IND vs PAK: ಓಪನರ್ ಯಾರು?; ಪಾಕ್ ಪತ್ರಕರ್ತನ ಪ್ರಶ್ನೆಗೆ ರೋಹಿತ್ ನೀಡಿದ ಉತ್ತರವೇನು ಗೊತ್ತಾ?

Asia Cup 2022: ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ವಿಶ್ರಾಂತಿಯಲ್ಲಿದ್ದು, ಜಿಂಬಾಬ್ವೆ ಪ್ರವಾಸದಿಂದ ತಂಡಕ್ಕೆ ಮರಳಿದ್ದಾರೆ. ಮೂಲತಃ ರಾಹುಲ್ ಓಪನರ್ ಆಗಿದ್ದು, ಅವರು ಇಲ್ಲದಿದ್ದಾಗ ರೋಹಿತ್ ಬೇರೆ ಬೇರೆ ಆಟಗಾರರೊಂದಿಗೆ ಓಪನಿಂಗ್ ಮಾಡುತ್ತಿದ್ದರು.

IND vs PAK: ಓಪನರ್ ಯಾರು?; ಪಾಕ್ ಪತ್ರಕರ್ತನ ಪ್ರಶ್ನೆಗೆ ರೋಹಿತ್ ನೀಡಿದ ಉತ್ತರವೇನು ಗೊತ್ತಾ?
Follow us
TV9 Web
| Updated By: ಪೃಥ್ವಿಶಂಕರ

Updated on:Aug 27, 2022 | 8:19 PM

ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ (India and Pakistan) ತಂಡಗಳ ನಡುವೆ ಏಷ್ಯಾಕಪ್-2022 (Asia Cup-2022) ಪಂದ್ಯ ನಡೆಯಲಿದೆ. ಇಡೀ ವಿಶ್ವದ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿದೆ. ಈ ಪಂದ್ಯದಿಂದಲೇ ಉಭಯ ತಂಡಗಳು ತಮ್ಮ ಅಭಿಯಾನ ಆರಂಭಿಸಲಿವೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಟೀಮ್ ಮ್ಯಾನೇಜ್​ಮೆಂಟ್ ಯಾವ 11 ಆಟಗಾರರಿಗೆ ಅವಕಾಶ ನೀಡಲಿದೆ ಎಂಬುದು ಭಾರತೀಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಈ ಬಗ್ಗೆ ಪರಿಸ್ಥಿತಿ ತಿಳಿಗೊಳಿಸಿ ಆಡುವ-11ರ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಆಗಲಿಲ್ಲ.

ರೋಹಿತ್ ಪತ್ರಿಕಾಗೋಷ್ಠಿ ನಡೆಸಿದರು ಆದರೆ ಆಡುವ -11 ಬಗ್ಗೆ ಏನನ್ನೂ ಹೇಳಲಿಲ್ಲ. ಜೊತೆಗೆ ಇಲ್ಲಿಯವರೆಗೆ ತಂಡದ ಆಡಳಿತ ಮಂಡಳಿ ಇದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಏಷ್ಯಾಕಪ್ ಆಗಸ್ಟ್ 27 ರಿಂದ ಆರಂಭವಾಗಿದ್ದು, ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಶ್ರೀಲಂಕಾವನ್ನು ಎದುರಿಸಿದೆ. ಮರುದಿನ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಪ್ಲೇಯಿಂಗ್-11 ಬಗ್ಗೆ ರೋಹಿತ್ ಏನು ಹೇಳುತ್ತಾರೆಂದು ಪಾಕಿಸ್ತಾನವೂ ಕಾದು ಕುಳಿತಿತ್ತು, ಆದರೆ ಅವರಿಗೂ ನಿರಾಸೆಯಾಯಿತು. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.

ಟಾಸ್ ಮುಖ್ಯವಲ್ಲ

ರೋಹಿತ್‌ಗೆ ಆಡುವ ಹನ್ನೊಂದರ ಬಳಗದ ಬಗ್ಗೆ ಕೇಳಿದಾಗ, ನಾವು ಇನ್ನೂ ಆಡುವ ಹನ್ನೊಂದರ ಬಳಗದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇಂದಿನ ಪಂದ್ಯ (ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ) ನಡೆಯಲಿರುವ ಪಿಚ್‌ನಲ್ಲಿಯೇ ನಾಳೆಯ ಪಂದ್ಯವೂ ನಡೆಯಲಿದೆ. ಪಂದ್ಯ ಯಾವ ರೀತಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕು. ಇದರ ಆಧಾರದ ಮೇಲೆ, ನಾವು ನಮ್ಮ ತಂಡದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಪಿಚ್ ಕ್ಯುರೇಟರ್ ಜೊತೆ ಮಾತನಾಡಿದ್ದೇನೆ. ಟಾಸ್ ಹೆಚ್ಚು ಮುಖ್ಯವಲ್ಲ, ಇಲ್ಲಿ ಇಬ್ಬನಿ ಇರುವುದಿಲ್ಲ. ಆದರೆ ಇಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಹೇಗೆ ನಡೆಯಲಿದೆ ಎಂದು ನೋಡೋಣ. ಅದರ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಓಪನರ್ ಯಾರು?

ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ವಿಶ್ರಾಂತಿಯಲ್ಲಿದ್ದು, ಜಿಂಬಾಬ್ವೆ ಪ್ರವಾಸದಿಂದ ತಂಡಕ್ಕೆ ಮರಳಿದ್ದಾರೆ. ಮೂಲತಃ ರಾಹುಲ್ ಓಪನರ್ ಆಗಿದ್ದು, ಅವರು ಇಲ್ಲದಿದ್ದಾಗ ರೋಹಿತ್ ಬೇರೆ ಬೇರೆ ಆಟಗಾರರೊಂದಿಗೆ ಓಪನಿಂಗ್ ಮಾಡುತ್ತಿದ್ದರು. ದೀಪಕ್ ಹೂಡಾ ಕೂಡ ಓಪನಿಂಗ್ ಮಾಡಿದ್ದು, ಸೂರ್ಯಕುಮಾರ್ ಯಾದವ್ ಕೂಡ ಓಪನ್ ಮಾಡಿದರು. ಹೀಗಾಗಿ ಈ ಪಂದ್ಯಾವಳಿಯಲ್ಲಿ ಕೆಎಲ್ ರಾಹುಲ್ ಬಂದ ನಂತರ ಅವರು ಓಪನಿಂಗ್ ಮಾಡುತ್ತಾರೆಯೇ ಅಥವಾ ನಾಯಕನ ಜೊತೆ ಬೇರೆಯವರನ್ನು ನೋಡಬಹುದೇ ಎಂದು ರೋಹಿತ್ ಅವರನ್ನು ಪಾಕ್ ಪತ್ರಕರ್ತರು ಕೇಳಿದರು. ಈ ಬಗ್ಗೆ ಉತ್ತರಿಸಿದ ಹಿಟ್​ಮ್ಯಾನ್, ನಾಳೆ ಟಾಸ್ ನಂತರ ಯಾರು ಬರುತ್ತಾರೆ ಎಂದು ನೋಡೋಣ. ನಾವೂ ಕೂಡ ಸ್ವಲ್ಪ ರಹಸ್ಯವನ್ನು ಇಟ್ಟುಕೊಳ್ಳೋಣ ಎಂದಿದ್ದಾರೆ.

Published On - 8:19 pm, Sat, 27 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್