AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ‘ಮೊದಲು ಮದುವೆಯಾಗು’; ರೋಹಿತ್ ಸಲಹೆಗೆ ಪಾಕ್ ನಾಯಕ ಹೇಳಿದ್ದೇನು ಗೊತ್ತಾ? ವಿಡಿಯೋ

IND vs PAK: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶನಿವಾರ ತನ್ನ ಟ್ವಿಟರ್ ಖಾತೆಯಲ್ಲಿ ಬಾಬರ್ ಮತ್ತು ರೋಹಿತ್ ಭೇಟಿಯ ಈ ವೀಡಿಯೊವನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಇಬ್ಬರ ನಡುವೆ ಸಾಕಷ್ಟು ಮಾತುಕತೆ ನಡೆದಿದ್ದು, ಇಬ್ಬರೂ ನಗುತ್ತಿರುವುದು ಕಂಡು ಬಂದಿದೆ.

IND vs PAK: ‘ಮೊದಲು ಮದುವೆಯಾಗು’; ರೋಹಿತ್ ಸಲಹೆಗೆ ಪಾಕ್ ನಾಯಕ ಹೇಳಿದ್ದೇನು ಗೊತ್ತಾ? ವಿಡಿಯೋ
Rohit-Babar
TV9 Web
| Edited By: |

Updated on:Aug 27, 2022 | 6:10 PM

Share

ಆಗಸ್ಟ್ 28 ರಂದು, ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ- ಪಾಕಿಸ್ತಾನ (India and Pakistan) ಮುಖಾಮುಖಿಯಾಗುತ್ತಿವೆ. ಏಷ್ಯಾಕಪ್ 2022 (Asia Cup 2022)ರಲ್ಲಿ, ಎರಡೂ ತಂಡಗಳು ತಮ್ಮ ಅಭಿಯಾನವನ್ನು ಈ ಮುಖಾಮುಖಿಯೊಂದಿಗೆ ಆರಂಭಿಸಿಲಿದ್ದು, ಎಲ್ಲರ ಕಣ್ಣುಗಳು ಈ ಹೈ-ವೋಲ್ಟೇಜ್ ಪಂದ್ಯದ ಮೇಲೆ ಇವೆ. ಆದಾಗ್ಯೂ, ಈ ಪಂದ್ಯಕ್ಕೂ ಮೊದಲು ಭಾರತ-ಪಾಕಿಸ್ತಾನ ಉಭಯ ತಂಡದ ಆಟಗಾರರು ಆಗಾಗ್ಗೆ ಪರಸ್ಪರ ಭೇಟಿಯಾಗಿ ಮಾತನಾಡಲಾರಂಭಿಸಿದ್ದಾರೆ. ಅಂತಹ ಒಂದು ಮೀಟಿಂಗ್ ಉಭಯ ತಂಡದ ಇಬ್ಬರು ನಾಯಕರಾದ ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ನಡುವೆ ನಡೆಯಿತು. ಈ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್, ಪಾಕ್ ನಾಯಕ ಬಾಬರ್​ಗೆ (Rohit Sharma and Babar Azam) ಕೆಲವು ಸಲಹೆಗಳನ್ನು ನೀಡಿದರು. ರೋಹಿತ್ ಸಲಹೆ ಕೇಳಿದ ಬಾಬರ್ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು.

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಎರಡೂ ತಂಡಗಳು ದುಬೈನಲ್ಲಿರುವ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿವೆ. ಎರಡೂ ತಂಡಗಳು ತಮ್ಮ ಅಭಿಮಾನಿಗಳನ್ನು ಭೇಟಿಯಾಗುವುದರೊಂದಿಗೆ, ಪರಸ್ಪರ ಭೇಟಿಯಾಗುತ್ತಿದ್ದಾರೆ. ಬಾಬರ್ ಆಜಂ ಮತ್ತು ವಿರಾಟ್ ಕೊಹ್ಲಿ ಭೇಟಿ ಆಗಲೇ ಹವಾ ಸೃಷ್ಟಿಸಿತ್ತು. ನಂತರ ವಿರಾಟ್ ಕೊಹ್ಲಿ, ಯುಜ್ವೇಂದ್ರ ಚಾಹಲ್ ಅವರಂತಹ ಆಟಗಾರರು ಶಾಹೀನ್ ಶಾ ಆಫ್ರಿದಿ ಅವರೊಂದಿಗೆ ಮಾತುಕತೆ ನಡೆಸಿದ್ದು ಸಾಕಷ್ಟು ಚರ್ಚೆಯನ್ನು ಸೃಷ್ಟಿಸಿತು. ಇದೀಗ ಉಭಯ ತಂಡಗಳ ನಾಯಕರ ಸಭೆ ಇದನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ದಿದೆ.

ಇದನ್ನೂ ಓದಿ
Image
IND vs PAK: ಮಾಸದ ಕಹಿ ನೆನಪು; 10 ವಿಕೆಟ್​ಗಳ ಸೋಲನ್ನು ಭಾರತಕ್ಕೆ ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ..!
Image
‘ಮಾನಸಿಕವಾಗಿ ನೊಂದಿದ್ದೆ, 1 ತಿಂಗಳಿಂದ ಬ್ಯಾಟ್ ಮುಟ್ಟಿರಲಿಲ್ಲ’; ಅಂತರಾಳದ ತುಮುಲಗಳನ್ನು ಹೊರಹಾಕಿದ ಕೊಹ್ಲಿ
Image
Asia Cup: ಹಾರ್ದಿಕ್- ಜಡೇಜಾ ದಾಳಿಗೆ ಹೀನಾಯವಾಗಿ ಮಂಡಿಯೂರಿತ್ತು ಪಾಕಿಸ್ತಾನ..!

ಮದುವೆಯಾಗುವಂತೆ ಸಲಹೆ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶನಿವಾರ ತನ್ನ ಟ್ವಿಟರ್ ಖಾತೆಯಲ್ಲಿ ಬಾಬರ್ ಮತ್ತು ರೋಹಿತ್ ಭೇಟಿಯ ಈ ವೀಡಿಯೊವನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಇಬ್ಬರ ನಡುವೆ ಸಾಕಷ್ಟು ಮಾತುಕತೆ ನಡೆದಿದ್ದು, ಇಬ್ಬರೂ ನಗುತ್ತಿರುವುದು ಕಂಡು ಬಂದಿದೆ. ಈ ನಗು ಮತ್ತು ಮಾತಿನ ಮಧ್ಯೆ ರೋಹಿತ್, ಪಾಕಿಸ್ತಾನದ ನಾಯಕನಿಗೆ ಮದುವೆಯಾಗುವಂತೆ ಸಲಹೆ ನೀಡಿದ್ದಾರೆ. ಇದನ್ನು ಕೇಳಿಸಿಕೊಂಡ ಬಾಬರ್ ನಾಚಿಕೆಯಿಂದ ನಕ್ಕು, ಸದ್ಯಕ್ಕೆ ಆ ರೀತಿಯ ಯಾವುದೇ ಯೋಚನೆಗಳಿಲ್ಲ ಎಂದಿದ್ದಾರೆ.

ಭಾನುವಾರದ ಪಂದ್ಯದ ಮೇಲೆ ಕಣ್ಣು

ನಿಸ್ಸಂಶಯವಾಗಿ, ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನದ ಆಟಗಾರರ ಇಂತಹ ಸಭೆಗಳು ಮತ್ತು ತಮಾಷೆಯ ಲಘು ಮಾತುಗಳನ್ನು ಇಷ್ಟಪಡುತ್ತಿದ್ದಾರೆ. ಆದರೆ ಈಗ ಎರಡೂ ತಂಡದ ಆಟಗಾರರ ಕಣ್ಣುಗಳು ಭಾನುವಾರದ ಪಂದ್ಯದ ಮೇಲೆ ಸ್ಥಿರವಾಗಿರುತ್ತವೆ. ದುಬೈ ಮೈದಾನದಲ್ಲಿಯೇ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲನ್ನು ತೀರಿಸುವತ್ತ ಭಾರತ ತಂಡದ ಕಣ್ಣು ನೆಟ್ಟಿದೆ. ಅಲ್ಲದೆ, ಪಾಕ್ ನಾಯಕ ಬಾಬರ್ ಕೂಡ ಹಿಂದಿನ ಗೆಲುವನ್ನು ಮತ್ತೆ ಮರುಕಳಿಸುವಂತೆ ಮಾಡಲು ಯತ್ನಿಸಲಿದ್ದಾರೆ.

Published On - 6:10 pm, Sat, 27 August 22

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು