AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News: ಬರೋಬರಿ 24 ಸಾವಿರ ಕೋಟಿಗೆ ಐಸಿಸಿ ಮಾಧ್ಯಮ ಹಕ್ಕುಗಳನ್ನು ಖರೀದಿಸಿದ ಡಿಸ್ನಿ ಸ್ಟಾರ್..!

ICC Media Rights: ಮಾಹಿತಿ ಪ್ರಕಾರ ನಾಲ್ಕು ವರ್ಷಗಳ ಅವಧಿಗಾಗಿ ಸುಮಾರು 24 ಸಾವಿರ ಕೋಟಿಗೆ ಡಿಸ್ನಿ ಸ್ಟಾರ್ ಈ ಹಕ್ಕುಗಳನ್ನು ಖರೀದಿಸಿದ್ದು, ಈ ಮಾಧ್ಯಮ ಹಕ್ಕುಗಳು 2024 ರಿಂದ 2027 ರವರೆಗೆ ಮುಂದುವರಿಯುತ್ತದೆ. ಜೊತೆಗೆ ಈ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ನಡೆಯುವ ಎಲ್ಲಾ ಪಂದ್ಯಾವಳಿಗಳನ್ನು ಸಹ ಡಿಸ್ನಿ ಸ್ಟಾರ್ ಪ್ರಸಾರ ಮಾಡಲಿದೆ.

Breaking News: ಬರೋಬರಿ 24 ಸಾವಿರ ಕೋಟಿಗೆ ಐಸಿಸಿ ಮಾಧ್ಯಮ ಹಕ್ಕುಗಳನ್ನು ಖರೀದಿಸಿದ ಡಿಸ್ನಿ ಸ್ಟಾರ್..!
TV9 Web
| Updated By: ಪೃಥ್ವಿಶಂಕರ|

Updated on:Aug 27, 2022 | 9:35 PM

Share

ಐಪಿಎಲ್ (IPL) ಪ್ರಸಾರ ಹಕ್ಕುಗಳ ಮೆಗಾ ಬಿಡ್ ನಂತರ, ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ( International Cricket Council) ಮಾಧ್ಯಮ ಹಕ್ಕುಗಳಿಗಾಗಿ ಪ್ರಬಲ ಬಿಡ್ ಕೂಡ ನಡೆದಿದೆ. ICC ಟೂರ್ನಮೆಂಟ್‌ಗಳ ಪ್ರಸ್ತುತ ಪ್ರಸಾರಕರಾದ ಡಿಸ್ನಿ ಸ್ಟಾರ್ (Disney Star) ಮತ್ತೊಮ್ಮೆ ಈ ಹಕ್ಕುಗಳನ್ನು ಅತ್ಯಧಿಕ ಬಿಡ್‌ನೊಂದಿಗೆ ಖರೀದಿಸಿದೆ. ಮಾಹಿತಿ ಪ್ರಕಾರ ನಾಲ್ಕು ವರ್ಷಗಳ ಅವಧಿಗಾಗಿ ಸುಮಾರು 24 ಸಾವಿರ ಕೋಟಿಗೆ ಡಿಸ್ನಿ ಸ್ಟಾರ್ ಈ ಹಕ್ಕುಗಳನ್ನು ಖರೀದಿಸಿದ್ದು, ಈ ಮಾಧ್ಯಮ ಹಕ್ಕುಗಳು 2024 ರಿಂದ 2027 ರವರೆಗೆ ಮುಂದುವರಿಯುತ್ತದೆ. ಜೊತೆಗೆ ಈ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ನಡೆಯುವ ಎಲ್ಲಾ ಪಂದ್ಯಾವಳಿಗಳನ್ನು ಡಿಸ್ನಿ ಸ್ಟಾರ್ ಪ್ರಸಾರ ಮಾಡಲಿದೆ.

ಮಹಿಳಾ ಮತ್ತು ಪುರುಷರ ಪಂದ್ಯಾವಳಿಗಳ ಪ್ರಸಾರ

ಈ ಹಿಂದೆ ಹರಾಜು ಪ್ರಕ್ರಿಯೆ ನಡೆದಿದ್ದು, ಪ್ರಸಾರ ಹಕ್ಕು ವಿಜೇತರ ಬಗ್ಗೆ ಶನಿವಾರ ಐಸಿಸಿ ಮಾಹಿತಿ ನೀಡಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಡಿಸ್ನಿ ಸ್ಟಾರ್ ಮುಂದಿನ ನಾಲ್ಕು ವರ್ಷಗಳವರೆಗೆ ಭಾರತದಲ್ಲಿ ಎಲ್ಲಾ ಐಸಿಸಿ ಪಂದ್ಯಗಳನ್ನು ಪ್ರಸಾರ ಮಾಡುತ್ತದೆ. ಇದು ಪುರುಷರ ಮತ್ತು ಮಹಿಳೆಯರ ಐಸಿಸಿ ಪಂದ್ಯಾವಳಿಗಳ ಹಕ್ಕುಗಳನ್ನು ಒಳಗೊಂಡಿದೆ. ಅಲ್ಲದೆ, ಟಿವಿಯ ಹೊರತಾಗಿ ಡಿಜಿಟಲ್ ಹಕ್ಕುಗಳನ್ನು ಡಿಸ್ನಿ ಸ್ಟಾರ್ ಈ ಬಿಡ್ ಅಡಿಯಲ್ಲಿ ಖರೀದಿಸಿದೆ. ಅಂದರೆ, ಈಗ ಕಂಪನಿಯು 2027 ರ ಅಂತ್ಯದವರೆಗೆ ಪುರುಷರು ಮತ್ತು ಮಹಿಳೆಯರ ಎಲ್ಲಾ ICC ಪಂದ್ಯಾವಳಿಗಳನ್ನು ಪ್ರಸಾರ ಮಾಡುತ್ತದೆ.

ಸುಮಾರು 24 ಸಾವಿರ ಕೋಟಿ ಬಿಡ್

ಒಂದು ಸುತ್ತಿನ ಮೊಹರು ಮಾಡಿದ ಬಿಡ್ಡಿಂಗ್ ಪ್ರಕ್ರಿಯೆಯ ನಂತರ ಡಿಸ್ನಿ ಸ್ಟಾರ್ ಗೆದ್ದಿದೆ ಎಂದು ICC ಹೇಳಿದೆ. ಹಿಂದಿನ ವಿಲ್​ನಲ್ಲಿ ಮಾಧ್ಯಮ ಹಕ್ಕುಗಳಿಗಾಗಿ ಖರ್ಚು ಮಾಡಿದ ಮೊತ್ತಕ್ಕಿಂತ ಇದು ಗಣನೀಯ ಹೆಚ್ಚಳವಾಗಿದೆ. ಇದು ಕ್ರಿಕೆಟ್‌ನ ಜನಪ್ರಿಯತೆ ಮತ್ತು ವ್ಯಾಪ್ತಿಯ ಹೆಚ್ಚಳವನ್ನು ತೋರಿಸುತ್ತದೆ. ಐಸಿಸಿಯ ಹಿರಿಯ ಮಂಡಳಿಯ ಸದಸ್ಯರೊಬ್ಬರ ಹೇಳಿಕೆಯನ್ನು ಪಿಟಿಐ ವರದಿಯಲ್ಲಿ ಉಲ್ಲೇಖಿಸಿದ್ದು, ಅದರಲ್ಲಿ ಅವರು, ಮಾಹಿತಿ ಪ್ರಕಾರ ಡಿಸ್ನಿ ಸ್ಟಾರ್ ಈ ಹಕ್ಕುಗಳಿಗಾಗಿ ಸುಮಾರು ಮೂರು ಬಿಲಿಯನ್ ಡಾಲರ್ (ರೂ. 23,991 ಕೋಟಿ) ಪಾವತಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ ಮಾತನಾಡಿ, “ಮುಂದಿನ ನಾಲ್ಕು ವರ್ಷಗಳ ಕಾಲ ಐಸಿಸಿ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡಲು ಡಿಸ್ನಿ ಸ್ಟಾರ್‌ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಮುಂದುವರಿಸಲು ನಾವು ಸಂತೋಷಪಡುತ್ತೇವೆ. ಇದು ಹಿಂದೆ ನಮ್ಮ ಸದಸ್ಯರಿಗೆ ಅತ್ಯುತ್ತಮ ಫಲಿತಾಂಶವನ್ನು ನೀಡಿದೆ ಮತ್ತು ನಮ್ಮ ಮಹತ್ವಾಕಾಂಕ್ಷೆಯ ಬೆಳವಣಿಗೆಯ ಯೋಜನೆಗಳನ್ನು ಬೆಂಬಲಿಸುತ್ತಿದೆ ಎಂದಿದ್ದಾರೆ.

ಐಪಿಎಲ್ ನಂತರ ಮತ್ತೊಂದು ಯಶಸ್ಸು

ಇದರೊಂದಿಗೆ, ಡಿಸ್ನಿ ಸ್ಟಾರ್ ಎರಡೂವರೆ ತಿಂಗಳೊಳಗೆ ಎರಡು ಪ್ರಮುಖ ಮಾಧ್ಯಮ ಹಕ್ಕುಗಳನ್ನು ಗೆದ್ದಿದ್ದಾರೆ. ಹಿಂದಿನ ಜೂನ್‌ನಲ್ಲಿಯೂ ಕಂಪನಿಯು ಮುಂದಿನ ಐದು ವರ್ಷಗಳವರೆಗೆ ಐಪಿಎಲ್‌ನ ಟಿವಿ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿತ್ತು. ಇದಕ್ಕಾಗಿ ಕಂಪನಿ 23 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದೆ.

Published On - 9:11 pm, Sat, 27 August 22

ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ