಲಿದೆ. ದಿನವಿಡೀ ಶುಭ್ರ ವಾತಾವರಣದಿಂದ ಕೂಡಿರಲಿದ್ದು ತಾಪಮಾನ 28-30 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ. ಇನ್ನು ಪಂದ್ಯದ ಆರಂಭದ ಬಳಿಕ ಗಾಳಿಯ ವೇಗದ ಪ್ರಮಾಣ ಕೂಡ ಕಡಿಮೆಯಾಗಲಿದೆ.

ಟಾಸ್ ಕೂಡ ಈ ಪಂದ್ಯದಲ್ಲಿ ಬಹುಮುಖ್ಯ ಪಾತ್ರವಹಿಸಲಿದ್ದು, ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಯಾಕೆಂದರೆ ಇಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚು ಗೆದ್ದ ಇತಿಹಾಸವಿದೆ. ಮೊದಲ ಇನ್ನಿಂಗ್ಸ್ ಸರಾಸರಿ 142 ರನ್ ಆದರೆ, ಎರಡನೇ ಇನ್ನಿಂಗ್ಸ್ ಸರಾಸರಿ 124 ಆಗಿದೆ. 211 ರನ್ ಗಳಿಸಿರುವುದು ಈ ಗ್ರೌಂಡ್​ನ ಗರಿಷ್ಠ ಸ್ಕೋರ್ ಆಗಿದೆ.

ಇಂಡೋಪಾಕ್ ಕದನ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:30ಕ್ಕೆ ಶುರುವಾಗಲಿದೆ. ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ (ಇಂಗ್ಲಿಷ್), ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ (ಹಿಂದಿ) ಚಾನೆಲ್‌ಗಳಲ್ಲಿ ಲಭ್ಯವಿರಲಿದೆ. ಇದರ ಜೊತೆಗೆ ದೂರದರ್ಶನದಲ್ಲೂ ನೇರಪ್ರಸಾರ ಕಾಣಲಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್​ ಸ್ಟ್ರೀಮ್ ವೀಕ್ಷಿಸಬಹುದು.

Published On - 7:47 am, Sun, 28 August 22

ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?